Home / ವೈರಲ್ / ಊರಿಗೆ ಕಳ್ಳನಾದರೂ ತಾಯಿಗೆ ಮಗನೇ: ವೈರಲ್ ಆಗುತ್ತಿರುವ ಚಿತ್ರ ನೋಡಿ

ಊರಿಗೆ ಕಳ್ಳನಾದರೂ ತಾಯಿಗೆ ಮಗನೇ: ವೈರಲ್ ಆಗುತ್ತಿರುವ ಚಿತ್ರ ನೋಡಿ

ಸುದ್ದಿವಾಹಿನಿ ಡಾಟ್ ಕಾಂ: ತಾನು ಹೆತ್ತ ಕೂಸು ಉತ್ತಮ ವ್ಯಕ್ತಿಯಾಗಿದ್ದರೂ ಅಥವಾ ಕಳ್ಳನಾಗಿದ್ದರೂ ಸಹ ತಾಯಿಯ ಮಮತೆ ಕಡಿಮೆಯಾಗುವುದಿಲ್ಲ ಎಂದು ಈ ಚಿತ್ರ ಸಾಭೀತು ಪಡಿಸುತ್ತದೆ.

ತಾನು ಹೊತ್ತು, ಹೆತ್ತು, ಸಾಕಿ ಬೆಳೆಸಿದ ಮಗು ಬೆಳೆದು ಸಮಾಜದಲ್ಲಿ ಓರ್ವ ಉತ್ತಮ ವ್ಯಕ್ತಿಯಾಗಬೇಕೆಂದು ಪ್ರತಿ ತಾಯಿಯ ಹೃದಯ ಬಯಸುತ್ತದೆ. ಒಂದೊಮ್ಮೆ ತನ್ನ ಕರುಳ ಕುಡಿ ಉತ್ತಮ ವ್ಯಕ್ತಿಯಾಗದೆ, ಕಳ್ಳನೂ ಸುಳ್ಳನೋ ಆದರೂ ಕೂಡಾ, ತನ್ನ ಮಗನ ಕೃತ್ಯಗಳನ್ನು ಸಮಾಜದ ಮುಂದೆ ಮರೆಮಾಚಲು ಪ್ರಯತ್ನಿಸುತ್ತದೆ. ಇಂದು ಕೆಟ್ಟವನಾಗಿರುವ ಮಗ ಮುಂದೊಂದು ದಿನ ತನ್ನ ತಪ್ಪನ್ನು ಅರಿತು, ಮತ್ತೆ ಸರಿ ದಾರಿಗೆ ಬರಬಹುದೆಂಬ ಏಕೈಕ ದೂರದ ಹಂಬಲಿಕೆಯೂ ಇದಕ್ಕೆ ಕಾರಣವಾಗಿರುತ್ತದೆ.

ಇಂತಹದೇ ಘಟನೆಯೊಂದು ಇಂಡೋನೇಶಿಯಾದಲ್ಲಿ ಕಾಣಲು ಸಿಕ್ಕಿದೆ. ಬಂಕೈ ಎಂಬಾತ ಅಪರಾಧಗೈದ ಕಾರಣಕ್ಕಾಗಿ ಪೊಲೀಸ್ ಅಧಿಕಾರಿಯೊಬ್ಬರು ಆತನ ಮನೆಯಿಂದ ಬಂಧಿಸಿದ್ದರು. ಆತನನ್ನು ಜೈಲಿಗೆ ಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆತನ ತಾಯಿಯು ಪೊಲೀಸ್ ಅಧಿಕಾರಿಯಲ್ಲಿ, ತನ್ನ ಮಗ ಇನ್ನು ಜೈಲಿನಲ್ಲಿ ಯಾವ ರೀತಿ ಇರುವನೋ, ಅವನಿಗೆ ಸರಿಯಾದ ಆಹಾರ ಸಿಗುತ್ತೋ ಇಲ್ಲವೋ ನನಗೆ ತಿಳಿದಿಲ್ಲ. ಹಾಗಾಗಿ ಹೊರಡುವ ಮೊದಲು ನನ್ನ ಮಗನಿಗೆ ನನ್ನ ಕೈ ತುತ್ತುುಣಿಸಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಿದಾಗ ಆ ವೃದ್ಧ ತಾಯಿಯ ಆಸೆಯನ್ನು ನಿರಾಕರಿಸಲಾಗದೆ ಆ ಅಧಿಕಾರಿಯು ಒಪ್ಪಿಗೆ ನೀಡಿದ್ದನು. ಇಷ್ಟೇ ಅಲ್ಲದೆ ಅನ್ನ ಉಣಿಸಲು ಆ ತಾಯಿಗೆ ಯಾವುದೇ ರೀತಿಯ ಧಾವಂತ ಮಾಡದೆ, ಅರಾಮವಾಗಿ ನಿನ್ನ ಮಗನಿಗೆ ಉಣಿಸಿ ನಿನ್ನ ಕರುಳನ್ನು ತಣ್ಣಗಾಗಿಸಿಕೊ ಎಂದೂ ಕೂಡಾ ಆ ಅಧಿಕಾರಿ ಹೇಳಿದ್ದರು. ಆ ತಾಯಿಯು ತನ್ನ ಮಗನಿಗೆ ಮನಸಾರೆ ಉಣಿಸುವವರೆಗೆ ಅರಾಮವಾಗಿ ಯಾವುದೇ ಆತುರವಿಲ್ಲದೆ ಅವಕಾಶ ಮಾಡಿಕೊಟ್ಟಿದ್ದರು. ಈ ಸುದ್ದಿಯು ಇಂಡೋನೇಶಿಯಾ ಮಾತ್ರವಲ್ಲ ಸಾಮಾಜಿಕ ತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಾ, ಆ ಅಧಿಕಾರಿ ಹಾಗೂ ತಾಯಿಗೆ ಪ್ರಶಂಸೆಗಳ ಮಹಪೂರವೇ ಹರಿದು ಬರುತ್ತಿದೆ.

Share this post
0Shares

Check Also

ಜನರ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡಿದ ಎನ್.ಮಹೇಶ್ ಗೆ ತೇಜೋವಧೆಯ ಶಿಕ್ಷೆ 

ಸುದ್ದಿವಾಹಿನಿ ಡಾಟ್ ಕಾಂ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎನ್.ಮಹೇಶ್ ಅವರ ತತ್ವ, ಸಿದ್ಧಾಂತ, ಆದರ್ಶಗಳನ್ನು ಪ್ರಶ್ನಿಸಲಾಗುತ್ತಿದೆ. ಇವೆಲ್ಲ ಆರಂಭವಾಗಿರುವುದು …

Leave a Reply

Your email address will not be published.

Blue Waves Media