Home / ಕ್ರೀಡೆ / ಆಯುಧ ಕೆಳಗಿಟ್ಟಿದ್ದೇನೆ ಹೊರತು ಬಳಸುವುದು ಮರೆತಿಲ್ಲ: ಸೆಹ್ವಾಗ್

ಆಯುಧ ಕೆಳಗಿಟ್ಟಿದ್ದೇನೆ ಹೊರತು ಬಳಸುವುದು ಮರೆತಿಲ್ಲ: ಸೆಹ್ವಾಗ್

ಸುದ್ದಿವಾಹಿನಿ ಡಾಟ್ ಕಾಂ: ಮಂಜುಗಡೆಯ ಮೇಲೆ ಸ್ಪೋಟಕ ಬ್ಯಾಟಿಂಗ್ ಮಾಡಿದ ನಂತರ ಟೀಂ ಇಂಡಿಯಾ ಮಾಜಿ ಆಟಗಾರ ವೀರೆಂದ್ರ ಸೆಹ್ವಾಗ್ ರವರು ತಮ್ಮ ಟ್ವಿಟರ್ ಖಾತೆಯಲ್ಲಿ “ಆಯುಧ ಕೆಳಗಿಟ್ಟಿದ್ದೇನೆ ಹೊರತು ಬಳಸುವುದನ್ನು ಮರೆತಿಲ್ಲ” ಎಂದು ಟೀಟ್ ಮಾಡಿರುವುದು ವೈರಲ್ ಆಗುತ್ತಿದೆ.

ಸ್ವಿಝರ್ಲ್ಯಾಂಡ್ ನ ಸೈಂಟ್ ಮೇರಿಸ್ T20 ಟೂರ್ನಮೆಂಟ್ ನಲ್ಲಿ ಮಂಜು ಆವೃತ ಮೈದಾನದಲ್ಲಿ ಡೈಮಂಡ್ಸ್ ಇಲೆವೆನ್ ಪರವಾಗಿ ಆಡುತ್ತಾ ಆಫ್ರೀದಿ ರಾಯಲ್ಸ್ ವಿರುದ್ದ ಕೇವಲ 31 ಎಸೆತದಲ್ಲಿ 62 ರನ್ ಗಳಿಸಿದ್ದಾರೆ. ಇದರಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳು ಕೂಡಾ ಶಾಮೀಲಾಗಿವೆ. 200 ರ ಸ್ಟ್ರೈಕ್ ರೇಟ್ ಮೂಲಕ ಆಡಿದ ಸೆಹ್ವಾಗ್ 25 ಎಸೆತದಲ್ಲಿ ತನ್ನ ಅರ್ಧ ಶತಕ ಪೂರೈಸಿ ಮಂಜಿನ ಮೇಲೆ ಶತಕಾರ್ಧ ದಾಖಲಿಸಿದ ಮೊದಲ ಆಟಗಾರನಾದರು.

ಡೈಮಂಡ್ಸ್ ಇಲೆವೆನ್ ಪರವಾಗಿ ಸೆಹ್ವಾಗ್ ರವರ ಭರ್ಜರಿ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ 164 ರನ್ ಕಲೆ ಹಾಕಿತ್ತು. ಆದರೆ ಅಫ್ರಿದಿ ರಾಯಲ್ಸ್ ತಂಡವು ಈ ಲಕ್ಷ್ಯವನ್ನು 15.1 ಓವರ್ ಗಳಲ್ಲಿ ಬೆನ್ನಟ್ಟಿ ಜಯಶಾಲಿಯಾಗಿದೆ.

Share this post
0Shares

Check Also

ಡೆಲ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗಾಂಭೀರ್!

ಸುದ್ದಿವಾಹಿನಿ ಡಾಟ್ ಕಾಂ: ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಎರಡು ಪಂದ್ಯಗಳು ಬಾಕಿ ಇರುವಂತೆಯೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ …

Leave a Reply

Your email address will not be published.

Blue Waves Media