Home / ಸುದ್ದಿಗಳು / ಕಾರ್ಟೂನಿಸ್ಟ್ ಸ್ವಾತಿ ಹಾಗೂ ಪತ್ರಕರ್ತ ಶಬ್ಬೀರ್ ವಿರುದ್ಧ FIR ದಾಖಲಿಸಿದ ಹಿಂದೂ ಸಂಘಟನೆ!

ಕಾರ್ಟೂನಿಸ್ಟ್ ಸ್ವಾತಿ ಹಾಗೂ ಪತ್ರಕರ್ತ ಶಬ್ಬೀರ್ ವಿರುದ್ಧ FIR ದಾಖಲಿಸಿದ ಹಿಂದೂ ಸಂಘಟನೆ!

ಸುದ್ದಿವಾಹಿನಿ ಡಾಟ್ ಕಾಂ: ಕಾಶ್ಮೀರದ ದೇವಸ್ಥಾನದಲ್ಲಿ ಎಂಟು ವರ್ಷ ಪ್ರಾಯದ ಆಸಿಫಾ ಬಾನೋ ಬಾಲಕಿಯನ್ನು ಸತತ ನಾಲ್ಕು ದಿನಗಳ ಕಾಲ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣವು ದೇಶಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿದೆ. ಈ ಹೀನ ಕೃತ್ಯವನ್ನು ಕೇವಲ ಭಾರತ ಮಾತ್ರವಲ್ಲದೆ, ವಿಶ್ವದಾದ್ಯಂತ ಜನರು ಹಾಗೂ ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.

ಎಂಟರ ಹರೆಯದ ಬಾಲಕಿಯನ್ನು ಮೃಗೀಯವಾಗಿ ಅತ್ಯಾಚಾರ ಮಾಡಿರುವುದಲ್ಲದೆ, ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ಈ ಆಘಾತಕಾರಿ ಘಟನೆಗಿಂತಲೂ ಇಡೀ ವಿಶ್ವವನ್ನು ದಂಗಾಗಿಸಿರುವುದು ಅದರ ನಂತರದ ಬೆಳವಣಿಗೆಗಳು. ಮುಗ್ದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಪ್ರತಿಯೊಬ್ಬ ಮಾನವನು ಮರುಗ ಬೇಕಿತ್ತು. ಆದರೆ ದುರಾದ್ಟೃಷ್ಟವಶಾತ್ ಹಿಂದೂಪರ ಸಂಘಟನೆಗಳು ಅತ್ಯಾಚಾರ ಆರೋಪಿಗಳ ಪರ ಪ್ರತಿಭಟನೆ ನಡೆಸಿರುವುದು ಹಾಗೂ ಅದೇ ಮನಸ್ಥಿತಿಯ ಜನರು ಇವತ್ತಿಗೂ ಕೂಡಾ ಅತ್ಯಾಚಾರಿಗಳನ್ನು ಕುರುಡಾಗಿ ಸಮರ್ಥಿಸುತ್ತಿರುವುದು ಖೇಧಕರವಾಗಿದೆ.ತ್ಯಾಚಿಗಳನ್ನು ಬೆಂಬಲಿಸುವವರ ಮನೆಯ ಬಾಲಕಿಯ ಮೇಲೆ ಈ ರೀತಿಯ ರಾಕ್ಷಸೀಯ ಕೃತ್ಯ ನಡೆದಿದ್ದರೆ ಇದೇ ರೀತಿ ಸಮರ್ಥಿಸುತ್ತಿದ್ದರೇ ಎಂದು ಜಗತ್ತು ಪ್ರಶ್ನಿಸುತ್ತಿದೆ.

ಈ ಘಟನೆಯ ಬಗ್ಗೆ ಹಲವಾರು ಕಾರ್ಟೂನಿಸ್ಟ್ ಗಳು ತಮ್ಮ ಲೇಖನಿಯ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದರು. ಇದೇ ರೀತಿ ತಮಿಳುನಾಡು ಮೂಲದ ಕಾರ್ಟೂನಿಸ್ಟ್ ಆಗಿರುವ ಸ್ವಾತಿ ವಡ್ಲಮುಂಡಿಯವರು ರಚಿಸಿರುವ ವ್ಯಂಗ್ಯಚಿತ್ರವು ಇಡೀ ದೇಶದ ಗಮನ ಸೆಳೆದಿತ್ತು. ಆ ವ್ಯಂಗ್ಯಚಿತ್ರದಲ್ಲಿ ಶ್ರೀ ರಾಮನೊಂದಿಗೆ ಸೀತೆಯು “ನನಗೆ ಸಂತೋಷವಾಗಿದೆ. ನನ್ನನ್ನು ಅಪಹರಿಸಿದ್ದು ರಾವಣ, ನಿನ್ನ ಭಕ್ತರಲ್ಲ” ಎಂಬ ವಾಕ್ಯವು ಹಿಂದೂಪರ ಸಂಘಟನೆಯ ಕಣ್ಣು ಕೆಂಪಾಗಿಸಿತ್ತು. ಈ ವ್ಯಂಗ್ಯಚಿತ್ರ ರಚಿಸಿರುವ ಸ್ವಾತಿ ವಡ್ಲಮುಂಡಿ ಹಾಗೂ ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದ ಪತ್ರಕರ್ತ ಅಹ್ಮದ್ ಶಬ್ಬೀರ್ ವಿರುದ್ಧ ಹೈದರಾಬಾದ್ ನ ಸೈದಾಬದ್ ಠಾಣೆಯಲ್ಲಿ ಹಿಂದೂ ಸಂಘಟನೆಯು ಹಿಂದೂಗಳ ಭಾವನೆ ಧಕ್ಕೆಯಾಗಿದೆ ಎಂದು FIR ದಾಖಲಿಸಿದೆ.

ಇವರ ಈ ಕಾರ್ಟೂನ್ ಗೆ ಹಲವಾರು ದ್ವೇಷದ ಕಾಮೆಂಟ್ಸ್ ಗಳು ಬಂದಿವೆ. ಅದರಲ್ಲಿ “ಇನ್ನೊಂದು ಚಾರ್ಲಿ ಹೆಬ್ಡೋ” ಘಟನೆ ನಡೆಸುವ ಸಮಯ ಬಂದಿದೆ ಎಂದು ಬರೆದಿರುವ ಕಾಮೆಂಟ್ ನ ಸ್ಕ್ರೀನ್ ಶಾಟ್ ಅನ್ನೂ ಕೂಡಾ ಶೇರ್ ಮಾಡಿದ್ದಾರೆ.

ಈ FIR ವಿಷಯವನ್ನು ತಮ್ಮ ಸಾಮಾಜಿಕ ತಾಣದ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆಗಳಿಂದ ಪ್ರಭಾವಿತರಾಗಿರುವ ಸ್ವಾತಿಯವರು, ನಿಮ್ಮ ಪ್ರೀತಿಗೆ ಋಣಿಯಾಗಿದ್ದೇನೆ. ನಿಮ್ಮ ಪ್ರೀತಿಗಾಗಿ ಜೈಲುವಾಸ ಅನುಭವಿಸಲೂ ಸಿದ್ದ ಎಂದು ಪೋಸ್ಟ್ ಮಾಡಿದ್ದಾರೆ.

►►ಹೊಸ ಅಪ್ಡೇಟ್ ಗಳಿಗಾಗಿ ಕೆಳಗಿನ ಲಿಂಕ್ ತೆರೆದು  ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ
https://www.facebook.com/Suddivahininews/

Share this post
0Shares

Check Also

ಅತ್ಯಾಚಾರ ಮಾಡಿದ ವಿಡಿಯೋ ವೈರಲ್ ಮಾಡುವೆ ಎಂದ ಸೈನಿಕ; ಮಹಿಳೆ ಆತ್ಮಹತ್ಯೆ!

ಸುದ್ದಿವಾಹಿನಿ ಡಾಟ್ ಕಾಂ: ಸೈನಿಕನಿಂದ ಆತ್ಯಾಚಾರಕ್ಕೆ ಒಳಗಾಗಿದ ಮಹಿಳೆಯು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಮುಝಫ್ಫರ್ …

Leave a Reply

Your email address will not be published.

HOME
Blue Waves Media