Home / ಕ್ರೀಡೆ / ಬಾಹುಬಲಿ ನಾಯಕಿ ಅನುಷ್ಕಾ ಶೆಟ್ಟಿಗೆ ಲವ್ ಆಗಿದೆಯಂತೆ! ಧೋನಿ, ರೋಹಿತ್, ಶಿಖರ್ ಅಲ್ಲ

ಬಾಹುಬಲಿ ನಾಯಕಿ ಅನುಷ್ಕಾ ಶೆಟ್ಟಿಗೆ ಲವ್ ಆಗಿದೆಯಂತೆ! ಧೋನಿ, ರೋಹಿತ್, ಶಿಖರ್ ಅಲ್ಲ

ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಬಾಹುಬಲಿ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಇದರಲ್ಲಿ ಬಳಸಿದ್ದ ಗ್ರಾಫಿಕ್ ಎಫೆಕ್ಟ್ಸ್ ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು. ಈ ಚಿತ್ರವು ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗಿತ್ತು. ಈ ಚಿತ್ರದ ನಟರೊಬ್ಬರು (ಕಟ್ಟಪ್ಪ ಪಾತ್ರಧಾರಿ) ಕನ್ನಡದ ಬಗ್ಗೆ ವಿವಾದಾತ್ಮ ಹೇಳಿಕೆ ನೀಡಿದ ಕಾರಣ ಬಹಿರಂಗ ಕ್ಷಮೆಯಾಚಿಸಬೇಕೆಂದು ಕನ್ನಡ ಅಭಿಮಾನಿಗಳು ಪಟ್ಟು ಹಿಡಿದದ್ದು ಸುದ್ದಿಯಾಗಿತ್ತು.

ಇದೀಗ ಈ ಚಿತ್ರದ ಕಥಾ ನಾಯಕಿ ಅನುಷ್ಕಾ ಶೆಟ್ಟಿಯವರು ತನ್ನ ಕ್ರಶ್ ಬಗ್ಗೆ ಬಹಿರಂಗ ಪಡಿಸಿದಾಗ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ತೆಲುಗು ಮನೋರಂಜನಾ ಸುದ್ದಿಮಾಧ್ಯಮದ ಸಂದರ್ಶನದಲ್ಲಿ ತಮ್ಮ ಪ್ರೀತಿಯ ಬಗ್ಗೆ ಕೇಳಿದಾಗ, ಕ್ರಿಕೆಟ್ ಜಗತ್ತಿನ “ದಿ ವಾಲ್” ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಎಂದಾಗ ಎಲ್ಲರು ಹುಬ್ಬೇರಿದ್ದರು. ತಾವು ತಪ್ಪಾಗಿ ಕೇಳಿಸಿಕೊಂಡಿರ ಬಹುದೆಂದು ಸಂದರ್ಶಕರು ಮತ್ತೆ ಮತ್ತೆ ಕೇಳಿ ಧೃಡಪಡಿಸಿಕೊಂಡಿದ್ದರು. “ರಾಹುನ ದ್ರಾವಿಡ್ ನನ್ನ ಫೇವರಿಟ್ ಕ್ರಿಕೆಟಿಗ. ನಾನು ಬೆಳೆಯುತ್ತಿರುವಾಗಲೇ ಆತನ ಮೇಲೆ ಕ್ರಶ್ ಆಗಿತ್ತು” ಎಂದು ಹೇಳಿದ್ದಾರೆ. ಯಾರಾದರೂ ಯುವ ಕ್ರಿಕೆಟಿಗ ಹೆಸರು ಹೇಳಿದ್ದರೆ ಇಷ್ಟು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಅದಾಗಲೇ ಕ್ರಿಕೆಟ್ ಜೀವನದಿಂದ ನಿವೃತ್ತಿಯಾಗಿ, ಮಡದಿ ಮಕ್ಕಳನ್ನು ಹೊಂದಿರುವ ದ್ರಾವಿಡ್ ರನ್ನೇ ಪ್ರೀತಿಸುತ್ತಿದ್ದೇನೆ ಎಂದು ಹೇಳಿರುವುದು ಅಚ್ಚರಿ ಹುಟ್ಟಿಸಿದೆ.

ಅನುಷ್ಕಾ ಶರ್ಮಾ ಕೊಹ್ಲಿ ಜೊತೆ, ಝಹೀರ್ ಖಾನ್ ಸಾಗರಿಕಾ ಜೊತೆಗಿನ ಲವ್ವಿ ಡವ್ವಿ ಜಗಜ್ಜಾಹಿರಾಗಿರುವ ನಂತರ ಈ ಸುದ್ದಿಯು ಚಿತ್ರರಂಗ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ ಬಿಸಿ ಮಸಾಲೆ ದೋಸೆಯಂತಾಗಿದೆ.

Share this post
0Shares

Check Also

ಡೆಲ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗಾಂಭೀರ್!

ಸುದ್ದಿವಾಹಿನಿ ಡಾಟ್ ಕಾಂ: ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಎರಡು ಪಂದ್ಯಗಳು ಬಾಕಿ ಇರುವಂತೆಯೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ …

Leave a Reply

Your email address will not be published.

Blue Waves Media