Home / ವೈರಲ್ / ಹಿಂದೂ ಯುವಕನ ಪಾಲಿಗೆ ಆಪತ್ಭಾಂಧವನಾಗಿದ್ದ ಮುಸ್ಲಿಂ!

ಹಿಂದೂ ಯುವಕನ ಪಾಲಿಗೆ ಆಪತ್ಭಾಂಧವನಾಗಿದ್ದ ಮುಸ್ಲಿಂ!

ಸುದ್ದಿವಾಹಿನಿ ಡಾಟ್ ಕಾಂ: ಆಪತ್ತಿಗೆ ಸಿಲುಕಿದ್ದ ಬಡ ಹಿಂದೂ ವ್ಯಕ್ತಿಯನ್ನು ಶ್ರೀಮಂತ ಮುಸ್ಲಿಂ ಅರಬಿಯೊಬ್ಬರು ಬೃಹತ್ ಮೊತ್ತ ಪಾವತಿಸಿ ಬಿಡುಗಡೆ ಮಾಡಿಸಿ ಆತನ ಪಾಲಿನ ಆಪತ್ಭಾಂಧವನಾಗಿದ್ದರು.

ಇವತ್ತಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ಮೂಲದ ಲಿಂಬಾದರಿ ಎಂಬವರನ್ನು ಸ್ಥಳೀಯ ಅರಬಿ ದೊರೆ ಅವಾದ್ ಬಿನ್ ಗುರಯಾ ಅಲ್ ಶಾಮಿ ಎಂಬವರು 1.3 ಮಿಲಿಯನ್ ಸೌದಿ ರಿಯಾಲ್ (1.80 ಕೋಟಿ ರೂ.) ಪಾವತಿಸಿ ಬಿಡುಗಡೆಗೊಳಿಸಿದ್ದರು.

ತೆಲಂಗಾಣಾ ನಿಝಾಮಾಬಾದ್ ನ ಲಿಂಬಾದರಿ ಎಂಬವರು ಸೌದಿ ಅರೇಬಿಯಾದಲ್ಲಿ ನೌಕರಿಯ ಮಾಡುತ್ತಿದ್ದ ಸಂದರ್ಭದಲ್ಲಿ, ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಸೌದಿ ಪೊಲೀಸರು ಇವರನ್ನು ಬಂಧಿಸಿದ್ದರು. ನಂತರ ಸೌದಿ ನ್ಯಾಯಾಲಯು ಲಿಂಬಾದರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿತ್ತು. ಈ ಸಂದರ್ಭದಲ್ಲಿ ತೆಲಂಗಾಣದ ಶಾಸಕರೋರ್ವರ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರವರಿಗೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ಸುಷ್ಮಾರವರು ಅಲ್ಲಿನ ಸ್ಥಳೀಯ ದೊರೆ ಅವಾದ್ ಬಿನ್ ಗುರಯಾ ಅಲ್ ಶಾಮಿ ಯವರನ್ನು ಸಂಪರ್ಕಿಸಿದ್ದರು. ಇದರ ಪ್ರಕಾರ 1.3 ಮಿಲಿಯನ್ ಸೌದಿ ರಿಯಾಲ್ (1.80 ಕೋಟಿ ರೂ.) ನ್ಯಾಯಲಯಕ್ಕೆ ಪಾವತಿಸಿ ಲಿಂಬಾದರಿಯನ್ನು ಬಿಡುಗಡೆಗೊಳಿಸಿದ್ದರು.

ತನ್ನ ಬಿಡುಗಡೆಯ ಒಂದು ವರ್ಷ ಪೂರ್ತಿಯಾದ ಸಮಯದಲ್ಲಿ ಲಿಂಬಾದರಿಯವರು ಅಲ್ ಶಾಮಿಯವರ ಉಪಕಾರವನ್ನು ಕೊನೆಯ ಉಸಿರಿರುವ ತನಕ ಮರೆಯಲಾರೆ. ಅದೇ ರೀತಿ ನನ್ನ ಬಿಡುಗಡೆಗಾಗಿ ಪ್ರಯತ್ನಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸ್ಥಳೀಯ ಶಾಸಕ ಕಶ್ಮೀರಾ ಕವಿತಾ, ತೆಲಂಗಾಣ ಸಚಿವ ನವೀನ್ ಆಚಾರಿ ಮುಂತಾದವರಿಗೆ ಹೃದಯ ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

Share this post
0Shares

Check Also

ಜನರ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡಿದ ಎನ್.ಮಹೇಶ್ ಗೆ ತೇಜೋವಧೆಯ ಶಿಕ್ಷೆ 

ಸುದ್ದಿವಾಹಿನಿ ಡಾಟ್ ಕಾಂ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎನ್.ಮಹೇಶ್ ಅವರ ತತ್ವ, ಸಿದ್ಧಾಂತ, ಆದರ್ಶಗಳನ್ನು ಪ್ರಶ್ನಿಸಲಾಗುತ್ತಿದೆ. ಇವೆಲ್ಲ ಆರಂಭವಾಗಿರುವುದು …

Leave a Reply

Your email address will not be published.

Blue Waves Media