Home / ಕ್ರೀಡೆ / ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಕ್ರಿಕೆಟಿಗನ ಪ್ರೇಯಸಿ ಹೇಳಿದ್ದೇನು?

ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಕ್ರಿಕೆಟಿಗನ ಪ್ರೇಯಸಿ ಹೇಳಿದ್ದೇನು?

ಸುದ್ದಿವಾಹಿನಿ ಡಾಟ್ ಕಾಂ: ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಆಟಗಾರ ಉಸ್ಮಾನ್ ಖವಾಜರ ಪ್ರೇಯಸಿ ಹಾಗೂ ಭಾವಿಪತ್ನಿಯಾಗಿರುವ ರಾಶೆಲ್ ಮೆಕ್ಲೆಲ್ಲನ್ (Rachel McLellan) ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ. ಮುಂದಿನ ತಿಂಗಳು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಒಂದು ವರ್ಷದ ಹಿಂದೆ ಇಸ್ಲಾಂ ಧರ್ಮ ಸ್ವೀಕರಿ ನಿರ್ಧರಿಸಿದ್ದ ರಾಶೆಲ್ ಇದೀಗ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ

ಈ ಬಗ್ಗೆ The Australian ಸುದ್ದಿವಾಹಿನಿಯ “night’s 60 Minutes” ಎಂಬ ವಿಶೇಷ ಕಾರ್ಯಕ್ರಮದಲ್ಲಿ ತಾನು ಯಾತಕ್ಕಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದು ಎಂಬುದನ್ನು ಹೇಳಿದ್ದಾರೆ.

ಈ ಮೊದಲು ನಾನು ಇಸ್ಲಾಂ ಧರ್ಮವನ್ನು ತುಂಬಾ ಕಟುವಾಗಿ ದ್ವೇಷಿಸುತ್ತಿದ್ದೆ. ಯಾಕೆಂದರೆ ನ್ಯೂಸ್ ಗಳಲ್ಲಿ ಬರುವುದೆಲ್ಲವನ್ನೂ ಸತ್ಯವೆಂದು ಭಾವಿಸಿದ್ದೆ. ನ್ಯೂಸ್ ಗಳನ್ನು ನೋಡಿ ನೋಡಿ ಇಸ್ಲಾಂ ಎಂದರೆ ಉಗ್ರಗಾಮಿಗಳು, ಭಯೋತ್ಪಾದಕ ಚಟುವಟಿಕೆಗಳು ಮಾತ್ರ ಎಂದು ಭಾವಿಸಿದ್ದೆ. ಆದರೆ ಕಳೆದ ಒಂದು ವರ್ಷದಿಂದ ಇಸ್ಲಾಂ ಧರ್ಮವನ್ನು ಅಧ್ಯಯನ ಮಾಡಿದ ಕಾರಣಕ್ಕಾಗಿ ಇಸ್ಲಾಂ ಧರ್ಮದ ಬಗ್ಗೆ ಅರಿಯಲು ಸಾಧ್ಯವಾಯಿತು.  ನಾನು ಇಸ್ಲಾಂ ಧರ್ಮ ಸ್ವೀಕರಿಸಲು ಖವಾಜ ಅಥವ ಅವರ ಕುಟುಂಬದಿಂದ ಯಾವುದೇ ಒತ್ತಡಗಳಿರಲ್ಲಿ. ನಾನಾಗಿಯೆ ಮನಸಾರೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದೇನೆ ಎಂದು ಹೇಳಿದ್ದಾರೆ

►►ಹೊಸ ಅಪ್ಡೇಟ್ ಗಳಿಗಾಗಿ ಕೆಳಗಿನ ಲಿಂಕ್ ತೆರೆದು  ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ
https://www.facebook.com/Suddivahininews/

ಈ ಬಗ್ಗೆ ಉಸ್ಮಾನ್ ಖವಾಜ ಪ್ರತಿಕ್ರಿಯಿಸುತ್ತಾ, ನೀನು ಇಸ್ಲಾಂ ಧರ್ಮ ಸ್ವೀಕರಿಸು ಎಂದು ಆಕೆಯ ತಲೆಗೆ ಗನ್ ಇಟ್ಟು ಹೇಳಿಲ್ಲ. ನಾನು ಆಕೆಯನ್ನು ಇಸ್ಲಾಂ ಸ್ವೀಕರಿಸಲು ಹೇಳಿರಲ್ಲಿಲ್ಲ. ಅವಳಾಗಿಯೇ ಇಸ್ಲಾಂ ಸ್ವಿಕರಿಸಲಿ ಎಂದು ಬಯಸಿದ್ದೆ. ಏಕೆಂದರೆ ಇಸ್ಲಾಂ ಸ್ವೀಕರಿಸುವ ಇಚ್ಚೆ ನಿಮ್ಮ ಮೂಲಕ ಬರುವ ಬದಲು ನಿಮ್ಮ ಹೃದಯಾಂತರಾಳದಿಂದ ಬರಬೇಕು. ನಾವಿಬ್ಬರು ಜೊತೆಯಾಗಿರುವ ಫೋಟೊವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದ ಹಲವಾರು ಸಂದರ್ಭದಲ್ಲಿ ಕೆಲವು ಮುಸ್ಲೀಮರಿಂದಲೇ ದ್ವೇಷದ ಕಾಮೆಂಟ್ಸ್ ಗಳು ಬರುತ್ತಿದ್ದವು. ನಮ್ಮಿಬ್ಬರ ಜೊತೆಯಾಗಿರು ಫೋಟೊ ಹಾಕಿದ ಕೂಡಲೇ “ಓ.. ಅವಳು ಮುಸ್ಲಿಮಳಲ್ಲ, ಇದು ಹರಾಂ ಆಗಿದೆ, ನೀನು ಅವಳನ್ನು ಮದುವೆ ಆಗುವ ಹಾಗಿಲ್ಲ ಇತ್ಯಾದಿ ಇತ್ಯಾದಿ.

Share this post
2429Shares

Check Also

ಅತೀ ಹೆಚ್ಚು ಬಾರಿ ರನ್ನೌಟ್ ಆದ ಐವರು ಆಟಗಾರರ ಪಟ್ಟಿ ಇಲ್ಲಿದೆ

ಸುದ್ದಿವಾಹಿನಿ ಡಾಟ್ ಕಾಂ: ವೀರೆಂದ್ರ ಸೆಹ್ವಾಗ್ ಅಥವ ಕ್ರಿಸ್ ಗೇಲ್ ರಂತಹಾ ಆಟಗಾರರು ಬೌಂಡರಿ ಸಿಕ್ಸರ್ ಮುಲಕ ರನ್ ಗಳ …

Leave a Reply

Your email address will not be published.

HOME
Blue Waves Media