Home / ಸುದ್ದಿಗಳು / ನೂರು ಕವಿಗಳು ಏಕಕಾಲಕ್ಕೆ Facebook live ನೀಡುವ ಮೂಲಕ ಹೊಸ ದಾಖಲೆ

ನೂರು ಕವಿಗಳು ಏಕಕಾಲಕ್ಕೆ Facebook live ನೀಡುವ ಮೂಲಕ ಹೊಸ ದಾಖಲೆ

“ಫೇಸ್‌ಬುಕ್‌ ನಲ್ಲಿ ಅಡಿಗರಿಗೊಂದು ವಿಶಿಷ್ಟ ಕಾವ್ಯನಮನ” ಸಾಮಾಜಿಕ ಜಾಲತಾಣ Faceboo live ಮೂಲಕ ಹೊಸದೊಂದು ಕಾವ್ಯಪ್ರಯೋಗಕ್ಕೆ ನಿನ್ನೆ ಸಾಕ್ಷಿಯಾಯಿತು.

ಕನ್ನಡ ಸಾಹಿತ್ಯ ದಿಗ್ಗಜ ಎಂ.ಗೋಪಾಲಕೃಷ್ಣ ಅಡಿಗರು ಜನ್ಮತಳೆದು ಇದೇ ವರ್ಷದ ಫೆಬ್ರುವರಿ 18 ನೇ ತಾರೀಖಿಗೆ 100 ವರ್ಷಗಳು ಆಗಿವೆ. ಈ ಸಂದರ್ಭದಲ್ಲಿ ಯುವಸಾಹಿತಿಗಳು ಅಡಿಗರಿಗೊಂದು ಕಾವ್ಯನಮನ ಕಾರ್ಯಕ್ರಮ ಆಯೋಜಿಸಿದ್ದು ಯಾವುದೇ ಸಭಾಂಗಣದಲ್ಲಲ್ಲ, ವೇದಿಕೆಯಲ್ಲಲ್ಲ, ಬದಲಾಗಿ ಫೇಸ್‌ಬುಕ್‌ ನಲ್ಲಿ.

‘ನೂರು ಅಡಿ, ನೂರು ಮಡಿ’ ಎಂಬ ಹೆಸರಿನಡಿ ಕೆಲದಿನಗಳ‌ ಹಿಂದೆ ಹಿರಿಕಿರಿಯ ಸಾಹಿತಿಗಳನ್ನು ಒಂದೆಡೆ ಕೂಡಿಸಿ ವಾಟ್ಸಪ್ ಗುಂಪೊಂದನ್ನು ಮಾಡಿದ್ದ ಆಯೋಜಕರು ಅದರಲ್ಲಿ ಈ ಕಾರ್ಯಕ್ರಮದ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿದ್ದರು. ಅದರಂತೆ ಭಾನುವಾರ ಸಂಜೆ 8 ಗಂಟೆಗೆ ನೂರು ಜನ ಕವಿಗಳು ತಾವಿರುವೆಡೆಯಲ್ಲಿಂದಲೇ ಫೇಸ್‌ಬುಕ್‌ ಲೈವ್ ನಲ್ಲಿ ಬಂದು ಗೋಪಾಲಕೃಷ್ಣ ಅಡಿಗರ ಒಂದೊಂದು ಕವಿತೆಯನ್ನು ವಾಚನ ಮಾಡುವ ಮೂಲಕ ಅಡಿಗರ ಜನ್ಮಶತಮಾನೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿ ಅಡಿಗರಿಗೆ ‘ಕಾವ್ಯನಮನ’ ಸಲ್ಲಿಸಿದ್ದಾರೆ.

ಕವಿಗಳು ಫೇಸ್‌ಬುಕ್‌ ನಲ್ಲಿ ಲೈವ್ ಗೆ ಬಂದು ಕವಿತೆಯನ್ನು ವಾಚಿಸುವ ಸಂದರ್ಭದಲ್ಲಿ ‘ನೂರು ಅಡಿ, ನೂರು ಮಡಿ’ ಅಡಿಗ100 ಎಂಬ ಶೀರ್ಷಿಕೆಯನ್ನು ಹ್ಯಾಷ್ ಟ್ಯಾಗ್ ಜೊತೆಗೆ ಪ್ರತಿಯೊಬ್ಬರೂ ಬಳಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಅಡಿಗರ ಜನಪ್ರಿಯ ಕವಿತೆಗಳಾದ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’, ‘ಶ್ರೀರಾಮನವಮಿ’, ‘ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ’, ‘ಬರುತ್ತಾರೆ’, ‘ನನ್ನ ಅವತಾರ’, ‘ಒಂದು ಸಂಜೆ’, ‘ಹೇಳಬೇಕಾದದ್ದು’, ‘ನನ್ನ ನುಡಿ’, ‘ಮೌನದ ಸುವರ್ಣ ಪುತ್ಥಳಿ ನೀನು’ ಮುಂತಾದವುಗಳನ್ನು ನಾಡಿನ ಮೂಲೆ ಮೂಲೆಗಳಿಂದ ಕವಿಗಳು, ಕವಯತ್ರಿಯರು ವಾಚನ ಮಾಡಿದರು. ಈ ವಿಶಿಷ್ಟ ಕಾವ್ಯನಮನ ಕಾರ್ಯಕ್ರಮ ಆಯೋಜನೆ ಮಾಡಿದ್ದು ಯುವಸಾಹಿತಿಗಳಾದ ಶಿವಪ್ರಸಾದ್ ಪಟ್ಟಣಗೆರೆ, ಮಹಾಂತೇಶ್ ಆಧುನಿಕ್, ಶಂಕರ್ ಸಿಹಿಮೊಗೆ ಮತ್ತು ಮಿತ್ರರು. ಒಟ್ಟಿನಲ್ಲಿ ಬದಲಾದ ಕಾಲದ ಅಂತರ್ಜಾಲ ಪ್ರಪಂಚದ ಆಂಡ್ರೋಯ್ಡ್ ಮೊಬೈಲ್ ಯುಗದ ದಿನಗಳಲ್ಲಿ ಕವಿಯೊಬ್ಬರ ಜನ್ಮಶತಮಾನೋತ್ಸವಕ್ಕೆ ಫೇಸ್‌ಬುಕ್‌ ನಲ್ಲಿ ಕಾವ್ಯನಮನ ಸಲ್ಲಿಸಿದ್ದು ಇದೇ ಮೊದಲಾಯಿತು.

ವಿಡಿಯೋ ನೋಡಿ:

Share this post
0Shares

Check Also

ಕೇಜ್ರಿವಾಲ್ ರ ಭೇಟಿಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ನಿರಾಕರಣೆ!

ಸುದ್ದಿವಾಹಿನಿ ಡಾಟ್ ಕಾಂ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾಗಲು ದಿಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್ ರವರು ಅನುಮತಿ …

Leave a Reply

Your email address will not be published.

Blue Waves Media