Home / ಆರೋಗ್ಯ / ವಿವಾಹಿತ ಪುರುಷರನ್ನು ಮುಜುಗರಕ್ಕೀಡು ಮಾಡುವ ಸಮಸ್ಯೆಗೆ ಪರಿಹಾರ

ವಿವಾಹಿತ ಪುರುಷರನ್ನು ಮುಜುಗರಕ್ಕೀಡು ಮಾಡುವ ಸಮಸ್ಯೆಗೆ ಪರಿಹಾರ

ಮದುವೆಯಾಗಿರುವ ಪುರುಷರ ಸಮಸ್ಯೆಯನ್ನು ಮನಗಂಡು, ಮೇಲ್ನೋಟಕ್ಕೆ ಇದು ಮುಜುಗರವಾಗಿ ಕಂಡರೂ ಕೂಡಾ ಸಾಧಾರಣವಾಗಿ ಪುರುಷರು ತಮ್ಮ ಈ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳಲು ಮುಜುಗರ ಪಡುವ ವಿಷಯವಾಗಿರುವುದರಿಂದ, ಓದುಗರಿಗೆ ಪ್ರಯೋಜನಕಾರಿಯಾಗಲಿ ಎಂಬ ದೃಷ್ಟಿಯಲ್ಲಿ ಮಾಹಿತಿಯನ್ನು ಪ್ರಕಟಿಸುತ್ತಿದ್ದೇವೆ.

ಸಾಮಾನ್ಯವಾಗಿ ಮದುವೆಯಾಗಿರುವ ಕೆಲವು ಪುರುಷರಿಗೆ ಚಿಂತೆಗೀಡು ಮಾಡುವ ಸಮಸ್ಯೆ ಎಂದರೆ  ಶಿಶ್ನ (ಪುರುಷರ ಜನನಾಂಗ) ನಿಮಿರುವಿಕೆಯಾಗಿದೆ. ಈ ಸಮಸ್ಯೆಯಿಂದಾಗಿ ಮಿಲನ ಸಮಯದಲ್ಲಿ ಸಂಗಾತಿಗೆ ಪೂರ್ಣ ಪ್ರಮಾಣದ ಸಂತೃಪ್ತಿ ನೀಡಲು ವಿಫಲರಾಗಿ ಮುಜುಗರಗೊಂಡು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಈ ಸಮಸ್ಯೆಯನ್ನು ಹಲವರು ವೈದ್ಯರ ಬಳಿ ಹೇಳಿಕೊಳ್ಳಲೂ ಹಿಂಜರಿಯುತ್ತಾರೆ. ತಮ್ಮ ದೌರ್ಬಲ್ಯವು ಯಾರಿಗಾದರು ತಿಳಿದರೆ, ಅವರು ಕುಹಕವಾಡುವ ಅಥವ ಗೇಲಿ ಮಾಡುವ ಅವಕಾಶಗಳಿರುತ್ತವೆ ಎಂಬ ಕಾರಣಕ್ಕಾಗಿ ಈ ಸಮಸ್ಯೆಯನ್ನು ಹೇಳಿಕೊಳ್ಳದೆ, ಒಳಗೊಳಗೆ ಜರ್ಜಿತರಾಗುತ್ತಾ ಹೋಗುತ್ತಾರೆ. ಈ ಸಮಸ್ಯೆಗಳು ಬರಲು ಕಾರಣಗಳೇನು ಹಾಗೂ ಈ ಸಮಸ್ಯೆಯನ್ನು ನಮ್ಮ ನಿತ್ಯ ಕರ್ಮಗಳಿಂದ ನಿಧಾನವಾಗಿ ಹೇಗೆ ದೂರ ಮಾಡಬಹುದಾಗಿದೆ ಎಂದು ನೋಡೊಣ.

ಸಮಸ್ಯೆಗೆ ಕಾರಣಗಳೇನು?

1) ದೈಹಿಕ ಸಮಸ್ಯೆ: ಯಾವುದೇ ಕಾರಣದಿಂದಾಗಿ ಪುರುಷರ ಜನನಾಂಗಕ್ಕೆ ರಕ್ತ ಸರಬರಾಜು ಮಾಡುವ ನರಕ್ಕೆ ಪೆಟ್ಟು ಬಿದ್ದಿದ್ದರೆ ಅಥವ ಹಾನಿಯಾಗಿದ್ದರೆ.
2) ಆರೋಗ್ಯದ ಸಮಸ್ಯೆ: ಮಧುಮೇಹ (ಶುಗರ್), ರಕ್ತದೊತ್ತಡ (ಹೈ ಬ್ಲಡ್ ಪ್ರೆಶರ್) ಆತಂಕ, ಒತ್ತಡ ಮತ್ತು ಖಿನ್ನತೆ.
3) ಮದ್ದು, ಮಾತ್ರೆ ಸೇವನೆಗಳ ಸೈಡ್ ಎಫೆಕ್ಟ್
4) ವಿಪರೀತ ಶರಾಬು ಕುಡಿತ ಅಥವ ಧೂಮಪಾನ (ಸ್ಮೋಕಿಂಗ್)
5) ಕ್ಯಾನ್ಸರ್ ಸಂಬಂಧಿತ ಸರ್ಜರಿ

ಮುಂತಾದ ಕಾರಣಗಳಿಂದ ಪುರುಷರು ಈ ಸಮಸ್ಯೆಗೊಳಗಾಗುತ್ತಾರೆ. ಈ ಸಮಸ್ಯೆಯಿಂದ ಸಮಧಾನ ಪಡೆಯಲು ಅಥವ ಈ ಸಮಸ್ಯೆ ಬರುವ ಮೊದಲೆ ಪುರುಷರು ಏನು ಮಾಡಬೇಕು?

1) ಕೊಲೆಸ್ಟ್ರಾಲ್ ಇರುವ ಆಹಾರವನ್ನು ಸೇವಿಸಬಾರದು. ಸಮಯಕ್ಕೆ ಸರಿಯಾಗಿ ಅಗತ್ಯಕ್ಕೆ ತಕ್ಕಂತೆ ಆಹಾರ ಸೇವಿಸುತ್ತಾ ಇರಬೇಕು.
2) ವಿಪರೀತ ಧೂಮಪಾನ ಹಾಗೂ ಶರಾಬು ಸೇವನೆಯು ಶಿಶ್ನದ ರಕ್ತನಾಳ ಹಾಗೂ ನಿಮಿರುವಿಕೆಗೆ ಹಾನಿಯುಂಟು ಮಾಡುತ್ತದೆ.
3) ನಿದ್ರಾಹೀನತೆಯಿಂದ ಆಗುವ ಹಾರ್ಮೋನ್ ಗಳಲ್ಲಿನ ಅಸಮತೋಲನವು ಸಮಸ್ಯೆಯುಂಟು ಮಾಡುತ್ತದೆ. ಹಾಗಾಗಿ ಪ್ರತಿದಿನ 6-8 ಗಂಟೆಗಳಷ್ಟು ನಿದ್ರಿಸಿ.
4) ಒತ್ತಡದ ಪರಿಸ್ಥಿತಿ: ಸಾಮಾನ್ಯವಾಗಿ ಆಗುವ ಕೆಲಸದ ಒತ್ತಡ, ಕೌಟುಂಬಿಕ ಒತ್ತಡಗಳು ಕೂಡಾ ಈ ಸಮಸ್ಯೆಗೆ ಕಾರಣವಾಗುತ್ತವೆ.
5) ಅತಿಯಾದ ಹಸ್ತ ಮೈಥುನ ಮಾಡುವುದರಿಂದ ನರಗಳು ದುರ್ಬಲಗೊಳ್ಳುವ ಕಾರಣದಿಂದಾಗಿಯೂ ಶಿಶ್ನ ನಿಮಿರುವಿಕೆಗೆ ಸಮಸ್ಯೆಯುಂಟು ಮಾಡುತ್ತದೆ. ಹಸ್ತ ಮೈಥುನದ ಬದಲು ಲೈಂಗಿಕ ಕ್ರಿಯೆಗೆ ಹೆಚ್ಚಿನ ಒತ್ತು ಕೊಡಿ.
6) ಹೊಟ್ಟೆ ಬಿರಿಯುವಂತೆ ಅತಿಯಾಗಿ ಊಟ ಮಾಡಬೇಡಿ. ಬರ್ಗರ್, KFC ಯಂತಹಾ ಜಂಕ್ ಫುಡ್ ಗಳಿಂದ ದೂರವಿರಿ.
7) ಲೈಂಗಿಕ ಕ್ರೀಯೆಯ ಸಮಯದಲ್ಲಿ ತುರಾತುರಿಯಲ್ಲಿ ಸಂಭೋಗದ ಹಂತಕ್ಕೆ ಹೋಗದೆ, ಮೊದಲು ಆ ಹಂತಕ್ಕೆ ಬರಲು ಸಿದ್ದರಾಗಲು ಸಂಗಾತಿಯೊಂದಿಗೆ ಸಂಭೋಗ ಪೂರ್ವ ರಸ ಕಾರ್ಯಗಳನ್ನು (Foreplay) ಮಾಡಿ.
8) ದಿನ ನಿತ್ಯ ನಿಯಮಿತ ವ್ಯಾಯಾಮ ಮಾಡಿ.
9) ಶಿಶ್ನವು ಬಹಳ ನಾಜೂಕಾದ ಅಂಗವಾಗಿರುವ ಕಾರಣ ಶಿಶ್ನದ ಮೇಲೆ ಭಾರ, ಒತ್ತಡ ಅಥವ ಶಿಶ್ನಕ್ಕೆ ಹಾನಿಯಾಗುವಂತಹ ಸಂಭೋಗದ ಭಂಗಿಯನ್ನು (sex position) ಮಾಡಬೇಡಿ.

10) ವಿರ್ಯಾಣುಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪತ್ತಿ ಮಾಡಲು ಸಹಕಾರಿಯಾಗಿರುವ ಪೌಷ್ಟಿಕಾಂಶ ಭರಿತ (ಮಾಂಸಾಹಾರ/ ಸಸ್ಯಾಹಾರ) ಆಹಾರಗಳನ್ನು ಸೇವಿಸಿ.
11) ನುಗ್ಗೆಕಾಯಿ ವಾರಕ್ಕೆರಡು ಸಲ ಪದಾರ್ಥ ಮಾಡಿ ಅಥವಾ ಬೇಯಿಸಿ ರಸ ಕುಡಿಯುವುದು ಪ್ರಯೋಜನಕಾರಿಯಾಗಿದೆ.
12) ಗ್ರೀನ್ ಟಿ (Green Tea)  ಯನ್ನು ಹೆಚ್ಚು ಕುಡಿಯಿರಿ.

 

Share this post
929Shares

Leave a Reply

Your email address will not be published.

HOME
Blue Waves Media