Home / ಸುದ್ದಿಗಳು / ಆಸಿಫಾಳಿಗಾಗಿ ಉರಿಯಿತು ಮಣಿಪಾಲ, ಮೈಸೂರು ಹಾಗೂ ಕೇರಳದ ಕ್ಯಾಂಡಲ್ ಗಳು

ಆಸಿಫಾಳಿಗಾಗಿ ಉರಿಯಿತು ಮಣಿಪಾಲ, ಮೈಸೂರು ಹಾಗೂ ಕೇರಳದ ಕ್ಯಾಂಡಲ್ ಗಳು

ಸುದ್ದಿವಾಹಿನಿ ಡಾಟ್ ಕಾಂ: ಆಸೀಫಾ ಎಂಬ ಎಂಟರ ಹರೆಯದ ಕಾಶ್ಮೀರದ ಹೂವಿಗಾಗಿ ಮಣಿಪಾಲ, ಮೈಸೂರು ಹಾಗೂ ಕೇರಳದ ಕ್ಯಾಂಡಲ್ ಗಳು ಉರಿದವು.

ಇತ್ತೀಚೆಗೆ ಕಥುವಾದ ದೇವಸ್ಥಾನದಲ್ಲಿ ಸತತ ನಾಲ್ಕು ದಿನಗಳ ದುರುಳರಿಂದ ಸರಣಿ ಅತ್ಯಾಚಾರಕ್ಕೊಳಗಾಗಿ ಕೊನೆಗೆ ಕೊಲೆಯಾದ ಎಂಟರ ಹರೆಯದ ಕಂದಮ್ಮಳಿಗಾಗಿ ದೇಶದ ವಿವಿದೆಡೆಗಳಲ್ಲಿ ಕ್ಯಾಂಡಲ್ ಮಾರ್ಚ್ ನಡೆಯಿತು.

ಉಡುಪಿಯ ಬಳಿಯ ಮಣಿಪಾಲ ವಿಶ್ವವಿದ್ಯಾಲಯದ ಸುಮಾರು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಂದು ರಾತ್ರಿ ಸ್ವಯಂ ಪ್ರೇರಿತರಾಗಿ ಚೈನಾ ವ್ಯಾಲಿಯಿಂದ ಜಿಲ್ಲಾಧಿಕಾರಿಯ ಕಚೇರಿಯ ವರೆಗೆ ಕ್ಯಾಂಡಲ್ ಮಾರ್ಚ್ ನೊಂದಿಗೆ ಮೌನ ಮೆರವಣಿಗೆ ನಡೆಸಿದರು. ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಮೇಣದ ಬತ್ತಿಗಳನ್ನು ಉರಿಸಿ ಮೃತ ಆಸೀಫಾಳಿಗಾಗಿ ಪ್ರಾರ್ಥಿಸಿದರು.

ಮೈಸೂರಿನಲ್ಲೂ ಕೂಡಾ ಮೃತ ಆಸೀಫಾಳಿಗಾಗಿ ಕ್ಯಾಂಡಲ್ ಉರಿಸಿ ಪ್ರಾರ್ಥಿಸಲಾಯಿತು. ಈ ಸಂತಾಪ ಸೂಚಕ ಸಭೆಯಲ್ಲಿ ನರಸಿಂಹರಾಜ ಅಸ್ಸೆಂಬ್ಲಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಸ್ಪರ್ಧಿಸುತ್ತಿರುವ ಅಬ್ದುಲ್ ಮಜೀದ್ ಕೂಡ್ಲಿಪೇಟೆಯವರು ಉಪಸ್ಥಿತರಿದ್ದು, ಆಸೀಫಾಳಿಗಾಗಿ ಪ್ರಾರ್ಥಿಸಿದರು.

ಅತ್ತ ಕೇರಳದಲ್ಲೂ ಕೂಡಾ ಅತ್ಯಾಚಾರಿ ಕೊಲೆಗಡುಕರನ್ನು ನೇಣುಗಂಬಕ್ಕೆ ಏರಿಸಬೇಕೆಂದು ಪ್ರಾತ್ಯೆಕ್ಷಿತೆಯ ಮೂಲಕ ತೋರಿಸುತ್ತಾ ಆಸೀಫಾಳಿಗಾಗಿ ಪ್ರಾರ್ಥಿಸಲಾಯಿತು.

Share this post
259Shares

Check Also

ಅತ್ಯಾಚಾರ ಮಾಡಿದ ವಿಡಿಯೋ ವೈರಲ್ ಮಾಡುವೆ ಎಂದ ಸೈನಿಕ; ಮಹಿಳೆ ಆತ್ಮಹತ್ಯೆ!

ಸುದ್ದಿವಾಹಿನಿ ಡಾಟ್ ಕಾಂ: ಸೈನಿಕನಿಂದ ಆತ್ಯಾಚಾರಕ್ಕೆ ಒಳಗಾಗಿದ ಮಹಿಳೆಯು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಮುಝಫ್ಫರ್ …

Leave a Reply

Your email address will not be published.

HOME
Blue Waves Media