Home / ಕ್ರೀಡೆ / ಟೀಂ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳ ಬಗ್ಗೆ ಅಮೀರ್ ಖಾನ್ ಸಿಡಿಮಿಡಿಗೊಳ್ಳುವುದು ಏಕೆ?

ಟೀಂ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳ ಬಗ್ಗೆ ಅಮೀರ್ ಖಾನ್ ಸಿಡಿಮಿಡಿಗೊಳ್ಳುವುದು ಏಕೆ?

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೆ ಖ್ಯಾತರಾಗಿರುವ ಆಮಿರ್ ಖಾನ್ ಅಪರೂಪಕ್ಕೊಮ್ಮೆ ಚಿತ್ರಗಳನ್ನು ಮಾಡಿದರೂ ಕೂಡಾ ಪ್ರತಿ ಸಲವೂ ವಿಭಿನ್ನವಾದ ಚಿತ್ರದೊಂದಿಗೆ ಗಲ್ಲಾ ಪೆಟ್ಟಿಗೆಯನ್ನು ಚಿಂದಿ ಉಡಾಯಿಸುವುದರಲ್ಲಿ ಎರಡು ಮಾತಿಲ್ಲ.

ಈ ಬಾರಿಯೂ ಕೂಡಾ  ತನ್ನ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದ ಪ್ರಮೋಶನ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡದ  ನಾಯಕ ವಿರಾಟ್ ಕೊಹ್ಲಿ ಜೊತೆ ಚಿಟ್ ಚಾಟ್ ಮಾಡುತ್ತಾ ಕೆಲವೊಂದು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈವರೆಗೆ ತನ್ನ ಯಾವುದೇ ಚಿತ್ರದ ಪ್ರಮೋಶನ್ ಗಾಗಿ ಅಥವ ಯಾವುದೇ ವೇದಿಕೆಯ ಮೇಲೆ ಡ್ಯಾನ್ಸ್ ಮಾಡದ ಅಮೀರ್ ಖಾನ್ ಈ ಬಾರಿ ಕೊಹ್ಲಿ ಜತೆ ಪ್ರಥಮ ಬಾರಿ ಡ್ಯಾನ್ಸ್ ಮಾಡಿದ್ದಾರೆ.

ಅಮೀರ್ ಖಾನ್ ಬಿಚ್ಚಿಟ್ಟ ಕೆಲವು ವಿಚಾರಗಳು:
ರೂಬಿಕ್ಯೂ ಆಟದ ಗೋಜಲನ್ನು ತನ್ನ ಕಾಲೇಜು ಕಾಲದಲ್ಲಿ ಕೇವಲ 28 ಸೆಕೆಂಡುಗಳಲ್ಲಿ ಬಗೆಹರಿಸುತ್ತಿದ್ದರು. ವಿರಾಟ್ ಕೊಹ್ಲಿ 11 ಕ್ಲಾಸ್ ಪಾಸ್ ಮಾಡಿದ್ದರೆ, ಅಮೀರ್ ಖಾನ್ 12ನೇ ತರಗತಿವರೆಗೆ ಮಾತ್ರ ಕಲಿತಿದ್ದಾರೆ.
ಟಿಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ, ಟೀಂ ಇಂಡಿಯಾ ಜಯಿಸಿದಾಗ ಎಲ್ಲರೂ ಸಂಭ್ರಮಿಸುತ್ತಾರೆ. ಪಟಾಕಿ ಸಿಡಿಸುತ್ತಾರೆ. ಧ್ವಜಗಳನ್ನು ಹಾರಾಡಿಸುತ್ತಾರೆ. ಆದರೆ ಟೀಂ ಇಂಡಿಯಾ ಸೋತಾಗ, ಬೈಯ್ಯಲು ಆರಂಭಿಸುತ್ತಾರೆ. ವಿವಿಧ ರೀತಿಯ ಟೀಕೆಗಳನ್ನು ಮಾಡುತ್ತಾರೆ. ಇದರಿಂದ ತುಂಬಾ ಸಿಡಿಮಿಡಿಗೊಳ್ಳುತ್ತೇನೆ. ನಿಜವಾಗಿಯು ನಾವು ಟೀಂ ಇಂಡಿಯಾದ ಅಭಿಮಾನಿಗಳಾಗಿದ್ದರೆ, ತಂಡದ ಸೋತಾಗ ಅವರ ಜತೆಗೆ ನಿಂತು ತಂಡ ಆಟಗಾರ ಮನೋಬಲವನ್ನು ಹೆಚ್ಚಿಸಬೇಕಾಗಿದೆ. ಟೀಕೆ ಮಾಡುವ ಬದಲು ಸೋತಾಗಲೂ ತಂಡದೊಂದಿಗೆ ಉತ್ತಮವಾಗಿ ವ್ಯವಹರಿಸಬೇಕಿದೆ. ಏಕೆಂದರೆ ಕ್ರಿಕೆಟ್  ಒಂದು ಆಟವಾಗಿದೆ.ಅದನ್ನು ಕ್ರೀಡಾಸ್ಪೂರ್ತಿಯಿಂದ ನೋಡಬೇಕು. ಸೋಲು-ಗೆಲುವು ಆಟದ ಒಂದು ಭಾಗವಾಗಿದೆ ಎಂಬ ಸಲಹೆ ನೀಡಿದ್ದಾರೆ.

Share this post
0Shares

Check Also

ಡೆಲ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗಾಂಭೀರ್!

ಸುದ್ದಿವಾಹಿನಿ ಡಾಟ್ ಕಾಂ: ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಎರಡು ಪಂದ್ಯಗಳು ಬಾಕಿ ಇರುವಂತೆಯೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ …

Leave a Reply

Your email address will not be published.

Blue Waves Media