Home / ಸುದ್ದಿಗಳು / ರೇಪ್ & ಮರ್ಡರ್ ಆದ ಆಸಿಫಾ ಪೋಷಕರಿಂದ ಸಮಾಜಕ್ಕೆ ನೀಡಿದ ಮಾದರಿ ಸಂದೇಶ

ರೇಪ್ & ಮರ್ಡರ್ ಆದ ಆಸಿಫಾ ಪೋಷಕರಿಂದ ಸಮಾಜಕ್ಕೆ ನೀಡಿದ ಮಾದರಿ ಸಂದೇಶ

ಸುದ್ದಿವಾಹಿನಿ ಡಾಟ್ ಕಾಂ: ಕಾಶ್ಮೀರದಲ್ಲಿ ಅಮಾನುಷವಾಗಿ ಗ್ಯಾಂಗ್ ರೇಪ್ ಗೆ ಒಳಗಾಗಿ ಕೊಲೆಗೈಯ್ಯಲ್ಪಟ್ಟ ಎಂಟು ವರ್ಷ ಪ್ರಾಯದ ಬಾಲಕಿ ಆಸಿಫಾಳನ್ನು ಕಳಕೊಂಡು ಗ್ರಾಮ ತೊರೆದಿರುವ ಆಸಿಫಾ ಪೊಷಕರು ಸಮಾಜಕ್ಕೊಂದು ಮಾದರಿ ಸಂದೇಶ ನಿಡಿದ್ದಾರೆ.

ತಮ್ಮ ಮನೆಯ ಕುಸುಮವೊಂದನ್ನು ಕಳಕೊಂಡು ದಿಕ್ಕು ತೋಚದಂತಾಗಿರುವ ಆಸಿಫಾಳ ಮಾವ “ಟೈಮ್ಸ್ ನೌ” ಸುದ್ದಿವಾಹಿನಿಗೆ ನೀಡಿರುವ ಸಂದೇಶದಲ್ಲಿ “ಮಗುವನ್ನು ಮಗುವಿನಂತೆ ಕಾಣಿರಿ. ಇದರಲ್ಲಿ ಹಿಂದು, ಮುಸ್ಲಿಂ ಸಿಖ್ ಎಂಬ ಭೇದಭಾವ ಮಾಡಬೇಡಿ” ಎಂಬ ಸಂದೇಶ ನೀಡಿದ್ದಾರೆ.

ಇದೇ ವೇಳೆ ಆಸಿಫಾಳ ತಾಯಿ ಹಾಗೂ ಆಕೆಯ ಸಹೋದರಿಯರು ಪ್ರತಿಕ್ರಿಯಿಸುತ್ತಾ “ಎಂಟು ವರ್ಷ ಪ್ರಾಯದ ಮಗುವೊಂದು ಅವರಿಗೆ ಮಾಡಿರುವ ತಪ್ಪಾದರೂ ಏನು? ಅವರು ನನ್ನ ಹೂವಿನಂತಹ ಮಗಳನ್ನು ಕೊಂದು ಹಾಕಿದ್ದಾರೆ ಹಾಗಾಗಿ ಅವಳ ಅತ್ಯಾಚಾರಿ ಕೊಲೆಗಡುಕರಿಗೆ ಗಲ್ಲು ಶಿಕ್ಷೆಯಾದರೆ ಮಾತ್ರ ಆಕೆಯ ಆತ್ಮಕ್ಕೆ ಶಾಂತಿ ಸಿಗುತ್ತದೆ” ಎಂದು ಕಣ್ಣೀರಿಟ್ಟಿದ್ದಾರೆ.

ಆಸಿಫಾಳ ತಂದೆ ಈ ಬಗ್ಗೆ ಪ್ರತಿಕ್ರಿಯಿಸುತ್ತಾ “ನಾವು ಸತತ ನಾಲ್ಕು ದಿನಗಳಿಂದ ಮಗಳಿಗಾಗಿ ಹುಡುಕಾಡದ ಜಾಗವಿಲ್ಲ. ಆದರೆ ದೇವಸ್ಥಾನದ ಒಳಗೆ ಹುಡುಕುವ ಬಗ್ಗೆ ಯೋಚಿಸಿರಲಿಲ್ಲ. ಏಕೆಂದರೆ ದೇವಸ್ಥಾನವು ಪವಿತ್ರ ಜಾಗ ಎಂದು ನಂಬಿದ್ದೆವು” ಎಂದು ಗದ್ಘದಿತರಾಗಿ ನುಡಿಯುತ್ತಾರೆ.

ಆಸಿಫಾ ಎಂಬ ಎಂಟರ ಹರೆಯದ ಬಾಲಕಿಯನ್ನು ಅಪಹರಿಸಿ ಸುಮಾರು ಎಂಟಕ್ಕೂ ಹೆಚ್ಚಿನ ಆರೋಪಿಗಳು ಸ್ಥಳೀಯ ದೇವಸ್ಥಾನ ಒಂದರಲ್ಲಿ ಕೂಡಿ ಹಾಕಿ ಸತತ ನಾಲ್ಕು ದಿನಗಳ ಕಾಲ ಸರಣಿ ಅತ್ಯಾಚಾರ ಎಸಗಿದ್ದರು. ಇಷ್ಟೇ ಅಲ್ಲದೆ ಬಾಗಷಃ ಶವದಂತೆ ಮರಣದ ಹಂತದಲ್ಲಿ ಆ ಮುಗ್ದ ಕಂದಮ್ಮಳನ್ನು ಕಲ್ಲು ಎತ್ತಿ ಹಾಕಿ ಕೊಲ್ಲುವ ಮೊದಲು ಕೊನೇಯ ಬಾರಿ ನಾನೊಮ್ಮೆ ರೇಪ್ ಮಾಡುತ್ತೇನೆ ಎಂದು ಅಲ್ಲಿನ ದುರುಳ ಪೊಲಿಸ್ ಅಧಿಕಾರಿ ದೀಪಕ್ ಖುಜೂರಿಯಾ ಹೇಳಿರುವುದು ಕೇವಲ ಆಸಿಫಾಳನ್ನು ಕೊಲ್ಲಲಿಲ್ಲ ಬದಲಾಗಿ ಮನುಷ್ಯತ್ವವನ್ನೇ ಅತ್ಯಾಚಾರ ಮಾಡಿ ಕೊಂದು ಹಾಕಿದ್ದಾನೆ.

ದೇವಸ್ಥಾನದ ಅರ್ಚಕ ಸಾಂಜಿ ರಾಂ, ಆತನ ಸೋದರ ಅಳಿಯ, ಮತೋರ್ವ ವಿಶಾಲ್ ಜಂಗೋತ್ರ, ಪೊಲೀಸ್ ಅಧಿಕಾರಿಗಳಾದ ದೀಪಕ್ ಖುಜೂರಿಯಾ, ಹಾಗೂ ಸುರಿಂದರ್ ಕುಮಾರ್ ಸಹಿತ ಎಂಟು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಧಾನಿ ಮೋದಿಯವರ ಘೋಷಣೆ ಸಾಮಾಜಿಕ ತಾಣದಲ್ಲಿ ಬದಲಾಯಿತು:

ಮಹಿಳೆಯರ ರಕ್ಷಣೆಯ ಬಗ್ಗೆ ಪ್ರಧಾನಿ ಮೋದಿಯವರು ಮಾಡಿದ್ದ “ಬೇಟಿ ಬಚಾವೊ” (ಮಗಳನ್ನು ರಕ್ಷಿಸಿ) ಎಂಬ ಘೋಷಣೆಯನ್ನು ಸಾಮಾಜಿಕ ತಾಣದ ಬಳಕೆದಾರರು ಸ್ವಲ್ಪ ಬದಲಾವಣೆ ಮಾಡುತ್ತಾ “ಬೇಟಿ ಬಚಾಕೆ ದಿಕಾವೋ” (ಮಗಳನ್ನು ರಕ್ಷಿಸಿ ತೋರಿಸಿ) ಎಂದು ಬರೆದು ಹಂಚಿಕೊಂಡಿದ್ದಾರೆ.

ಸಮಾಜದಲ್ಲಿ ಶಾಂತಿ ಬಯಸುವ ಸಿನೆಮಾ, ಕಿರುತೆರೆ ಹಾಗೂ ರಿಯಾಲಿಟಿ ಶೋಗಳ ಸೆಲೆಬ್ರಿಟಿಗಳು ಈ ಬರ್ಬರ ಹತ್ಯೆಯನ್ನು ಖಂಡಿಸುತ್ತಾ “ನಾನು ಹಿಂದುಸ್ಥಾನ, ನಮಗೆ ನಾಚಿಕೆಯಾಗುತ್ತಿದೆ. ದೇವಿ-ಸ್ಥಾನದಲ್ಲಿ ರೇಪ್ & ಮರ್ಡರ್ ಆದ ಎಂಟು ವರ್ಷದ ಮಗುವಿಗೆ ನ್ಯಾಯ ನೀಡಿ” ಎಂದು ಬರೆದ ಪೋಸ್ಟರ್ ಹಿಡಿದ ತಮ್ಮ ಮನೆಯ ಪುಟ್ಟ ಮಗಳೊಂದಿಗೆ ಫೊಟೋ ಕ್ಲಿಕ್ಕಿಸಿ ಹಂಚಿಕೊಳ್ಳುತ್ತಿದ್ದಾರೆ.

ಟ್ರೋಲ್ ಮಡುವುದರಲ್ಲಿ ಎತ್ತಿದ ಕೈ ಆಗಿರುವ ಕೇರಳಿಗರು, ತಮ್ಮ ಮನೆಯ ಮುಂದೆ “ನಮ್ಮ ಮನೆಯಲ್ಲಿ ಪುಟ್ಟ ಹೆಣ್ಣು ಮಗುವಿದೆ. ಬಿಜೆಪಿಯವರೇ ಮನೆಯ ಗೇಟಿನ ಒಳಗೆ ಬರಬೇಡಿ” ಎಂದು ಬೋರ್ಡ್ ಗಳನ್ನು ತಮ್ಮ ಮನೆಯ ಗೇಟುಗಳಿಗೆ ನೇತು ಹಾಕಿ ಪ್ರತಿಭಟಿಸುತ್ತಿದ್ದಾರೆ.

ಕರಾವಳಿಗರೂ ಕೂಡಾ ಸಾಮಾಜಿಕ ತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಾ “ಮಾಂಸಹಾರಿ ಸಚಿವ ಖಾದರ್ ರವರು ಭೇಟಿ ನೀಡಿದ್ದ ದೇವಸ್ಥಾನವನ್ನು ಸ್ವಚ್ಚಗೊಳಿಸಲು ಬ್ರಹ್ಮ ಕಳಶ ಮಾಡಿಸಬೇಕು ಎಂದು ಹೇಳಿರುವ ಕರಾವಳಿಯ ಸಂಘ ಪರಿವಾರದ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ರವರು ಕಥುವಾದಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ದೇವಸ್ಥಾನಕ್ಕೆ ಯಾವ ಕಲಶ ಮಾಡಿಸಬೇಕು” ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

►►ಹೊಸ ಅಪ್ಡೇಟ್ ಗಳಿಗಾಗಿ ಕೆಳಗಿನ ಲಿಂಕ್ ತೆರೆದು  ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ
https://www.facebook.com/Suddivahininews/

¸

Share this post
356Shares

Check Also

ಅತ್ಯಾಚಾರ ಮಾಡಿದ ವಿಡಿಯೋ ವೈರಲ್ ಮಾಡುವೆ ಎಂದ ಸೈನಿಕ; ಮಹಿಳೆ ಆತ್ಮಹತ್ಯೆ!

ಸುದ್ದಿವಾಹಿನಿ ಡಾಟ್ ಕಾಂ: ಸೈನಿಕನಿಂದ ಆತ್ಯಾಚಾರಕ್ಕೆ ಒಳಗಾಗಿದ ಮಹಿಳೆಯು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಮುಝಫ್ಫರ್ …

Leave a Reply

Your email address will not be published.

HOME
Blue Waves Media