Home / ಸುದ್ದಿಗಳು / ತನ್ನ ತಿಜೋರಿಗೆ ಬೀಗವೇ ಹಾಕದ ಏಕೈಕ ದಾನಿಯ ಬಗ್ಗೆ ಕೇಳಿದ್ದೀರಾ?

ತನ್ನ ತಿಜೋರಿಗೆ ಬೀಗವೇ ಹಾಕದ ಏಕೈಕ ದಾನಿಯ ಬಗ್ಗೆ ಕೇಳಿದ್ದೀರಾ?

ಸುದ್ದಿವಾಹಿನಿ ಡಾಟ್ ಕಾಂ: ತನ್ನ ಜೀವಮಾನವನ್ನೇ ಸಮಾಜದ ಉದ್ಧಾರಕ್ಕಾಗಿ ಮುಡಿಪಾಗಿಟ್ಟು, ತನ್ನ ಅಗರ್ಭ ಶ್ರೀಮಂತಿಕೆಯನ್ನು ದಾನ ಮಾಡುತ್ತಾ ಸಾಗಿ ಕೊನೆಗೆ ತನ್ನ ಕಷ್ಟ ಕಾಲದಲ್ಲಿ ಯಾರೂ ಇಲ್ಲದೆ ಒಬ್ಬಂಟಿಯಾಗಿ ಆತ್ಮಹತ್ಯೆ ಮಾಡಿಕೊಂಡ ದುರಂತ ನಾಯಕನೇ ಉಡುಪಿಯ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬ್ ಬಹದ್ದೂರ್ ರವರು. ಉಡುಪಿ ಹಾಜಿ ಅಬ್ದುಲ್ಲಾ ಎಂದೇ ಪರಿಚಿತರು.

ತನ್ನ ಇಡಿ ಜೀವನವನ್ನೇ ಸಮಾಜದ ಸೇವೆಗೆ ಮುಡಿಪಾಗಿಟ್ಟು, ತನ್ನ ಹುಟ್ಟಿದ ದಿನವನ್ನೇ ಕತ್ತಲೆಯಲ್ಲಿಟ್ಟ ದುರಂತ ನಾಯಕ ಹಾಜಿ ಅಬ್ದುಲ್ಲಾ ಸಾಹೇಬರು. ಕರಾವಳಿಯಲ್ಲಿ ಬ್ರಿಟೀಷರು ಬ್ಯಾಂಕ್ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಉಡುಪಿಯಲ್ಲಿ ಪ್ರಥಮ ಸ್ವದೇಶಿ ಬ್ಯಾಂಕ್ (ಕಾರ್ಪೋರೇಶನ್ ಬ್ಯಾಂಕ್) ಸ್ಥಾಪಿದ್ದರು. ತನ್ನ ಖಜಾನೆಯಿಂದ ಪ್ರತಿದಿನ 100 ಮುಡಿ ಅಕ್ಕಿಯನ್ನು ಬಡವರಿಗೆ ದಾನ ಮಾಡುತ್ತಿದ್ದರು. ತನ್ನ ತಿಜೋರಿಗೆ ಯಾವತ್ತೂ ಬೀಗ ಹಾಕದ ಹಾಗೂ ಸಹಯ ಬೇಡಿದವರಿಗೆ ಹಿಡಿ ಮುಷ್ಟಿಯಲ್ಲಿ ಬಂದಷ್ಟು ಕಣ್ಣು ಮುಚ್ಚಿಕೊಡುತ್ತಿದ್ದರು. ಸುಮಾರು 700 ಎಕ್ರೆಗೂ ಮಿಕ್ಕಿದ ಜಮೀನಿನ ಒಡೆಯನಿಗೆ ತನ್ನ ಜಮೀನು ಎಲ್ಲೆಲ್ಲಿ ಇದೆ ಎಂದು ಲೆಕ್ಕವಿಡದ ಅಗರ್ಭ ಶ್ರೀಮಂತ. ಬರಗಾಲದ ಸಮಯದಲ್ಲಿ ಇತರ ಜಮೀನುದಾರರು ತಮ್ಮ ಗೇಣಿದಾರರನ್ನು ಸತಾಯಿಸಿ, ಅವರಿಂದ ಅಕ್ಕಿಯನ್ನು ದೋಚುತ್ತಿದ್ದರೆ, ಇವರು ಮಾತ್ರ “ನನ್ನ ಬೊಕ್ಕಸ ತುಂಬಲು ನೀವೆ ಕಾರಣ, ಹಾಗಾಗಿ ಕಷ್ಟ ಕಾಲದಲ್ಲಿ ನಿಮ್ಮ ಹೊಟ್ಟೆ ತುಂಬಿಸುವುದ ನನ್ನ ಕರ್ತವ್ಯ” ಎನ್ನುತ್ತಾ ಅವರು ಪಡೆದಿದ್ದ ಸಾಲವನ್ನು ಮನ್ನಾ ಮಾಡಿದ್ದಲ್ಲದೆ, ಅವರಿಗೆ ಬೇಕಾದ ಅಕ್ಕಿ, ಧವಸ ಧಾನ್ಯಗಳನ್ನು ದಾನ ಮಾಡಿದ ದಾನಶೂರ.

ದಲಿತರಿಗೆ ಶಾಲೆಗೆ ಪ್ರವೇಶ ನಿರಾಕರಿಸಿದ್ದ ಕಾಲದಲ್ಲಿ, ದಲಿತರಿಗಾಗಿ ಶಾಲೆ ಕಟ್ಟಲು ಒಂದು ಎಕ್ರೆ ಜಮೀನನ್ನು ದಾನ ಮಾಡಿ ಮಾಡಿದ್ದಲ್ಲದೆ, ಆ ಶಾಲೆಗೆ ದೂರದ ಊರಿನಿಂದ ಶಿಕ್ಷಕರನ್ನು ಕಲಿಸಿ ದಲಿತರೂ ಕೂಡಾ ಶಿಕ್ಷಣ ಪಡೆಯುವಂತೆ ಮಾಡಿದ ದಲಿತ್ತೋದ್ದಾರಕನಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧಿಜಿಯವರ ಉಡುಪಿಯ ಏಕೈಕ ಭೇಟಿಯ ಸಮಯದಲ್ಲಿ, ಅವರ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ದಾನ ಮಾಡಿದ ಧನ ಸಹಾಯವು ಆ ಕಾಲದಲ್ಲಿ ಬರೋಬ್ಬರಿ ಒಂದು ಲಕ್ಷ ರೂಪಾಯಿಗಳು. ಲಕ್ಷದೀಪದ ಸಮಯದಲ್ಲಿ ಎಣ್ಣೆ, ಕರ್ಪೂರ, ಬತ್ತಿಗಳಿಗೂ ಪರದಾಡುತ್ತಿದ್ದ ಶ್ರೀಕೃಷ್ಣ ಮಠಕ್ಕೆ ತನ್ನ ಬಂಡಸಾಲೆಯಿಂದ ಬೇಕಾದ ವಸ್ತುಗಳು ಸರಬರಾಜಾಗುತ್ತಿತ್ತು. ಮಠದಲ್ಲಿ ಸಂಗ್ರಹವಾದ ಮೊತ್ತದಲ್ಲಿ ಮಠದವರು ಕೊಟ್ಟ ಮೊತ್ತವನ್ನು ಪಡೆಯುತ್ತಿದ್ದರು. ಉಳಿದ ಹಣವನ್ನು ಯಾವತ್ತೂ ಕೇಳುತ್ತಿರಲಿಲ್ಲ. ಒಂದು ಲಕ್ಷದೀಪದ ಸಮಯದಲ್ಲಿ ಮಳೆಯಿಂದಾಗಿ ದೀಪಗಳು ನಂದಿ ಹೋದಾಗ, ಸ್ವತಃ ಹಾಜಿ ಅಬ್ದುಲ್ಲಾರವರು ಉಚಿತವಾಗಿ ಲೀತರು ಗಟ್ಟಲೆ ಎಣ್ಣೆ, ಕರ್ಪೂರ, ಬತ್ತಿಗಳನ್ನು ನೀಡಿದ್ದರು. ರಾಜ ಮಹಾರಾಜರಿಗೆ ನೀಡುತ್ತಿದ್ದ “ಹಗಲು ದೀವಟಿಗೆ” ಮರ್ಯಾದೆಯನ್ನು ಇವರಿಗೆ ಸಿಗುತ್ತಿತ್ತು ಎಂದರೆ ಇವರ ವ್ಯಕ್ತಿತ್ವವನ್ನು ಲೆಕ್ಕ ಹಾಕಬಹುದಾಗಿದೆ.

ತಾನೇ ಸ್ಥಾಪಿಸಿ ಬೆಳೆಸಿದ ಬ್ಯಾಂಕ್ ನಿಂದ ಸಾಲ ಪಡೆದು ಖರೀದಿಸಿದ್ದ ಮೂರು ಹಡಗುಗಳು ಶ್ರೀಲಂಕಾ ಕಡೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಬಿರುಗಾಳಿಗೆ ಸಿಲುಕಿ ಮುಳುಗಿ ಹೋಗಿದ್ದವು. ಆದರೆ ಅಲ್ಲಿ ಕೇವಲ ಹಡಗು ಮುಳುಗಿರಲಿಲ್ಲ ಬದಲಾಗಿ ಉಡುಪಿಯ ಮಹಾನ್ ಚೇತನದ ಅಂತ್ಯ ಪರ್ವವು ಆರಂಭವಾಗಿತ್ತು. ಇಲ್ಲಿ ಆದ ನಷ್ಟವನ್ನು ಕಾರ್ಪೋರೇಷನ್ ಬ್ಯಾಂಕ್ ನ ಕೆಲವು ಪಟ್ಟಭದ್ರ ಅಧಿಕಾರಿಗಳು ಸಿಕ್ಕಿದ್ದೇ ಅವಕಾಶ ಎಂದು ಸಾಲ ಮರುಪಾವತಿಗೆ ಪೀಡಿಸಿದ್ದರು. ತನ್ನ ಸರ್ವಸ್ವವನ್ನೂ ಜನರಿಗಾಗಿ ಮುಡಿಪಾಗಿಟ್ಟಿದ್ದ ನನ್ನ ಕಷ್ಟ ಕಾಲದಲ್ಲಿ ಯಾರೂ ಇಲ್ಲವಲ್ಲ ಎಂದು ಕೊರಗಿ ತನ್ನ ಬೆರಳಲ್ಲಿದ್ದ ವಜ್ರದ ಉಂಗುರವನ್ನು ಸೇವಿಸಿ ಇಹಲೋಕ ತ್ಯಜಿಸಿದ್ದರು. ಜೀವನವಿಡೀ ಕರ್ಪೂರದಂತೆ ಬೆಳಗಿ ಸಮಾಜವನ್ನು ಬೆಳಗಿಸಿದ ದೀಪವೊಂದು ನಂದಿ ಹೋಯಿತು. ಅವರ ಔದಾರ್ಯವೇ ಉರುಳಾಗಿ ಪರಿಣಮಿಸಿತು.

ಇವರ ಜೀವನ ಚರಿತ್ರೆಯನ್ನು ಉಡುಪಿಯ ತರುಣರಾದ, ಹೆಜ್ಜೆ ಗುರುತು ತಂಡವು ಬಹಳ ಸುಂದರ ಶೈಲಿಯಲ್ಲಿ ಚಿತ್ರೀಕರಿಸಿದ್ದಾರೆ. ಒಂದು ಗಂಟೆ ಸಮಯದ ಈ ವಿಡಿಯೋ ಇಯರ್ ಫೋನ್ ಹಾಕಿ ಫ್ರೀ ಇರುವಾಗ ತಪ್ಪದೆ ವೀಕ್ಷಿಸಿ. ಈ ಯುವಕರ ಪ್ರಯತ್ನವು ನಿಮ್ಮನ್ನು ಹಾಜಿ ಅಬ್ದುಲ್ಲಾರವರ ಕಾಲಕ್ಕೆ ನಿಮಗರಿವಿಲ್ಲದಂತೆ ಕೊಡೊಯ್ಯುತ್ತದೆ. ಈ ವಿಡಿಯೋ ಮುಗಿದ ನಂತರವೂ ಅದರ ಗುಂಗಿನಿಂದ ಹೊರ ಬರಲು ಸಮಯ ತಗಲುತ್ತದೆ ಖಂಡಿತಾ. ನಮ್ಮ ಸ್ಥಳೀಯ ಯುವಕರು ಈ ರೀತಿಯಾದ ಅಂತರಾಷ್ಟ್ರೀಯ ಕ್ವಾಲಿಟಿಯ ಸಾಕ್ಷಚಿತ್ರವನ್ನೂ ಮಾಡ ಬಲ್ಲರು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿಗೆ ತಪ್ಪದೆ ವೀಕ್ಷಿಸಿದ ನಂತರ ನಿಮ್ಮ ಅಭಿಪ್ರಾಯವನ್ನು ಈ ಯೂಟ್ಯೂಬ್ ವಿಡಿಯೋದ ಕೆಳಗೆ ಕಾಮೆಂಟ್, ಲೈಕ್ ಮಾಡಿ ಯುವಕರನ್ನು ಹುರಿದುಂಬಿಸಿ.
script : Shrikanth Shetty
editing : Nitish Rao
camera : Shashikanth Shetty
graphics : Gururaj  B
voice : former minister Jayaprakash hegde / Avinash Kamath

ವಿಡಿಯೋ ನೋಡಿ:

 

Share this post
478Shares

Check Also

ಕೇಜ್ರಿವಾಲ್ ರ ಭೇಟಿಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ನಿರಾಕರಣೆ!

ಸುದ್ದಿವಾಹಿನಿ ಡಾಟ್ ಕಾಂ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾಗಲು ದಿಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್ ರವರು ಅನುಮತಿ …

Leave a Reply

Your email address will not be published.

Blue Waves Media