Home / ಅಟೋ / ಒಂದು ಸಲ ಚಾರ್ಜ್ ಮಾಡಿದರೆ 250 ಕಿಮಿ ಚಲಿಸಬಲ್ಲ ಕಾರು ಬಿಡುಗಡೆ

ಒಂದು ಸಲ ಚಾರ್ಜ್ ಮಾಡಿದರೆ 250 ಕಿಮಿ ಚಲಿಸಬಲ್ಲ ಕಾರು ಬಿಡುಗಡೆ

ಒಂದು ಸಲ ಚಾರ್ಜ್ ಮಾಡಿದರೆ ಸುಮಾರು 250 ಕಿಮಿಗಳಷ್ಟು ಓಡಬಲ್ಲ ಕಾರನ್ನು ಫ್ರಾನ್ಸ್ ಮೂಲದ ರೇನೊ (Renault) ಸಂಸ್ಥೆಯು ತನ್ನ ನವೀನವಾದ Zoe 40 ಅನ್ನು ದುಬೈಯಲ್ಲಿ ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ 5 ಜನರು ಪ್ರಯಾಣಿಸಬಹುದಾಗಿದೆ. ಇದರಲ್ಲಿ ದೊಡ್ಡದಾದ ಟಚ್ ಸ್ಕ್ರೀನ್, ಮಾಡರ್ನ್ ಇಂಟರ್ಫೇಸ್, ನೇವಿಗೇಶನ್ ಹಾಗೂ ಬ್ಲೂಟೂತ್ ಕೊಡಲಾಗಿದೆ

ಸುರಕ್ಷತೆಯ ದೃಷ್ಟಿಯಿಂದ ಎಬಿಎಸ್ ಹಾಗೂ ಇಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್ ಕೊಡಲಾಗಿದೆ. ಇದರ ಬ್ಯಾಟರಿಯು 1 ರಿಂದ 4 ಗಂಟೆಗಳ ಸಮಯದಲ್ಲಿ ಫುಲ್ ಚಾರ್ಜ್ ಆಗುತ್ತದೆ. ಇದರ ಪ್ರೀ ಕೂಲಿಂಗ್ ಸಿಸ್ಟಂನಿಂದಾಗಿ ಪ್ರಯಾಣಿಕರು ತಮ್ಮ ಅನುಕೂಲತೆಗೆ ತಕ್ಕಂತೆ ಏರ್ ಕಂಡಿಶನ್ ನಡೆಸಬಹುದಾಗಿದೆ. ಇದರಲ್ಲಿ ಅಟೋಮ್ಯಾಟಿಕ್ ಹಾಗೂ ಸ್ಟ್ಯಾಂಡರ್ಡ್ ಗೇರ್ ಬಾಕ್ಸ್ ಇದೆ. ಲೈಟ್ ಸೆನ್ಸಾರ್, ಫ್ರಂಟ್ ವಿಂಡ್ ಸ್ಕ್ರೀನ್ ವೈಪರ್ಸ್ ಇದೆ. ಇದರ ಲೈಟ್ ಗಳು ಅಗತ್ಯ ಬಿದ್ದಾಗ ಅಟೋಮ್ಯಾಟಿಕ್ ಆಗಿ ಆನ್ ಆಗುತ್ತವೆ. ಮುಂದಿನ ದಿನಗಳಲ್ಲಿ ಭಾರತಕ್ಕೂ ಲಗ್ಗೆ ಇಡಲಿದೆ ಎಂದು ಸಂಸ್ಥೆಯು ಹೇಳಿದೆ.

ಕೇಂದ್ರ ಸರಕಾರವು ಮುಂದಿನ ದಿನಗಳಲ್ಲಿ ಭಾರತೀಯ ರಸ್ತೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಿ ಬ್ಯಾಟರಿ ಚಾಲಿತ ಕಾರುಗಳಿಗೆ ಮಾತ್ರ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಪೂರ್ವ ತಯಾರಿಗಳನ್ನೂ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಕೇಂದ್ರ ಮಂತ್ರಿ ನಿತಿನ್ ಗಡ್ಕರಿಯವರೂ ಕೂಡಾ ಇತ್ತೀಚೆಗೆ ಕಾರು ನಿರ್ಮಾಣ ಸಂಸ್ಥೆಗಳಿಗೆ ಡಿಸೆಲ್ ಹಾಗೂ ಪೆಟ್ರೋಲ್ ಕಾರುಗಳ ಬದಲು ಪರ್ಯಾಯ ಕಾರುಗಳನ್ನು ನಿರ್ಮಿಸುವ ಹೆಜ್ಜೆ ಇಡಲು ಸೂಚಿಸಿದ್ದರು ಹಾಗೂ ದೇಶಾದ್ಯಂತ ಅಲ್ಲಲಿ ಬ್ಯಾಟರಿ ಚಾರ್ಜಿಂಗ್ ಸ್ಟೇಶನ್ ಗಳನ್ನು ಸ್ಥಾಪಿಸುವ ಬಗ್ಗೆ ಮಾಹಿತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Share this post
504Shares

Check Also

ಹೊಸ ದಾಖಲೆ ಬರೆದ ಬುಲ್ಲೆಟ್ ಬೈಕ್

ಸುದ್ದಿವಾಹಿನಿ ಡಾಟ್ ಕಾಂ:  ಹೊಸದಾಗಿ ಬಿಡುಗಡೆ ಮಾಡಿದ ಎಲ್ಲಾ ಬೈಕ್ ಗಳು ಕೇವಲ 15 ಸೆಕೆಂಡುಗಳಲ್ಲಿ ಮಾರಾಟವಾಗಿ ಬುಲ್ಲೆಟ್ ಕಂಪನಿಯು …

Leave a Reply

Your email address will not be published.

Blue Waves Media