Home / ಅಟೋ / ಸೋಲಿಲ್ಲದ ಸರದಾರ Royal Enfield ಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಮಹೀಂದ್ರ BSA!

ಸೋಲಿಲ್ಲದ ಸರದಾರ Royal Enfield ಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಮಹೀಂದ್ರ BSA!

ಸುದ್ದಿವಾಹಿನಿ ಡಾಟ್ ಕಾಂ: ಭಾರತೀಯ ಮಾರುಕಟ್ಟೆಗೆ ಹಳೇಯ ಲುಕ್ ಹಾಗೂ ಹೊಸ ಶಕ್ತಿಯೊಂದಿಗೆ ಮಹೀಂದ್ರ BSA ಲಗ್ಗೆ ಇಡಲಿದೆ. ಈ ಬಗ್ಗೆ ಬೈಕ್ ಮಾರುಕಟ್ಟೆಯಲ್ಲಿ ಬಹಳ ಕುತೂಹಲವಿದೆ

ಇತ್ತೀಚೆಗೆ ಮಹೀಂದ್ರ ಸಂಸ್ಥೆಯ ಚೈರ್ಮ್ಯಾನ್ ಆಗಿರುವ ಆನಂದ್ ಮಹೀಂದ್ರರವರು ಟ್ವೀಟ್ ಮಾಡುತ್ತಾ ತಮ್ಮ ಹೊಸ BSA ಬೈಕನ್ನು ಸಂತ ಕ್ಲಾಸ್ ತರಲಿದ್ದಾನೆ ಎಂದು ಟ್ವೀಟ್ ಮಾಡಿದ್ದರು. ಅಂದರೆ ಕ್ರಿಸ್ಮಸ್ ಹಾಗೂ ಹೊಸ ವರುಷದ ಮಧ್ಯೆ ಇದು ಬಿಡುಗಡೆಯಾಗಲಿದೆ ಎಂಬ ಸೂಚನೆ ನೀಡಿದ್ದರು. ಆದರೆ ಈ ಸಲದ ಕ್ರಿಸ್ಮಸ್ ದಿನದಂದೇ ಮತ್ತೊಂದು ಟ್ವೀಟ್ ಮಾಡುತ್ತಾ, ಈ ಬಾರಿ ಕ್ರಿಸ್ಮಸ್ ದಿನದಂದು ಸಂತ ಕ್ಲಾಸ್ ನೊಂದಿಗೆ BSA ಯನ್ನು ಕಳುಹಿಸಲಾಗದ್ದಕ್ಕೆ ಕ್ಷಮೆ ಇರಲಿ. ಆದರೆ ಸಧ್ಯವೇ ಶೈನಿ ಕ್ಯಾರೆಕ್ಟರ್ ಹಳೇಯ ಲುಕ್ ನಲ್ಲಿ ಬರಲಿದೆ” ಎಂದು ಮತ್ತೊಂದು ಟ್ವೀಟ್ ಮಾಡಿದ್ದರು.

ಡಿಜಿಟಲ್ ಆರ್ಟಿಸ್ಟ್ ಜಕೂಸ ಡಿಸೈನ್ ಸಂಸ್ಥೆಯು ಈ ಬೈಕ್ ವಿನ್ಯಾಸಗೊಳಿಸಿದೆ. ಕಪ್ಪು ಮೆಟಾಲಿಕ್ ಹಾಗೂ ಬಂಗಾರದ ಬಣ್ಣ ಮಿಶ್ರಿತವಾದ ಬೈಕ್ ಹಳೇಯ ಕಾಲದ ಬೈಕ್ ಗಳ ಲುಕ್ ನೊಂದಿಗೆ ಬರಲಿದೆ. 1929 ರಲ್ಲಿ ಆರಂಭವಾಗಿದ್ದ ಮಹೀಂದ್ರ ಸಂಸ್ಥೆಯು ಈ ಬೈಕ್ ಮೇಲೆ ಭಾರಿ ಭರವಸೆಗಳನ್ನು ಇಟ್ಟಿದೆ. ಈ ಬೈಕ್ ಭಾರತ ಮಾತ್ರವಲ್ಲದೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲೂ ಬಿಡುಗಡೆಯಾಗಲಿದೆ ಸಂಸ್ಥೆ ಹೇಳಿದೆ.

Share this post
63Shares

Check Also

ಹೊಸ ದಾಖಲೆ: ಕೇವಲ 18 ಸೆಕೆಂಡುಗಳಲ್ಲಿ ಮಾರಾಟವಾಯಿತು ವಿಶೇಷವಾಗಿ ತಯಾರಿಸಿದ್ದ ಎಲ್ಲಾ ಬೈಕ್ ಗಳು

ಸುದ್ದಿವಾಹಿನಿ ಡಾಟ್ ಕಾಂ:  ಹೊಸದಾಗಿ ಬಿಡುಗಡೆ ಮಾಡಿದ ಎಲ್ಲಾ ಬೈಕ್ ಗಳು ಕೇವಲ 15 ಸೆಕೆಂಡುಗಳಲ್ಲಿ ಮಾರಾಟವಾಗಿ ಬುಲ್ಲೆಟ್ ಕಂಪನಿಯು …

Leave a Reply

Your email address will not be published.

Blue Waves Media