Home / ಸುದ್ದಿಗಳು / ಎಚ್ಚರ…! ಬೆಲೆಬಾಳುವ ವಸ್ತುಗಳನ್ನು ಹ್ಯಾಂಡ್ ಲಗೇಜ್ ನಲ್ಲಿಡಬೇಡಿ!

ಎಚ್ಚರ…! ಬೆಲೆಬಾಳುವ ವಸ್ತುಗಳನ್ನು ಹ್ಯಾಂಡ್ ಲಗೇಜ್ ನಲ್ಲಿಡಬೇಡಿ!

ಸುದ್ದಿವಾಹಿನಿ ಡಾಟ್ ಕಾಂ: ನೀವು ಬೆವರು ಸುರಿಸಿ, ಕಷ್ಟಪಟ್ಟು ದುಡಿದ ಹಣದಿಂದ ನಿಮ್ಮ ಪ್ರೀತಿಪಾತ್ರರಿಗಾಗಿ ಖರೀದಿಸಿದ ವಸ್ತುಗಳನ್ನು ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹ್ಯಾಂಡ್ ಲಗೇಜಿನಲ್ಲಿಟ್ಟು ಸಾಗಿಸುವುದಾದರೆ ಎಚ್ಚರವಿರಲಿ. ಏಕೆ ಎಂದು ಈ ಸುದ್ದಿಯ ಕೊನೆಯಲ್ಲಿರುವ ವಿಡಿಯೋ ನೋಡಿ.

ಜೀವನದ ಹೊಂಗನಸನ್ನು ಕಂಡು ವಿದೇಶಕ್ಕೆ ಹೋಗಿ, ಒಂದು, ಎರಡು ವರ್ಷ ತನ್ನ ಪ್ರೀತಿ ಪಾತ್ರರಿಂದ ಒಲ್ಲದ ಮನಸ್ಸಿನಿಂದ ದೂರವಿರುತ್ತೀರಿ. ತನ್ನ ಮನೆಯ, ಕುಟುಂಬದ ಸಂತೋಷ ಸಮಾರಂಭಗಳಿಂದ ನಗುಮುಖದಿಂದಲೇ ದೂರವಿರುತ್ತೀರಿ. ಮನೆಯವರ ಸಂಭ್ರಮಗಳನ್ನು ಕೇವಲ ವಾಟ್ಸ್ಯಾಪ್, ವಿಡಿಯೋ ಮೂಲಕ ಬೆಡ್ ಸ್ಪೇಸ್ ನ ಏಕಾಂತದಲ್ಲಿ ನೋಡಿ ಸಂತೋಷ ಪಡುತ್ತೀರಿ.

►►ಹೊಸ ಅಪ್ಡೇಟ್ ಗಳಿಗಾಗಿ ಕೆಳಗಿನ ಲಿಂಕ್ ತೆರೆದು  ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ
https://www.facebook.com/Suddivahininews/

ತನ್ನ ಮನೆಯವರ ಸಂತೋಷಕ್ಕಾಗಿ ತನ್ನ ಯೌವ್ವನವನ್ನೇ ಏಕಾಂತ ಜೀವನಕ್ಕೆ ಬಲಿ ಅರ್ಪಿಸಿ, ರಾತ್ರಿ ಹಗಲೆನ್ನದೆ ವಿದೇಶಗಳಲ್ಲಿ ದುಡಿಯುತ್ತೀರಿ. ಇದೆಲ್ಲವನ್ನು ಕಳೆದು ವರ್ಷಾಂತ್ಯಕ್ಕೆ ಏನಾದರು ಅಳಿದುಳಿದರೆ ಅದರಲ್ಲಿ ತನ್ನವರಿಗಾಗಿ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಬೆಲೆಬಾಳುವ ವಸ್ತುಗಳನ್ನು ಖರೀದಿಸಿ ಊರಿಗೆ ಹೊರಡುತ್ತೀರಿ. ಆದರೆ ಊರು ಸೇರುವ ಮೊದಲೇ ಆ ನಿಮ್ಮ ಪ್ರೀತಿಪಾತ್ರರಿಗಾಗಿ ಖರೀದಿಸಿದ ವಸ್ತುಗಳು ನಿಮ್ಮ ಮನೆಯ ಬದಲು ಖದೀಮರ ಮನೆ ಸೇರಿದರೆ ನಿಮಗೇನಾಗಬೇಡ?

ಅದಕ್ಕಾಗಿ ವಿಮಾನದಲ್ಲಿ ಪ್ರಯಾಣಿಸುವ ಸಮಯದಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳನ್ನು ತಮ್ಮ ಹ್ಯಾಂಡ್ ಲಗೇಜ್ ನಲ್ಲಿಡಬೇಡಿ. ಏಕೆಂದರೆ ನಿಮ್ಮ ಹ್ಯಾಂಡ್ ಲಗೇಜ್ ನ ಝಿಪ್ ಅನ್ನು ಬೀಗ ಹಾಕಿದ್ದರೂ ತೆರೆಯಬಹುದಾಗಿದೆ. ಏರ್ಪೋರ್ಟ್ ನಲ್ಲಿ ವಿಮಾನದ ಲಗೇಜ್ ಇಳಿಸುವ ವ್ಯಕ್ತಿಗಳು ನಿಮ್ಮ ಬ್ಯಾಗ್ ತೆರೆದು, ಅದರಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಲಪಟಾಯಿಸುತ್ತಾರೆ. ಹಾಗಾಗಿ ಹ್ಯಾಂಡ್ ಬ್ಯಾಗ್ ಗಳಲ್ಲಿ ಕೇವಲ ಬಟ್ಟೆಬರೆ ಹಾಗೂ ತೂಕವಿರುವ ದೊಡ್ಡ ವಸ್ತುಗಳನ್ನು ಮಾತ್ರ ಹಾಕಿದರೆ ಸಾಕು. ಇಲ್ಲವಾದಲ್ಲಿ ನಿಮ್ಮ ಬೆವರ ಹನಿ ಇನ್ನೊಬರ ಮನೆ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.

ಇಂತಹದೇ ಘಟನೆಯ ವಿಡಿಯೋ ನೋಡಿ:

 

Share this post
119Shares

Check Also

ಅತ್ಯಾಚಾರ ಮಾಡಿದ ವಿಡಿಯೋ ವೈರಲ್ ಮಾಡುವೆ ಎಂದ ಸೈನಿಕ; ಮಹಿಳೆ ಆತ್ಮಹತ್ಯೆ!

ಸುದ್ದಿವಾಹಿನಿ ಡಾಟ್ ಕಾಂ: ಸೈನಿಕನಿಂದ ಆತ್ಯಾಚಾರಕ್ಕೆ ಒಳಗಾಗಿದ ಮಹಿಳೆಯು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಮುಝಫ್ಫರ್ …

Leave a Reply

Your email address will not be published.

HOME
Blue Waves Media