Home / ಸುದ್ದಿಗಳು / ಅತ್ಯಾಚಾರಿಗಳ ಸಮರ್ಥಕರು ಬಳಸುತ್ತಿರುವ ಈ ಚಿತ್ರದ ನೈಜಾಂಶ ಏನು ಗೊತ್ತೇ?

ಅತ್ಯಾಚಾರಿಗಳ ಸಮರ್ಥಕರು ಬಳಸುತ್ತಿರುವ ಈ ಚಿತ್ರದ ನೈಜಾಂಶ ಏನು ಗೊತ್ತೇ?

ಸುದ್ದಿವಾಹಿನಿ ಡಾಟ್ ಕಾಂ: ಮುಜುಗರವನ್ನು ತಪ್ಪಿಸಲು ಯಾವೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ.

ಕಾಶ್ಮೀರದಲ್ಲಿನ ದೇವಸ್ಥಾನದಲ್ಲಿ ಆಸಿಫಾ ಎಂಬ ಬಾಲಕಿಯನ್ನು ಸತತ ಅತ್ಯಾಚಾರ ನಡೆಸಿ ಕೊಂದು ಹಾಕಿದ್ದಲ್ಲದೆ, ಅತ್ಯಾಚಾರಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಪ್ರತಿಭಟನೆ ಮಾಡಿ ಹಾಗೂ ಅತ್ಯಾಚಾರಿಗಳನ್ನು ಸಮರ್ಥಿಸುವವರಿಗಾದ ಅವಮಾನ ಹಾಗೂ ಮುಜುಗರದಿಂದ ಬಚವಾಗಲು ಹರಿಯಬಿಡುತ್ತಿರುವ ಚಿತ್ರದ ಅಸಲಿಯತ್ತು ಬಯಲಾಗಿ ಮತ್ತೆ ಮುಜುಗರಕ್ಕೀಡಾಗಿದೆ.

ಜುಲೈ 2017 ರ ಆರಂಭದಲ್ಲಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಜಂಗೀಪುರ್ ಎಂಬಲ್ಲಿನ ಒತೆರಾ ಬೀಬಿ (42ವ) ಎಂಬ ಮುಸ್ಲಿಂ ಮಾನಸಿಕ ಅಸ್ವಸ್ಥೆಯನ್ನು ಮಕ್ಕಳ ಕಳ್ಳಿ ಎಂದು ಭಾವಿಸಿ, ಆ ಗ್ರಾಮಸ್ಥರು ಕಟ್ಟಿ ಹಾಕಿ ಅಮಾನುಷವಾಗಿ ಥಳಿಸಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಆಕೆಯು ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಆದರೆ ಆಕೆಯ ಮನೆಯವರು ಆಕೆಯನ್ನು ಹುಡುಕುವ ಪ್ರಯತ್ನ ಮಾಡಿರಲ್ಲಿಲ. ಏಕೆಂದರೆ ಆವಾಗಾವ ಈಕೆ ನಾಪತ್ತೆಯಾಗುತ್ತಿದ್ದಳು. ಒಂದೆರಡು ದಿನಗಳ ನಂತರ ವಾಪಾಸು ಬರುತ್ತಿದ್ದಳು.

ಅಲ್ಲಿನ ಸ್ಥಳಿಯರು ಈಕೆಯ ಮೇಲೆ ದೌರ್ಜನ್ಯ ನಡೆಸಿದ್ದರು. ಈ ಸಂಬಂಧವಾಗಿ ಖುತೆನಾ ಬಿಬಿ, ರಹಮತ್ ಮಿಯಾಂ, ಸಕಿನ ಬಿಬಿ, ಬುಧು ಮಿಯಾಂ ಸಹಿತ ಏಳು ಜನರನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಪ್ರವೀಣ್ ಕುಮಾರ್ ಶ್ರೀವಾತ್ಸವ್ ರವರು ತಿಳಿಸಿದ್ದರು.

ಆದರೆ ಆಸಿಫಾ ಪ್ರಕರಣದ ಮುಜುಗರದಿಂದ ಬಚವಾಗಲು ಆಸಿಫಾ ಅತ್ಯಾಚಾರಿಗಳ ಸಮರ್ಥಕರು ಈ ಚಿತ್ರವನ್ನು “ಹಿಂದೂ ಮಹಿಳೆಯನ್ನು ಥಳಿಸಿದ ಮುಸ್ಲಿಂ ಬಗ್ಗೆ ಯಾಕೆ ಮಾತಾಡುತ್ತಿಲ್ಲ” ಎಂಬ ತಲೆಬರಹ ಕೊಟ್ಟು ಸುಳ್ಸುದ್ದಿ ಹರಡಿಸಲಾಗುತ್ತಿದೆ.

ಈ ಬಗ್ಗೆ ಸತ್ಯಾಸತ್ಯತೆ ಅರಿಯಬೇಕಾದರೆ ಈ ಕೆಳಗೆ ಕೊಟ್ಟಿರುವ ಡೈಲಿ ಮೈಲ್ ಸುದ್ದಿ ಮಾಧ್ಯಮದ ಲಿಂಕ್ ತೆರೆದು ಓದಿ

htmlhttp://www.dailymail.co.uk/news/article-4660612/Mentally-disabled-woman-stripped-shaved-lynched.html

►►ಹೊಸ ಅಪ್ಡೇಟ್ ಗಳಿಗಾಗಿ ಕೆಳಗಿನ ಲಿಂಕ್ ತೆರೆದು  ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ
https://www.facebook.com/Suddivahininews/

Share this post
644Shares

Check Also

ಅತ್ಯಾಚಾರ ಮಾಡಿದ ವಿಡಿಯೋ ವೈರಲ್ ಮಾಡುವೆ ಎಂದ ಸೈನಿಕ; ಮಹಿಳೆ ಆತ್ಮಹತ್ಯೆ!

ಸುದ್ದಿವಾಹಿನಿ ಡಾಟ್ ಕಾಂ: ಸೈನಿಕನಿಂದ ಆತ್ಯಾಚಾರಕ್ಕೆ ಒಳಗಾಗಿದ ಮಹಿಳೆಯು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಮುಝಫ್ಫರ್ …

Leave a Reply

Your email address will not be published.

HOME
Blue Waves Media