Home / ಸುದ್ದಿಗಳು / ಒಳಿತಿನ ಹಾದಿಗೆ ವ್ಯಯಿಸುವ ಹೆಜ್ಜೆಗಳು ಮಹತ್ತರವಾದುದು: ಹಾಜಿ ಬಿ.ಎಂ ಫಾರೂಖ್

ಒಳಿತಿನ ಹಾದಿಗೆ ವ್ಯಯಿಸುವ ಹೆಜ್ಜೆಗಳು ಮಹತ್ತರವಾದುದು: ಹಾಜಿ ಬಿ.ಎಂ ಫಾರೂಖ್

ಸುದ್ದಿವಾಹಿನಿ ಡಾಟ್ ಕಾಂ: ಒಳಿತಿನ ಹಾದಿಗೆ ವ್ಯಯಿಸುವ ಹೆಜ್ಜೆಗಳು ಮಹತ್ತರವಾದುದು ಎಂದು ಹಾಜಿ ಬಿ ಎಂ ಫಾರೂಖ್ ರವರು ಎಂ ಎಂ ವೈ ಸಿ ಬೆಂಗಳೂರು ಇದರ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಬೆಂಗಳೂರಿನ ಜಯನಗರ ಈದ್ಗಾ ಮೈದಾನದಲ್ಲಿ ಎಂ ಎಂ ವೈ ಸಿ ಬೆಂಗಳೂರು ಹಮ್ಮಿಕೊಂಡಿದ್ದ ಐದನೇ ವಾರ್ಷಿಕೋತ್ಸವ ಸಮಾವೇಶದಲ್ಲಿ ಜೆ ಡಿ ಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ ಎಂ ಫಾರೂಖ್ ರವರು ತಾವು ಕೊಡುಗೆಯಾಗಿ ನೀಡಿರುವ ಆಂಬ್ಯುಲೆನ್ಸ್ ಅನ್ನು ಸಮಾಜಕ್ಕೆ ಸಮರ್ಪಿಸಿ ಮಾತನಾಡುತ್ತಾ, ಮಾನವೀಯತೆ ಸತ್ತು ಹೋಗುತ್ತಿರುವ ಪ್ರಸ್ತುತ ಸಂಧರ್ಭದಲ್ಲಿ ಮಾನವತೆಗೆ ಒತ್ತು ಕೊಡುವ ಕೆಲಸಗಳು ಆಗಬೇಕಾಗಿದೆ. ಒಳಿತಿನ ಹಾದಿಗೆ ವ್ಯಯಿಸುವ ಹೆಜ್ಜೆಗಳು ಮಹತ್ತರವಾದುದು ಎಂದು ಹೇಳಿದರು‌.

ಪ್ರಾಸ್ತಾವಿಕವಾಗಿ ಮಾತಾಡಿದ ಸಹದಿಯ ಫೌಂಡೇಷನ್ ಅಧ್ಯಕ್ಷರಾದ ಶಾಫಿ ಸಹದಿಯವರು ಎಂ ಎಂ ವೈ ಸಿ ಕಾರ್ಯ ವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಖ್ಯಾತ ಭಾಷಣಗಾರ ನೌಶಾದ್ ಭಾಖವಿ ತಿರುವನಂತಪುರಂ “ಕುರ್ ಆನ್ ಆಗಿದೆ ಗೆಳೆಯ” ಎಂಬ ವಿಚಾರದಲ್ಲಿ ಭಾಷಣ ಮಾಡಿದರು.  ಕಾರ್ಯಕ್ರಮದಲ್ಲಿ ಸಮಾಜದ ಆಯ್ದ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಝಮ್ಮಿಲ್ ತಂಙಳ್ ಕಾಸರಗೋಡು, ಬಿ ಬಿ ಎಂ ಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮುಜಾಹಿದ್ ಪಾಶಾ, ಕೆ ಪಿ ಸಿ ಸಿ ಕಾರ್ಯದರ್ಶಿ ಗುಲ್ಶಾದ್ ಅಹ್ಮದ್, ಇನ್ನು ಮುಂತಾದವರು ಭಾಗವಹಿಸಿದ್ದರು.

ಎಂ ಎಂ ವೈ ಸಿ ಸ್ಥಾಪಕಾಧ್ಯಕ್ಷರಾದ ಅಬೂಬಕರ್ ಹೆಚ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜುನೈದ್ ಪಿ ಕೆ ವಂದಿಸಿದರು.  ನೌಫಲ್ ಕೆ.ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.

Share this post
0Shares

Check Also

ಅತ್ಯಾಚಾರ ಮಾಡಿದ ವಿಡಿಯೋ ವೈರಲ್ ಮಾಡುವೆ ಎಂದ ಸೈನಿಕ; ಮಹಿಳೆ ಆತ್ಮಹತ್ಯೆ!

ಸುದ್ದಿವಾಹಿನಿ ಡಾಟ್ ಕಾಂ: ಸೈನಿಕನಿಂದ ಆತ್ಯಾಚಾರಕ್ಕೆ ಒಳಗಾಗಿದ ಮಹಿಳೆಯು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಮುಝಫ್ಫರ್ …

Leave a Reply

Your email address will not be published.

HOME
Blue Waves Media