Home / ವೈರಲ್ / ವ್ಯಾಲೆಂಟೈನ್ಸ್ ಡೇ: ಕರಾವಳಿಯ ಸಮುದ್ರದ ಅಡಿಯಲ್ಲಿ ಪ್ರೀತಿ ವಿನಿಮಯಿಸಿಕೊಂಡ ಜೋಡಿ

ವ್ಯಾಲೆಂಟೈನ್ಸ್ ಡೇ: ಕರಾವಳಿಯ ಸಮುದ್ರದ ಅಡಿಯಲ್ಲಿ ಪ್ರೀತಿ ವಿನಿಮಯಿಸಿಕೊಂಡ ಜೋಡಿ

ಸುದ್ದಿವಾಹಿನಿ ಡಾಟ್ ಕಾಂ-ಕಾರವಾರ: ಮುರುಡೇಶ್ವರ ಕರಾವಳಿಯ ಸಮುದ್ರದ ಅಡಿಯಲ್ಲಿ ಪ್ರೀತಿ ವಿನಿಮಯಿಸಿಕೊಂಡು ವಾರ್ಷಿಕೋತ್ಸವ ಆಚರಿಸಿದ ಜೋಡಿಯೊಂದು ಭಾರಿ ಸುದ್ದಿಯಲ್ಲಿದೆ.

ಮದುವೆಯಾದ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಸದಾ ನೆನಪಿನಲ್ಲಿಡಲು ಒಂದಲ್ಲ ಒಂದು ವಿಶಿಷ್ಟ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ನವನವೀನ ಐಡಿಯಾಗಳನ್ನು ಪ್ರಯತ್ನಿಸುತ್ತಾರೆ. ಇದೇ ರೀತಿಯಲ್ಲಿ ಮುರುಡೇಶ್ವರದಲ್ಲೊಂದು ಜೋಡಿಯು ವಿಶಿಷ್ಟವಾಗಿ ಕಡಲ ಅಡಿಯಲ್ಲಿ ತಮ್ಮ ಪ್ರಥಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದೆ.

ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯು ಪ್ರೇಮಿಗಳ ದಿನಾಚರಣೆಯ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಪ್ರೇಮಿಗಳಿಗಾಗಿ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ವಿಶೇಷವಾಗಿ ಸ್ಕೂಬಾ ಡೈವಿಂಗ್ ಅನ್ನು ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಮುರುಡೇಶ್ವರಕ್ಕೆ ಆಗಮಿಸಿದ್ದ ಸಂದೀಪ್ ಹಾಗೂ ಲಾವಣ್ಯ ದಂಪತಿಗಳು ತಮ್ಮ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರದಾಳದಲ್ಲಿ ಆಚರಿಸಿಕೊಂಡರು. ಸಮುದ್ರದಳಾದ ಜೀವಿ ಪ್ರಪಂಚಗಳನ್ನು ಕಣ್ತುಂಬಿಕೊಂಡ ಈ ಜೋಡಿಯು, ಅಲ್ಲೇ ತಮ್ಮ ಮದುವೆಯ ದಿನದ ಮೆಲುಕು ಹಾಕಿದರು. ಒಬ್ಬರಿಗೊಬ್ಬರು ಸಮುದ್ರದೊಳಗೆ ಗುಲಾಬಿಯ ಗುಚ್ಛ ಹಿಡಿದು ತಮ್ಮ ಪ್ರೀತಿಯ ನಿವೇದನೆ ಮಾಡಿಕೊಂಡರು. ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ನುರಿತ ಸ್ಕೂಬಾ ಡೈವರ್ಸ್ ಗಳು ಈ ಜೋಡಿಯನ್ನು ಸಮುದ್ರದಾಳಕ್ಕೆ‌ ಕರೆದೊಯ್ದಿದ್ದರು.
ಪ್ರೇಮಿಗಳಿಗಾಗಿ ರಿಯಾಯಿತಿ ದರದಲ್ಲಿ, ಉಚಿತ ವಸತಿ ಸೌಲಭ್ಯದೊಂದಿಗೆ ಫೆ.18ರವರೆಗೆ ಈ ವಿಶೇಷ ಅವಕಾಶವನ್ನು ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆ ಕಲ್ಪಿಸಿದೆ.

ವರದಿ: ದೇವರಾಜ ನಾಯ್ಕ

Share this post
0Shares

Check Also

ಜನರ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡಿದ ಎನ್.ಮಹೇಶ್ ಗೆ ತೇಜೋವಧೆಯ ಶಿಕ್ಷೆ 

ಸುದ್ದಿವಾಹಿನಿ ಡಾಟ್ ಕಾಂ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎನ್.ಮಹೇಶ್ ಅವರ ತತ್ವ, ಸಿದ್ಧಾಂತ, ಆದರ್ಶಗಳನ್ನು ಪ್ರಶ್ನಿಸಲಾಗುತ್ತಿದೆ. ಇವೆಲ್ಲ ಆರಂಭವಾಗಿರುವುದು …

Leave a Reply

Your email address will not be published.

Blue Waves Media