Home / ಸುದ್ದಿಗಳು / ಧರ್ಮಗಳಾಚೆಗೂ ಮತ್ತೊಮ್ಮೆ ಮಾನವೀಯತೆ ಮೆರೆದ ISF; ಬಂಧಮುಕ್ತರಾದ ವಿಜಯಾ

ಧರ್ಮಗಳಾಚೆಗೂ ಮತ್ತೊಮ್ಮೆ ಮಾನವೀಯತೆ ಮೆರೆದ ISF; ಬಂಧಮುಕ್ತರಾದ ವಿಜಯಾ

ಸುದ್ದಿವಾಹಿನಿ ಡಾಟ್ ಕಾಂ-ದಮಾಮ್, ನ.23: ಮನೆ ಕೆಲಸದ ಉದ್ಯೋಗಕ್ಕೆಂದು ಸೌದಿಅರೇಬಿಯಕ್ಕೆ ತೆರಳಿ ಸಂಕಷ್ಟಕ್ಕೀಡಾಗಿದ್ದ ಮಂಗಳೂರು ವಾಮಂಜೂರಿನ ಮಹಿಳೆಯನ್ನು ಪಾರುಮಾಡಲು ಇಂಡಿಯನ್ ಸೋಶಿಯಲ್ ಫೋರಮ್ ನಡೆಸಿದ ಪ್ರಯತ್ನವು ಯಶಸ್ವಿಯಾಗಿದೆ.

ಸಂತ್ರಸ್ತ ಮಹಿಳೆ ವಿಜಯಾ (44) ಅವರು ಇದೇ ನವೆಂಬರ್ 26ರಂದು ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಈ ಬಗ್ಗೆ ಸೌದಿಪ್ರಾಯೋಜಕನು ಇಂಡಿಯನ್ ಸೋಶಿಯಲ್ ಫೋರಮ್ ಗೆ ಖಚಿತಪಡಿಸಿದ್ದು, ಪ್ರಾಯೋಜಕನೇ ನೇರವಾಗಿ ದಮಾಮ್ ವಿಮಾನ ನಿಲ್ದಾಣಕ್ಕೆ ಕರೆತಂದು ಎಮಿಗ್ರೇಶನ್ ವ್ಯವಸ್ಥೆ ಮಾಡುವುದಾಗಿಯೂ ಇಂಡಿಯನ್ ಸೋಶಿಯಲ್ ಫೋರಮ್ ಗೆ ತಿಳಿಸಿದ್ದಾನೆ.

ಬಡ ಕುಟುಂಬದ ಆಸರೆಯಾಗಿದ್ದ ವಿಜಯಾರವರು 2015ರಲ್ಲಿ ಸೌದಿಅರೇಬಿಯದ ದಮಾಮ್ ಗೆ ತೆರಳಿದ್ದರು. ಮೊದಲ ಮೂರು ತಿಂಗಳ ಕಾಲ ಮಾತ್ರ ಮನೆಯವರೊಂದಿಗೆ ಸಂಪರ್ಕದಲ್ಲಿದ್ದು ಅನಂತರದ ದಿನಗಳಲ್ಲಿ ವಿಜಯಾರವರು ಸರಿಯಾಗಿ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಇದರಂದಾಗಿ ಅನಾರೋಗ್ಯಪೀಡಿತ ಪತಿ ಬಾಲಪ್ಪ ಬಾಲಕೃಷ್ಣ ಮತ್ತು ಮಗ ಜಗಜೀವನ್ ಸಾಕಷ್ಟು ಸಂಕಟ ಮತ್ತು ಆತಂಕಕ್ಕೊಳಗಾಗಿದ್ದರು. ಈ ಬಗ್ಗೆ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಇಂಡಿಯನ್ ಸೋಶಿಯಲ್ ಫೋರಮ್ ನ ಗಮನಕ್ಕೂ ತಂದಿದ್ದರು. ಹೀಗಾಗಿ ಪ್ರಕರಣವು ಭಾರತೀಯ ರಾಯಭಾರ ಕಚೇರಿಯಲ್ಲಿ ದಾಖಲಾಗಿ ಅವರ ಬಿಡುಗಡೆಗಾಗಿ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯಾಚರಿಸಿತ್ತು. ಇದೀಗ ಸೌದಿಪ್ರಾಯೋಜಕನು ವಿಜಯಾರನ್ನು ನೇರವಾಗಿ ಭೇಟಿಯಾಗಲು ಯಾರಿಗೂ ಅವಕಾಶ ನೀಡದೆ ನೇರವಾಗಿ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದಾನೆ. ನವೆಂಬರ್ 26ರಂದು ವಿಜಯಾರವರು ದಮಾಮ್ -ಮುಂಬೈ – ಮಂಗಳೂರು ಮಾರ್ಗವಾಗಿ ಮಂಗಳೂರಿಗೆ ಬಂದಿಳಿಯಲಿದ್ದಾರೆ.

ವಿಜಯಾ ಪ್ರಕರಣ ಶೀಘ್ರ ಇತ್ಯರ್ಥವಾಗಲು ಸಹಕರಿಸಿದ ಎಸ್ ಡಿಪಿಐ ಮುಖಂಡರಿಗೂ, ಸ್ಥಳೀಯರಾದ ಕೋದಂಡರಾಮ ಮತ್ತು ಮಾಧ್ಯಮ ಪ್ರತಿನಿಧಿಗಳಿಗೂ ಇಂಡಿಯನ್ ಸೋಶಿಯಲ್ ಫೋರಮ್ ಅಭಿನಂದನೆ ಸಲ್ಲಿಸುತ್ತದೆ.

Share this post
1108Shares

Check Also

ಕೇಜ್ರಿವಾಲ್ ರ ಭೇಟಿಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ನಿರಾಕರಣೆ!

ಸುದ್ದಿವಾಹಿನಿ ಡಾಟ್ ಕಾಂ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾಗಲು ದಿಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್ ರವರು ಅನುಮತಿ …

Leave a Reply

Your email address will not be published.

Blue Waves Media