Home / ಸುದ್ದಿಗಳು / ಬಿಜೆಪಿಯೊಂದಿಗೆ ಸೆಟ್ಟಿಂಗ್ ಮಾಡಿಕೊ, ಇಲ್ಲಾಂದ್ರೆ ಎನ್ಕೌಂಟರ್ ಮಾಡುವೆ ಎಂದ ಪೊಲೀಸ್!

ಬಿಜೆಪಿಯೊಂದಿಗೆ ಸೆಟ್ಟಿಂಗ್ ಮಾಡಿಕೊ, ಇಲ್ಲಾಂದ್ರೆ ಎನ್ಕೌಂಟರ್ ಮಾಡುವೆ ಎಂದ ಪೊಲೀಸ್!

ಸುದ್ದಿವಾಹಿನಿ ಡಾಟ್ ಕಾಂ: ಎನ್ಕೌಂಟರ್ ನಿಂದ ಪಾರಾಗಬೇಕೆಂದರೆ ಬಿಜೆಪಿಯೊಂದಿಗೆ ಸೆಟ್ಟಿಂಗ್ ಮಾಡಿಕೊಳ್ಳು. ಇಲ್ಲಾಂದ್ರೆ ನಿನ್ನ ಜೊತೆ ನಿನ್ನ ನಾಲ್ಕು ಮಕ್ಕಳು ಹಾಗೂ ನಿನ್ನೊಂದಿಗಿರುವ 40-50 ಮಂದಿಯನ್ನೂ ಎನ್ಕೌಂಟರ್ ಮಾಡಿಬಿಡುವೆ ಎಂದು ಬೆದರಿಸಿರುವ ಪೊಲೀಸನ ವಿಡಿಯೋ ವೈರಲ್ ಆಗಿತ್ತು. ತದ ನಂತರ ಆತನನ್ನು ಎನ್ಕೌಂಟರ್ ಮಾಡಿ ತನ್ನನ್ನು ತಾನು ಗ್ಯಾಂಗ್ ಸ್ಟರ್ ನಿಂದ ರಕ್ಷಿಸಿಕೊಳ್ಳಲು ಗುಂಡು ಹಾರಿಸಿದೆ ಎಂಬ ಸಬೂಬು ನೀಡುತ್ತಿದ್ದಾನೆ.

ಈ ಮೊದಲು ಉತ್ತರ ಪ್ರದೇಶದ ಝಾನ್ಸಿಯ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ದುಬೆ ಎಂಬಾತ ಇನ್ಸ್ ಪೆಕ್ಟರ್ ಸುನಿತ್ ಕುಮಾರ್ ಗೆ ಫೋನ್ ಮಾಡಿ “ಗ್ಯಾಂಗ್ ಸ್ಟರ್ ಲೇಖ್ ರಾಜ್ ಸಿಂಗ್ ಎಂಬಾತನನ್ನು ಬಂಧಿಸದಿದ್ದರೆ ನಿನ್ನ ವಿರುದ್ಧ ಧರಣಿ ಕುಳಿತುಕೊಳ್ಳುವೆ” ಎಂದು ಬೆದರಿಕೆ ಹಾಕಿದ್ದ ಅದಕ್ಕೆ ಪೊಲೀಸ್ ಸುನೀತ್ ಕುಮಾರ್ ಉತ್ತರಿಸುತ್ತಾ “ನಾವು ಆ ಕೆಡೆಗೆ ಹೋಗುತ್ತಾ ಇದ್ದೇವೆ. ಇವತ್ತು ಮಾಡಿ ಮುಗಿಸುತ್ತೇವೆ” ಎಂದು ಉತ್ತರಿಸುವ ಫೋನ್ ಕಾಲ್ ಸಂಭಾ‍ಷಣೆ ವೈರಲ್ ಆಗಿತ್ತು. ಆಡಳಿತರೂಢ ಬಿಜೆಪಿಯ ಜಿಲ್ಲಾಧ್ಯಕ್ಷನೋರ್ವ ಪೊಲೀಸ್ ವಿರುದ್ಧ ತನ್ನದೇ ಸರಕಾರದ ವಿರುದ್ಧ ಧರಣಿ ಕೂರುವೆ ಎನ್ನುವುದು ಹಾಸ್ಯಾಸ್ಪದವಾಗಿದೆ.

►►ಹೊಸ ಅಪ್ಡೇಟ್ ಗಳಿಗಾಗಿ ಕೆಳಗಿನ ಲಿಂಕ್ ತೆರೆದು  ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ
https://www.facebook.com/Suddivahininews/

ಇದಕ್ಕೂ ಮೊದಲು ಇನ್ಸ್ ಪೆಕ್ಟರ್ ಸುನೀತ್ ಕುಮಾರ್ ಗ್ಯಾಂಗ್ ಸ್ಟರ್ ಲೇಖ್ ರಾಜ್ ಗೆ ಕರೆ ಮಾಡಿ “ನೀನು ಎನ್ ಕೌಂಟರ್ ನಿಂದ ಪಾರಾಗಬೇಕಾದರೆ ಬಿಜೆಪಿಯೊಂದಿಗೆ ಸೆಟ್ಟಿಂಗ್ ಮಾಡ್ಕೊ. ಇಲ್ಲಾಂದ್ರೆ ನಿನ್ನ ಸಹಿತ ನಿನ್ನ ನಾಲ್ಕು ಮಕ್ಕಳು ಹಾಗೂ ನಿನ್ನೊಂದಿಗಿರುವ 40-50 ಮಂದಿಯನ್ನೂ ಎನ್ಕೌಂಟರ್ ಮಾಡಿ ಬಿಡುವೆ. ನಾನು ಅದೆಷ್ಟೋ ಜನರನ್ನು ಕೊಂದು ನದಿಗೆ ಎಸೆದಿದ್ದಿದ್ದೇನೆ. ಅದೆಷ್ಟೋ ಹತ್ಯೆಗಳನ್ನು ಮಾಡಿದ್ದೇನೆ” ಎಂದು ವ್ಯವಹಾರ ಕುದುರಿಸುವ ಫೋನ್ ಕಾಲ್ ವಾಯ್ಸ್ ಮೆಸೆಜ್ ವೈರಲ್ ಆಗಿತ್ತು.

ವಿಡಿಯೋ ನೋಡಿ:

http://abpnews.abplive.in/uttar-pradesh/jhansi-cop-suspend-after-audio-viral-on-social-media-834262

ಇದರ ನಂತರ ಲೇಖ್ ರಾಜ್ ಸಿಂಗ್ ನ ಎನ್ಕೌಂಟರ್ ಆಗುತ್ತದೆ. ಹಾಗೂ ಲೇಖ್ ರಾಜ್ ಸಿಂಗ್ ತನ್ನ ಮೇಲೆ ದಾಳಿ ಮಾಡಲು ಬಂದಾಗ ನಡೆದ ಪ್ರತಿದಾಳಿಯಲ್ಲಿ ಲೇಖ್ ರಾಜ್ ಸಿಂಗ್ ಹತನಾಗಿದ್ದಾನೆ ಎಂದು ಹಾರಿಕೆ ಸಮರ್ಥನೆ ನೀಡಿದ್ದಾನೆ. ಈ ಪ್ರಕರಣದ ನಂತರ ಸುನೀತ್ ಕುಮಾರ್ ನನ್ನು ಅಮಾನತು ಮಾಡಲಾಗಿದೆ.

Share this post
1353Shares

Check Also

ಅತ್ಯಾಚಾರ ಮಾಡಿದ ವಿಡಿಯೋ ವೈರಲ್ ಮಾಡುವೆ ಎಂದ ಸೈನಿಕ; ಮಹಿಳೆ ಆತ್ಮಹತ್ಯೆ!

ಸುದ್ದಿವಾಹಿನಿ ಡಾಟ್ ಕಾಂ: ಸೈನಿಕನಿಂದ ಆತ್ಯಾಚಾರಕ್ಕೆ ಒಳಗಾಗಿದ ಮಹಿಳೆಯು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಮುಝಫ್ಫರ್ …

Leave a Reply

Your email address will not be published.

HOME
Blue Waves Media