Home / ಅಟೋ / ಕಾರ್ ಕ್ರ್ಯಾಶ್ ಗಾರ್ಡ್ ಸುರಕ್ಷತೆಗಿಂತ ಹೆಚ್ಚು ಪ್ರಾಣ ಕಂಟಕವಾಗಿದೆ!

ಕಾರ್ ಕ್ರ್ಯಾಶ್ ಗಾರ್ಡ್ ಸುರಕ್ಷತೆಗಿಂತ ಹೆಚ್ಚು ಪ್ರಾಣ ಕಂಟಕವಾಗಿದೆ!

ಕಾರಿನ ಮುಂಭಾಗದಲ್ಲಿ ಅಥವ ಹಿಂಭಾಗದಲ್ಲಿ ಸುರಕ್ಷತೆ ಎಂಬ ಭ್ರಮೆಯಲ್ಲಿ ಅಳವಡಿಸುವ ಕ್ರ್ಯಾಶ್ ಗಾರ್ಡ್ ಗಳಿಗೆ ಭಾರಿ ದಂಡ ಬೀಳಲಿದೆ ಎಂದು ದಿಲ್ಲಿ ಪೊಲೀಸ್ ಹೇಳಿದೆ. ಸಾಮಾನ್ಯವಾಗಿ ಕಾರು ಮಾಲಕರು, ತನ್ನ ಕಾರಿನ ಮೇಲೆ ಪ್ರಾಣವನ್ನೇ ಇಟ್ಟಿರುತ್ತಾರೆ. ತನ್ನ ಕಾರನ್ನು ತಮ್ಮ ಲವ್ವರ್ ಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ಒಂದು ವೇಳೆ ಲವ್ವರ್ ತಮ್ಮ ಕಾರಿಗೆ ಏನಾದರೂ ನಷ್ಟ ಮಾಡಿದರೆ, ಅವಳನ್ನೂ ಕೂಡಾ ನಡು ಬೀದಿಯಲ್ಲಿ ಬಿಟ್ಟು ಹೋಗಲು ಹಿಂಜರಿಯುವುದಿಲ್ಲ.

ಅಂತಹದರಲ್ಲಿ ತಮ್ಮ ಕಾರಿಗೆ ಯಾವುದೇ ರೀತಿಯ ಒಂದು ಗೆರೆ ಯೂ ಬೀಳಬಾರದೆಂದು ಕಾರಿನ ಮುಂಭಾಗದಲ್ಲಿ ಅಫಘಾತದ ಪ್ರಮಾಣ ತಪ್ಪಿಸುವ ಸಲುವಾಗಿ ಕ್ರ್ಯಾಶ್ ಗಾರ್ಡ್ ಹಾಕಿಸಿಕೊಳ್ಳುತ್ತಾರೆ. ಆದರೆ ಈ ಕ್ರ್ಯಾಶ್ ಗಾರ್ಡ್ ಸುರಕ್ಷತೆಗಿಂತ ನಷ್ಟವೇ ಮಾಡುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಇದೇ ಕಾರಣಕ್ಕೆ ದಿಲ್ಲಿ ಪೊಲೀಸರು ಮುಂದಿನ ಜನವರಿಯಿಂದ ಕ್ರ್ಯಾಶ್ ಗಾರ್ಡ್ ಅಳವಡಿಸಿರುವ ಕಾರುಗಳಳಿಗೆ 1000 ದಂಡ ವಿಧಿಸಲಿದ್ದಾರೆ. ಅದರ ನಂತರವೂ ಕ್ರ್ಯಾಶ್ ಗಾರ್ಡ್ ತೆಗೆಯದಿದ್ದರೆ ಎರಡನೇ ಸಲ 2000 ರೂ ದಂಡ ವಿಧಿಸಲಿದೆ.

ಕ್ರ್ಯಾಶ್ ಗಾರ್ಡ್ ಹೇಗೆ ಪ್ರಾಣ ಕಂಟಕವಾಗಿದೆ?
– ಕಾರಿನಲ್ಲಿ ಅಳವಡಿಸಲಾಗುವ ಕ್ರ್ಯಾಶ್ ಗಾರ್ಡ್ ಸುರಕ್ಷತೆಗಾಗಿ ಹಾಕಲಾಗುತ್ತದೆ ಎಂಬ ಭ್ರಮೆ ಇದೆ. ಆದರೆ ಅದು ಕೇವಲ ನಾಲ್ಕು ಬೋಲ್ಟ್ ಗಳ ಮೇಲೆ ನಿಲ್ಲುತ್ತದೆ. ಅಲ್ಲದೆ ಅಪಘಾತದ ತೀವೃತೆಯನ್ನು ಕಡಿಮೆ ಮಾಡುವ ಬದಲು ಇದೂ ಕೂಡಾ ಅಪ್ಪಚ್ಚಿಯಾಗಿ ಗಾಯಾಳುಗಳನ್ನು ಹೊರಗೆ ತೆಗೆಯಲು ತಡೆಯಾಗುತ್ತದೆ.
– ಕ್ರ್ಯಾಶ್ ಗಾರ್ಡ್ ನ ಕಾರ್ಣದಿಂದಾಗಿ ಕಾರಿನ ಏರ್ ಬ್ಯಾಗ್ ಸರಿಯಾದ ಸಮಯಕ್ಕೆ ಕಾರ್ಯಗತಗೊಳ್ಳಲು ತೊಡಕುಂಟು ಮಾಡುತ್ತದೆ.
– ಪಾದಾಚಾರಿಗಳಿಗೆ ಅಥವಾ ಸೈಕಲ್ ಸವಾರರಿಗೆ ಕಾರು ಡಿಕ್ಕಿ ಹೊಡೆದಾಗ ಫೈಬರ್ ಬಂಬರ್ ಬದಲು ಈ ಕ್ರ್ಯಾಶ್ ಗಾರ್ಡ್ ಸ್ಟೀಲ್ ನದ್ದಾಗಿರುವ ಕಾರಣ ಪ್ರಾಣಾಪಾಯದ ಸಂಭವವಿರುತ್ತದೆ.

ಕ್ರ್ಯಾಶ್ ಗಾರ್ಡ್ ಗೆ ಬೀಳಲಿರುವ ದಂಡಗಳ ಪ್ರಮಾಣ
– ಕಾರು ಮಾಲಿಕರಿಗೆ ದಿಲ್ಲಿ ಪೊಲೀಸ್ ಮುಂದಿನ ಜನವರಿಯಿಂದ ಕ್ರ್ಯಾಶ್ ಗಾರ್ಡ್ ಹಾಕಿಕೊಂಡಿರುವ ವಾಹನ ಮಾಲಕರಿಗೆ ಪ್ರಥಮ ಬಾರಿ 1000 ರೂ ಹಾಗೂ ಮತ್ತೆ ಎರಡನೇ ಬಾರಿ 2000 ರೂ ದಂದ ವಿಧಿಸಲಿದೆ.
– ಕ್ರ್ಯಾಶ್ ಗಾರ್ಡ್ ಮಾರಾಟ ಮಾಡುವವರಿಗೆ 5000 ರೂ ಗಳ ದಂಡ ವಿಧಿಸಲಾಗುವುದು.
ಮೋಟಾರು ವಾಯನ ಕಾಯ್ದೆ 1988 ರ ಅಡಿಯಲ್ಲಿ ಕಾರಿನ ಮೂಲ ಭಾಗಗಳ ಹೊರತಾಗಿ ಹೊರಗಿನಿಂದ ಸಿಗುವ ಬಿಡಿಭಾಗಗಳನ್ನು ಅಳವಡಿಸಿಕೊಳ್ಳುವುದು ಕಾನೂನು ರೀತ್ಯಾ ಅಪರಾಧವಾಗಿದೆ. ಹಾಗಾಗಿ ಈ ಕಾನೂನು ಇದಕ್ಕೆ ಅನ್ವಯಿಸುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share this post
0Shares

Check Also

ಹೊಸ ದಾಖಲೆ ಬರೆದ ಬುಲ್ಲೆಟ್ ಬೈಕ್

ಸುದ್ದಿವಾಹಿನಿ ಡಾಟ್ ಕಾಂ:  ಹೊಸದಾಗಿ ಬಿಡುಗಡೆ ಮಾಡಿದ ಎಲ್ಲಾ ಬೈಕ್ ಗಳು ಕೇವಲ 15 ಸೆಕೆಂಡುಗಳಲ್ಲಿ ಮಾರಾಟವಾಗಿ ಬುಲ್ಲೆಟ್ ಕಂಪನಿಯು …

Leave a Reply

Your email address will not be published.

Blue Waves Media