Home / ಸುದ್ದಿಗಳು / ಚುನಾವಣಾ ಅಖಾಡಕ್ಕಿಳಿಯಲಿರುವ ಸುದೀಪ್-ದರ್ಶನ್ ಜೋಡಿ! 

ಚುನಾವಣಾ ಅಖಾಡಕ್ಕಿಳಿಯಲಿರುವ ಸುದೀಪ್-ದರ್ಶನ್ ಜೋಡಿ! 

ಸುದ್ದಿವಾಹಿನಿ ಡಾಟ್ ಕಾಂ: ಮುಂಬರುವ ಕರ್ನಾಟಕದ ಚುನಾವಣೆಗೆ ಈಗಿಂದಲೇ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯದ ಮುನ್ನುಡಿ ಬರೆದಿದ್ದಾರೆ. ದಿನದಿಂದ ದಿನಕ್ಕೆ ವಿವಿಧ ಪಕ್ಷಗಳಿಂದ ಕಾಣಲು ಸಿಗುತ್ತಿರುವ ಬೆಳವಣಿಗೆ ಕರ್ನಾಟಕದ ಜನತೆಯಲ್ಲಿ ಕುತೂಹಲ ಮೂಡಿಸಿರುವುದಂತ ದಿಟ.

ಚುನಾವಣ ಪ್ರಚಾರ ಕಾರ್ಯವೆಂದ ಮೇಲೆ ಚಲನ ಚಿತ್ರ ನಟ ನಟಿಯರೂ ಕೂಡ ವಿವಿಧ ಪಕ್ಷಗಳಿಗಾಗಿ ಮತ ಯಾಚಿಸಿ ಪ್ರಚಾರ ಕಾರ್ಯ ಕೈಗೊಳ್ಳುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ಕನ್ನಡ ಚಿತ್ರರಂಗದ ಪ್ರಖ್ಯಾತ ತಾರೆಗಳಲ್ಲಿ ಇಬ್ಬರಾದ ಸುದೀಪ್ ಹಾಗೂ ದರ್ಶನ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಪ್ರಚಾರ ಕಾರ್ಯಕ್ಕೆ ಇಳಿಯಲಿದ್ದಾರೆ.

ಅಗಲಿರುವ ಹಿರಿಯ ನಟ ದಿ. ವಿಷ್ಣುವರ್ಧನ್ ರವರ ಸಮಾಧಿ ಇರುವ ಜಾಗವನ್ನು ಪುಣ್ಯಭೂಮಿ ಎಂದು ಘೋಷಿಸಲು ಮನವಿ ಮಾಡಲು ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಹೋಗಿದ್ದ ಸಮಯದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ ಪರವಾಗಿ ಪ್ರಚಾರ ಮಾಡಲು ಒಪ್ಪಿಕೊಂಡಿದ್ದರು. ಕಿಚ್ಚ ಸುದೀಪ್ ರವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ , ನಟಿ ರಮ್ಯಾ, ಭಾವನಾ ಮೊದಲಾದ ಸ್ಯಾಂಡಲ್ ವುಡ್ ದಂಡು ಸಾಥ್ ನೀದಲಿದೆ ಎಂದು ತಿಳಿದು ಬಂದಿದೆ.

Share this post
0Shares

Check Also

ಕೇಜ್ರಿವಾಲ್ ರ ಭೇಟಿಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ನಿರಾಕರಣೆ!

ಸುದ್ದಿವಾಹಿನಿ ಡಾಟ್ ಕಾಂ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾಗಲು ದಿಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್ ರವರು ಅನುಮತಿ …

Leave a Reply

Your email address will not be published.

Blue Waves Media