Home / ಕ್ರೀಡೆ / ದ.ಆಫ್ರಿಕಾಕ್ಕೆ ಡಬಲ್ ಅಟ್ಯಾಕ್ ನೀಡಿದ ಟೀಂ ಇಂಡಿಯಾ ತಂಡಗಳು

ದ.ಆಫ್ರಿಕಾಕ್ಕೆ ಡಬಲ್ ಅಟ್ಯಾಕ್ ನೀಡಿದ ಟೀಂ ಇಂಡಿಯಾ ತಂಡಗಳು

ಸುದ್ದಿವಾಹಿನಿ ಡಾಟ್ ಕಾಂ: ಟೀಂ ಇಂಡಿಯಾ ತಂಡಗಳು ದ.ಆಫ್ರಿಕಾ ತಂಡಗಳಿಗೆ ನಿನ್ನೆ ಡಬಲ್ ಅಟ್ಯಾಕ್ ನೀಡುತ್ತಾ ದ.ಆಫ್ರಿಕಾ ವಿರುದ್ದ ಟೀಂ ಇಂಡಿಯಾ ತಂಡವು ಭರ್ಜರಿ ಜಯ ಸಾಧಿಸಿದ್ದ ಬೆನ್ನಲ್ಲೇ ಕಾಕತಾಳಿಯ ಎಂಬಂತೆ ಟೀಂ ಇಂಡಿಯಾ ಮಹಿಳಾ ತಂಡವೂ ಕೂಡಾ ದ. ಆಫ್ರಿಕಾ ತಂಡವನ್ನು ಭರ್ಜರಿಯಾಗಿ ಸೋಲಿಸಿ ನಾವೂ ಕೂಡಾ ಕಮ್ಮಿ ಇಲ್ಲ ಎಂದು ಮಹಿಳಾ ಮಣಿಗಳು ತೋರಿಸಿದ್ದಾರೆ.

ಅತ್ತ ಪುರುಷರ ತಂಡದ ಪರವಾಗಿ ನಾಯಕ ಕೊಹ್ಲಿಯವರ ಶತಕದ ನೆರವಿನಿಂದ ಜಯಗಳಿಸಿದರೆ, ಇತ್ತ ಮಹಿಳಾ ಟೀಂ ಇಂಡಿಯಾದ ಪರವಾಗಿ ಸ್ಮೃತಿ ಮಂದನಾರವರ ಶತಕದ ನೆರವಿನಿಂದ ಭರ್ಜರಿಯಾಗಿ ಜಯಶಾಲಿಯಾಗಿದೆ. ಈ ಪಂದ್ಯಗಳ ಕೆಲವು ವಿಶೇಷತೆ ಹಾಗೂ ಸಾಮ್ಯತೆ ಕಾಣಲು ಸಿಕ್ಕಿದೆ. ಅವುಗಳಲ್ಲಿ ಕೆಲವನ್ನು ಕೆಳಗೆ ಕೊಡಲಾಗಿದೆ

ಟೀಂ ಇಂಡಿಯಾ ಪುರುಷರ ತಂಡ ಗಳಿಸಿದ ಮೊತ್ತ: 303-6
ಟೀಂ ಇಂಡಿಯಾ ಮಹಿಳಾ ತಂಡ ಗಳಿಸಿದ ಮೊತ್ತ: 302-3

ದ.ಆಫ್ರಿಕಾ ಪುರುಷರ ತಂಡ ಗಳಿಸಿದ ಮೊತ್ತ: 179-10
ದ.ಆಫ್ರಿಕಾ ಮಹಿಳಾ ತಂಡ ಗಳಿಸಿದ ಮೊತ್ತ: 124-10

ಟೀಂ ಇಂಡಿಯಾ ಪುರುಷ ತಂಡದ ಜಯದ ಅಂತರ: 124 ರನ್
ಟೀಂ ಇಂಡಿಯಾ ಮಹಿಳಾ ತಂಡದ ಜಯದ ಅಂತರ: 179 ರನ್

ಟೀಂ ಇಂಡಿಯಾ ಪುರುಷರ ಪರವಾಗಿ ಶತಕ: ಕೊಹ್ಲಿ- 160 ರನ್
ಟೀಂ ಇಂಡಿಯಾ ಮಹಿಳೆಯರ ಪರವಾಗಿ ಶತಕ: ಸ್ಮೃತಿ ಮಂದನ- 135 ರನ್

ಟೀಂ ಇಂಡಿಯಾ ಪುರುಷರ ಪರವಾದ ದಾಖಲೆ: ಧೋನಿ
(400 ವಿಕೆಟ್ ಉರುಳಲು ಕಾರಣವಾದ ಪ್ರಥಮ ಇಂಡಿಯನ್ ವಿಕೆಟ್ ಕೀಪರ್)
ಟೀಂ ಇಂಡಿಯಾ ಪುರುಷರ ಪರವಾದ ದಾಖಲೆ: ಜೂಲನ್ ಗೋಸ್ವಾಮಿ
(200 ವಿಕೆಟ್ ಪಡೆದ ಪ್ರಥಮ ಮಹಿಳಾ ಬೌಲರ್)

ಪಂದ್ಯವೊಂದರಲ್ಲಿ 4 ವಿಕೆಟ್ ಪಡೆದ ಬೌಲರ್
ಟೀಂ ಇಂಡಿಯಾ ಪುರುಷ ತಂಡ: ಚಹಾಲ್ ಹಾಗೂ ಕುಲ್ದೀಪ್ ತಲಾ 4 ವಿಕೆಟ್
ಟೀಂ ಇಂಡಿಯಾ ಮಹಿಳಾ ತಂಡ: ಪೂನಂ ಯಾದವ್ 4 ವಿಕೆಟ್

ಎರಡೆರಡು ಶತಕಗಳು:
ಕೊಹ್ಲಿ ಈ ಸರಣಿಯಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದರೆ, ಮಂದನ ದ.ಆಫ್ರಿಕಾದ ವಿರುದ್ದ ಒಟ್ಟಾರೆಯಾಗಿ ಎರಡನೇ ಶತಕ ದಾಖಲಿಸಿದರು.

Share this post
286Shares

Check Also

ಡೆಲ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗಾಂಭೀರ್!

ಸುದ್ದಿವಾಹಿನಿ ಡಾಟ್ ಕಾಂ: ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಎರಡು ಪಂದ್ಯಗಳು ಬಾಕಿ ಇರುವಂತೆಯೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ …

Leave a Reply

Your email address will not be published.

Blue Waves Media