Home / ಸುದ್ದಿಗಳು / ಕಲ್ಲೆಸೆಯುವವರಿಂದ ರಕ್ಷಣೆ ಪಡೆಯಲು ಸೇನೆಯು ಕವಚವಾಗಿ ಬಳಸಿದ್ದ ವ್ಯಕ್ತಿ ಯಾರು ಗೊತ್ತೇ?

ಕಲ್ಲೆಸೆಯುವವರಿಂದ ರಕ್ಷಣೆ ಪಡೆಯಲು ಸೇನೆಯು ಕವಚವಾಗಿ ಬಳಸಿದ್ದ ವ್ಯಕ್ತಿ ಯಾರು ಗೊತ್ತೇ?

ಸುದ್ದಿವಾಹಿನಿ ಡಾಟ್ ಕಾಂ: ಕಳೆದ ವರ್ಷ ಕಾಶ್ಮೀರದಲ್ಲಿ ಭಾರತೀಯ ಸೈನಿಕರ ಮೇಲೆ ಕಲ್ಲೆಸೆಯುತ್ತಿದ್ದ ಪ್ರತ್ಯೇಕವಾದಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸ್ಥಳೀಯ ವ್ಯಕ್ತಿಯೊಬ್ಬನನ್ನು ಸೇನಾಧಿಕಾರಿಗಳು ತಮ್ಮ ಮಿಲಿಟರಿ ಜೀಪ್ ನ ಮುಂಬಾಗಕ್ಕೆ ಕಟ್ಟಿ ರಕ್ಷಣೆ ಪಡೆದಿರುವುದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ಆದರೆ ಈ ಘಟನೆ ನಡೆದು ಇದೀಗ ಒಂದು ವರ್ಷ ಕಳೆದ ನಂತರ ಆ ವ್ಯಕ್ತಿಯ ಪರಿಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ಕಾಶ್ಮೀರದಲ್ಲಿ ಎಂಬ್ರಾಯ್ಡರಿ ಕುಶಲಕರ್ಮಿಯಾಗಿದ್ದ ಫಾರೂಕ್ ಅಹ್ಮದ್ ಎಂಬಾತನೇ ಈ ದುರ್ದೈವಿ. ಶಾಲು ಗಳಲ್ಲಿ ವಿಶ್ವ ಪ್ರಸಿದ್ಧವಾಗಿರುವ ಕಾಶ್ಮೀರಿ ಶಾಲುಗಳಲ್ಲಿನ ಡಿಸೈನ್ ಗಳಿಗೆ ಇಡೀ ಕಾಶ್ಮೀರದಲ್ಲಿಯೇ ಫಾರೂಖ್ ಅಹ್ಮದ್ ದಾರ್ ಮುಂಚೂಣಿಯಲ್ಲಿದ್ದ. ಆದರೆ ಇಂದು ಆತನಿಗೆ ಯಾರೂ ಕೂಡ ಕೆಲಸ ಕೊಡುತ್ತಿಲ್ಲ. ತನ್ನ ಊರವರು ಆತನನ್ನು ಪೊಲೀಸರ ಮಾಹಿತಿದಾರ ಎಂದು ದೂರವಿಡುತ್ತಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾನೆ. 28 ವರ್ಷ ಪ್ರಾಯದ ಈತ ತನ್ನ ನರಕ ಸದೃಷ್ಯ ಜೀವನದಿಂದಾಗಿ ಇನ್ಸೋಮ್ನಿಯಾ ಹಾಗೂ ಮಾನಸಿಕ ಯಾತನೆಯಿಂದ ಬಳಲುತ್ತಿದ್ದಾನೆ.

►►ಹೊಸ ಅಪ್ಡೇಟ್ ಗಳಿಗಾಗಿ ಕೆಳಗಿನ ಲಿಂಕ್ ತೆರೆದು  ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ
https://www.facebook.com/Suddivahininews/

ಈತನ ತಪ್ಪು ಏನು?
ಕಳೆದ ವರ್ಷ ಎಪ್ರಿಲ್ 9 ರಂದು ಜಮ್ಮುವಿನ ಶ್ರೀನಗರದ ಲೋಕಸಭಾ ಚುನಾವಣೆಯ ವೇಳೆ ಕಾಶ್ಮೀರಿ ಪ್ರತ್ಯೇಕವಾದಿಗಳು ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಿದ್ದರು. ಆದರೂ ಕೂಡ ಭಾರತೀಯ ಪ್ರಜೆಯಾಗಿ ಮತದಾನ ಮಾಡುವುದು ನನ್ನ ಕರ್ತವ್ಯ ಎಂದು ಮತ ಚಲಾಯಿಸಲು ಮತಗಟ್ಟೆಗೆ ಹೋಗಿದ್ದ. ಈ ಸಂದರ್ಭದಲ್ಲಿ ಪ್ರತ್ಯೇಕವಾದಿಗಳು ಮತದಾರರ ಹಾಗೂ ಸೈನಿಕರ ಮೇಲೆ ಕಲ್ಲೆಸೆಯಲು ಆರಂಭಿಸಿದ್ದರು. ನಂತರ ನಡೆದ ಹಿಂಸಾಚಾರದಲ್ಲಿ 8 ಜನರು ಸಾವನ್ನಪ್ಪಿದ್ದರು. ಸೈನಿಕರು ತಮ್ಮನ್ನು ತಾವು ಪ್ರತ್ಯೇಕವಾದಿಗಳ ಕಲ್ಲು ತೂರಾಟದಿಂದ ರಕ್ಷಿಸಲು ಮತದಾನ ಮಾಡಲು ಬಂದಿದ್ದ ಫಾರೂಖ್ ಅಹ್ಮದ್ ದಾರ್ ರನ್ನು ತಮ್ಮ ಜೀಪ್ ನ ಮುಂಬಾಗ ಕಟ್ಟಿ ಸ್ಥಳದಿಂದ ತಪ್ಪಿಸಿಕೊಂಡಿದ್ದರು.

ಈ ಬಗ್ಗೆ ಫಾರೂಖ್ ರವರ ಮಾತುಗಳು ನಿಜಕ್ಕೂ ಕಣ್ಣೀರು ತರಿಸುವಂತೆ ಬಿಚ್ಚಿಟ್ಟಿದ್ದಾರೆ. “ನಾನು ಮಾಡಿದ ತಪ್ಪಾದರೂ ಏನು? ಭಾರತೀಯನಾದ ನನ್ನ ಹಕ್ಕು ಆಗಿರುವ ಮತದಾನ ಮಾಡಲು ವಿರೋಧದ ನಡುವೆಯೂ ಹೋಗಿರುವುದು ಅಪರಾಧವೇ? ಅಮಾಯಕನಾದ ನನ್ನನ್ನು ಸೇನೆಯು ತಮ್ಮ ಜೀಪ್ ಗೆ ಕಟ್ಟಿ 28 ಗ್ರಾಮಗಳಲ್ಲಿ ಮೆರವಣಿಗೆ ಮಾಡಿತ್ತು. ನನಗೆ ಈಗಲೂ ಕೂಡ ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ಔಷದಿಗಳು ನಾಟುತ್ತಿಲ್ಲ. ಯಾರೊಬ್ಬರು ನೌಕರಿ ಕೊಡುತ್ತಿಲ್ಲ. ಸರಕಾರ ಹಾಗೂ ಕಾನೂನು ಜಾಣಮೌನಕ್ಕೆ ಶರಣಾಗಿದೆ “ಎಂದು PTI ಸಂದರ್ಶನದಲ್ಲಿ ಹೇಳುತ್ತಾ ಕಣ್ಣೀರು ಹಾಕುತ್ತಿದ್ದಾರೆ.

Share this post
137Shares

Check Also

ಅತ್ಯಾಚಾರ ಮಾಡಿದ ವಿಡಿಯೋ ವೈರಲ್ ಮಾಡುವೆ ಎಂದ ಸೈನಿಕ; ಮಹಿಳೆ ಆತ್ಮಹತ್ಯೆ!

ಸುದ್ದಿವಾಹಿನಿ ಡಾಟ್ ಕಾಂ: ಸೈನಿಕನಿಂದ ಆತ್ಯಾಚಾರಕ್ಕೆ ಒಳಗಾಗಿದ ಮಹಿಳೆಯು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಮುಝಫ್ಫರ್ …

Leave a Reply

Your email address will not be published.

HOME
Blue Waves Media