Home / ಸುದ್ದಿಗಳು / ಕ್ಯಾನ್ಸರ್ ರೋಗಿಗಳೇ, ಸರಕಾರದ ಈ ಸೌಲಭ್ಯಗಳನ್ನು ಪಡೆಯಿರಿ

ಕ್ಯಾನ್ಸರ್ ರೋಗಿಗಳೇ, ಸರಕಾರದ ಈ ಸೌಲಭ್ಯಗಳನ್ನು ಪಡೆಯಿರಿ

ಸುದ್ದಿವಾಹಿನಿ ಡಾಟ್ ಕಾಂ: ಹೆಸರೆತ್ತಿದರೆ ಮೈ ನಡುಗುವ ರೋಗದ ಹೆಸರೇ “ಕ್ಯಾನ್ಸರ್”. ಇದಕ್ಕೆ ತುತ್ತಾದವರು ಪ್ರತಿ ಕ್ಷಣವೂ ಹೋರಾಡುತ್ತಿರುತ್ತಾರೆ. ಕ್ಯಾನ್ಸರ್ ರೋಗಿಗಳಿಗೆ ವಿವಿಧ ಸೌಲಭ್ಯಗಳು ಲಭ್ಯವಿದೆ.

ಪ್ರತಿ ಸಲದ ಕೆಮೋಥೆರಪಿ ಮತ್ತು ರೇಡಿಯೇಶನ್ಸ್ ಗಳು, ಕಣ್ಣೀರು ಹಾಕುತ್ತಾ ಕಳೆಯುವ ರಾತ್ರಿಗಳು, ಉಸಿರಾಡುವ ಪ್ರತಿ ಉಸಿರನ್ನು ಲೆಕ್ಕ ಹಾಕುತ್ತಾ ಮರಣದೊಂದಿಗೆ ಹೋರಾಡು ಕ್ಯಾನ್ಸರ್ ರೋಗಿಗಳೇ ನಿಜವಾದ ಹೀರೋಗಳು. ವೈದಕೀಯ ಲೋಕವು ಕ್ಯಾನ್ಸರ್ ರೋಗಕ್ಕೆ ಮದ್ದು ಹುಡುಕುವ ಪ್ರಯತ್ನದಲ್ಲಿದೆ. ಆದರೆ ಅದು ಯಾವಾಗ ಭಾರತಕ್ಕೆ ಬರುತ್ತದೆ ಎಂಬುದು ದೇವನೇ ಬಲ್ಲ. ಕೇವಲ ಭಾರತದಲ್ಲೇ ಸುಮಾರು 25 ಲಕ್ಷದಷ್ಟು ಬೃಹತ್ ಸಂಖ್ಯೆಯ ಜನರು ಕ್ಯಾನ್ಸರ್ ಎಂಬ ಮಹಾಮಾರಿಯ ಕಪಿಮುಷ್ಠಿಯಲ್ಲಿದ್ದಾರೆ.

ಯಾವ ರೀತಿ ಸಹಾಯ ಮಾಡಬಹುದು?
ವೈದಕೀಯ ಸೌಲಭ್ಯಗಳ ಬಗ್ಗೆ ನಾವು ಹೇಳುತ್ತಿಲ್ಲ. ಕ್ಯಾನ್ಸರ್ ರೋಗಿಗಳ ನೋವನ್ನು ನಾವು ಹಂಚಿಕೊಳ್ಳಲು ಸಾಧ್ಯವಿಲ್ಲ. ಮತ್ತೆ ಹೇಗೆ ಈ ರೋಗಿಗಳಿಗೆ ಸ್ವಲ್ಪ ನಿರಾಳತೆ ನೀಡಬಹುದು?  ಕ್ಯಾನ್ಸರ್ ರೋಗಿಗಳಿಗೆ ಸರಕಾರದಿಂದ ಸಿಗುವ ಕೆಲವು ಸೌಲಭ್ಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಿ ಅಳಿಲು ಸೇವೆ ಮಾಡಬಹುದಾಗಿದೆ.

ಸರಕಾರದಿಂದ ಸಿಗುವ ಸೌಲಭ್ಯಗಳೇನು ಬನ್ನಿ ತಿಳಿಯೋಣ…
ಪ್ರತಿ ವರ್ಷ ಸುಮಾರು 7 ಲಕ್ಷ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. 4 ಲಕ್ಷಕ್ಕೂ ಮಿಕ್ಕಿದ ರೋಗಿಗಳು ಸಾವಿಗೀಡಾಗುತ್ತಿದ್ದಾರೆ. ಅದರಲ್ಲಿ ಹೆಚ್ಚಿನವರು 30-69 ವಯಸ್ಸಿನವರಾಗಿದ್ದಾರೆ.

ರೈಲು ಪ್ರಯಾಣ:
ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ರೈಲಿನಲ್ಲಿ ಪ್ರಯಾಣಿಸುವುದಾದರೆ ಅವರ ಪ್ರಯಾಣವು ಸಂಪೂರ್ಣ ಉಚಿತವಾಗಿರುತ್ತದೆ. ಅವರೊಂದಿಗೆ ಪ್ರಯಾಣಿಸುವ ಜತೆ ಪ್ರಯಾಣಿಕನ ಟಿಕೆಟ್ ದರದಲ್ಲೂ 50% ಕಡಿತವಿದೆ.

ವಿಮಾನ ಯಾನ:
ಕ್ಯಾನ್ಸರ್ ರೋಗಿಯು ವಿಮಾನ ಯಾನ ಮಾಡುವ ಸಂದರ್ಭದಲ್ಲಿ ಎಕಾನಮಿ ದರ್ಜೆಯ ಬೇಸಿಕ್ ದರದ 50% ಮಾತ್ರ (ಗ್ರ್ಯಾಂಡ್ ಟೋಟಲ್ ಅಲ್ಲ) ಪಾವತಿಸಿ ಪ್ರಯಾಣಿಸ ಬಹುದಾಗಿದೆ. ಇದು ಭಾರತೀಯ ಪ್ರಜೆಯಾಗಿರುವ ಕ್ಯಾನ್ಸರ್ ರೋಗಿಗಳಿಗೆ ಮಾತ್ರ ಹಾಗೂ ಬಡತನದ ರೇಖೆಗಿಂತ ಕೆಳಗಿರುವ ರೋಗಿಗಳಿಗಾಗಿ.

ಬಡತನದ ರೇಖೆಗಿಂತ ಕೆಳಗಿರುವ ಕ್ಯಾನ್ಸರ್ ರೋಗಿಗಳಿಗಾಗಿ ಕೇಂದ್ರ ಆರೋಗ್ಯ ಇಲಾಖೆಯು 100 ಕೋಟಿ ರೂಪಾಯಿಗಳನ್ನು (corpus fund) ಮೀಸಲಿಟ್ಟಿದೆ. ವರ್ಷಕ್ಕೆ 27,000 ರೂ ಗಿಂತಲೂ ಕಡಿಮೆ ಆದಾಯವಿರುವ ರೋಗಿಗಳು ಬದತನದ ರೇಖೆಯ ಕೆಳಗಿನವರು ಎಂದು ಪರಿಗಣಿಸಲಾಗುತ್ತದೆ.

ರಾಷ್ಟ್ರೀಯ ಆರೋಗ್ಯ ನಿಧಿ:
ನಿರ್ಧಿಷ್ಟ ರೋಗಿಗಳು 5 ಲಕ್ಷ ರೂ ಗಳ ವರೆಗೆ (ಒಂದು ಸಲ ಮಾತ್ರ) ಚಿಕಿತ್ಸೆಗಾಗಿ ರಾಷ್ಟ್ರೀಯ ಆರೋಗ್ಯ ನಿಧಿಯಿಂದ ಅವರ ಮೆಡಿಕಲ್ ಕಂಡೀಶನ್ ನ ಗಂಭೀರತೆಯ ಮೇಲೆ ಪಡೆಯ ಬಹುದಾಗಿದೆ.

ಕೇಂದ್ರ ಸರಕಾರದ ಹೆಲ್ತ್ ಸ್ಕೀಮ್:
ಈ ಸೌಲಭ್ಯವು ಕೇಂದ್ರ ಸರಕಾರದ ನಿವೃತ್ತ ಹಾಗೂ ನಿರ್ಭರ ನೌಕರರಿಗಾಗಿ ಮಾತ್ರ. ಯಾವುದೇ ಆಸ್ಪತ್ರೆಯ ಅಧಿಕೃತ ಚಿಕಿತ್ಸೆಯ ಮೊತ್ತದ ಫಲಾನುಭವಿಗಳಾಗಿದ್ದಾರೆ.

ಕ್ಯಾನ್ಸರ್ ಸುರಕ್ಷಾ ಸ್ಕೀಮ್:
18 ವರ್ಷಕ್ಕೂ ಕೆಳಗಿನ ವಯಸ್ಸಿನ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಈ ಸ್ಕೀಮ್ ಮೂಲಕ ಕೇರಳ ಸರಕಾರವು ಚಿಕಿತ್ಸೆ ನೀಡುತ್ತದೆ.

ಆರೋಗ್ಯ ಸಿರಿ ಸ್ಕೀಮ್:
ಈ ಸೌಲಭ್ಯವು ತೆಲಂಗಾಣ ಸರಕಾರವು ಬಡತನದ ರೇಖೆಗಿಂತ ಕೆಳಗಿನ ರೋಗಿಗಳ ಆರ್ಥಿಕ ಸುರಕ್ಷತೆಗಾಗಿ ನೀಡುತ್ತದೆ. ಒಂದು ವರ್ಷಕ್ಕೆ ಸುಮಾರು 2 ಲಕ್ಷ ರೂ.ಗಳ ಮೋನೆಟರಿ ಏಡ್ ನೀಡುತ್ತದೆ.

ಆದಾಯ ತೆರಿಗೆಯ ನಿರಾಳತೆ:
ಕ್ಯಾನ್ಸರ್ ರೋಗಿಗಳ ನೋವನ್ನು ನಿರಾಳತೆ ಮಾಡಲು ಸಾಧ್ಯವಿಲ್ಲವಾದರೂ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ಸೆಕ್ಷನ್ 80DDB ಪ್ರಕಾರ ಆದಾಯ ತೆರಿಗೆ (Income Tax) ಪಾವತಿಸಬೇಕೆಂದಿಲ್ಲ.

ನಿಮ್ಮ ಅಭಿಪ್ರಾಯವೇನು:
ಕ್ಯಾನ್ಸರ್ ರೋಗಿಗಳಿಗಾಗಿ ಸರಕಾರವು ಕೈಗೊಂಡಿರುವ ಈ ಕ್ರಮಗಳ ಬಗ್ಗೆ ತೃಪ್ತಿ ಇದೆಯೇ? ಇನ್ನೂ ಯಾವ್ಯಾವ ರೀತಿಯಲ್ಲಿ ಸರಕಾರವು ಕ್ಯಾನ್ಸರ್ ರೋಗಿಗಳಿಗಾಗಿ ಕಾರ್ಯ ನಿರ್ವಹಿಸಬೇಕೆಂದು ಬಯಸುತ್ತೀರಿ? ನಿಮ್ಮ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Sources: Data, Railway, Air travel

Share this post
0Shares

Check Also

ಕೇಜ್ರಿವಾಲ್ ರ ಭೇಟಿಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ನಿರಾಕರಣೆ!

ಸುದ್ದಿವಾಹಿನಿ ಡಾಟ್ ಕಾಂ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾಗಲು ದಿಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್ ರವರು ಅನುಮತಿ …

Leave a Reply

Your email address will not be published.

Blue Waves Media