

ಸುದ್ದಿವಾಹಿನಿ ಡಾಟ್ ಕಾಂ: ಬಸ್ಸು, ಕಾರು, ಬೈಕುಗಳು ರಸ್ತೆಯ ಮೇಲೆ ಓಡಾಡುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಬೈಕುಗಳನ್ನು ಮಾರಾಟ ಮಾಡುವ ಶೋ ರೂಂ ಒಂದು ರಸ್ತೆಯ ಮೇಲೆ ಓಡಾಡುತ್ತದೆ ಎಂದರೆ ನಂಬುತ್ತೀರಾ?
ಹೌದು …. ನಂಬಲೇ ಬೇಕು. ಇದು ಸಾಮಾನ್ಯ ಬೈಕುಗಳ ವಿಷಯವಲ್ಲ. ವಿಶ್ವವಿಖ್ಯಾತ ಅಮೇರಿಕನ್ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ಬೈಕುಗಳ ಶೋ ರೂಂ. ಜೀವನದಲ್ಲೊಮ್ಮೆಯಾದರೂ ಹಾರ್ಲೆ-ಡೇವಿಡ್ಸನ್ ಬೈಕ್ ಓಡಿಸ್ಬೇಕು ಎಂಬುದು ಪ್ರತಿ ಯುವಕನ ಕನಸಾಗಿರುತ್ತದೆ. ಹಾರ್ಲೆ-ಡೇವಿಡ್ಸನ್ ಬೈಕ್ ರಸ್ತೆಯಲ್ಲಿ ಸಾಗುತ್ತಿದ್ದರೆ, ಅದನ್ನು ನೋಡುವುದೇ ಒಂದು ಚಂದ. ಅಂತಹದರಲ್ಲಿ ಹಾರ್ಲೆ-ಡೇವಿಡ್ಸನ್ ಬೈಕ್ ನ ಶೋರೂಂ ರಸ್ತೆ ಓಡುತ್ತೆ ಎಂದ ಮೇಲೆ ಅದೆಷ್ಟು ಕುತೂಹಲಕಾರಿಯಾಗಿರಲಿದೆ ಅಲ್ವಾ?
ಮಹಾರಾಷ್ಟ್ರದ ಪುಣೆ ಮೂಲದ ಪ್ರಖ್ಯಾತ ವಾಹನ ಪುನರ್ವಿನ್ಯಾಸ ಸಂಸ್ಥೆಯಾದ DC Design (Dilip Chhabria) ಈ ಚಲಿಸುವ ಶೋರೂಂ ಅನ್ನು ಪುನರ್ವಿನ್ಯಾಸಗೊಳಿಸಿದೆ. ಕಾಲು ಶತಮಾನಗಳ ಇತಿಹಾಸವಿರುವ ಡಿಸಿ ಸಂಸ್ಥೆಯು ಭಾರತಾದ್ಯಂತ ಪ್ರಖ್ಯಾತ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯು ತಯಾರಿಸಿರುವ ಈ ಚಲಿಸು ಶೋರೂಂ ನೋಡುವುದೇ ಒಂದು ಕುತೂಹಲ. ಇದೇ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯುವ ಸಲುವಾಗಿ, ವಿಭಿನ್ನವಾದ ಪ್ರಯೋಗ ಮಾಡಬೇಕೆಂಬ ಉದ್ದೇಶದಿಂದ ಈ ಚಲಿಸುವ ಶೋರೂಂ ನಿರ್ಮಿಸಿದ್ದೇವೆ ಎಂದು ಹಾರ್ಲೆ-ಡೇವಿಡ್ಸನ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ