Home / ಆರೋಗ್ಯ / ನಿಮ್ಮ ಪತ್ನಿಯನ್ನು ನಿಜವಾಗಿಯೂ ಪ್ರೀತಿಸುತ್ತೀರಾ? ಹಾಗಾದರೆ ಪ್ರೀತಿಯ ಗಂಡನಾಗಲು ಋತುಸ್ರಾವದ ಬಗ್ಗೆಯೂ ತಿಳಿದಿರಲೇ ಬೇಕು

ನಿಮ್ಮ ಪತ್ನಿಯನ್ನು ನಿಜವಾಗಿಯೂ ಪ್ರೀತಿಸುತ್ತೀರಾ? ಹಾಗಾದರೆ ಪ್ರೀತಿಯ ಗಂಡನಾಗಲು ಋತುಸ್ರಾವದ ಬಗ್ಗೆಯೂ ತಿಳಿದಿರಲೇ ಬೇಕು

ಮಹಿಳೆಯರಲ್ಲಿ ಋತುಸ್ರಾವವು ಒಂದು ನೈಸರ್ಗಿಕ ಕ್ರಿಯೆಯಾಗಿದೆ. ಹೆಣ್ಣೊಬ್ಬಳು ಬೆಳೆದು ಮಹಿಳೆಯಾದ ದಿನದಿಂದ ಪ್ರತಿ ತಿಂಗಳು ಋತುಮತಿಯಾಗುತ್ತಾಳೆ. ಕೆಲವು ಮಹಿಳೆಯರಲ್ಲಿ ಆರೋಗ್ಯದ ಸಮಸ್ಯೆಯ ಕಾರಣದಿಂದಾಗಿ ಅಥವಾ ಹಾರ್ಮೋನ್ ಗಳು ಏರುಪೇರಾದ ಸಮಯದಲ್ಲಿ ಋತುಸ್ರಾವದ ದಿನಾಂಕವು ಕೆಲವೊಮ್ಮೆ ವ್ಯತ್ಯಾಸಗಳಾಗುತ್ತವೆ. ಆದರೆ ನಮ್ಮ ಬಾಳ ಸಂಗಾತಿಯನ್ನು ಪ್ರೀತಿಸುವ ಪ್ರತಿ ಪುರುಷನೂ ಕೂಡಾ ಅವಳು ಋತುಮತಿಯಾದ ಸಮಯದಲ್ಲಿ ಆಗುವ ಬದಲಾವಣೆಗಳನ್ನು ಮನದಲ್ಲಿಟ್ಟುಕೊಂಡು, ಅದಕ್ಕೆ ಪೂರಕವಾಗಿ ವ್ಯವಹರಿಸಬೇಕಿದೆ.

ಆರೋಗ್ಯ ಸಂಬಂಧಿತ ಸಮಸ್ಯೆ:
ಮುಖ್ಯವಾದ ವಿಷಯವೆಂದರೆ ಕೆಲವರಿಗೆ ಋತುಸ್ರಾವದ ಸಮಯದಲ್ಲಿ ನೋವುವಂತಹ ಮೊಡವೆಗಳು ಏಳುತ್ತವೆ. ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಕನ್ಸ್ಟಿಪೇಶನ್ ಅಥವ ಲೂಸ್ ಮೋಶನ್ ಗಳಾಗುತ್ತವೆ. ಈ ಸಮಯದಲ್ಲಿ ಸಣ್ಣ ಪ್ರಮಾಣದ ಸೆಳೆಯುವಿಕೆಯ ನೋವಿನಿಂದ ಹಿಡಿದು ಹೆರಿಗೆ ನೋವಿನ ರೀತಿಯ ತಡೆಯಲಾರದ ಮಟ್ಟದ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಇಂತಹಾ ಸಮಯದಲ್ಲಿ ಪುರುಷರು ಸಾಧ್ಯವಾದಷ್ಟು ಆರಾಮವಾಗಿ ನೋಡಿಕೊಳ್ಳಬೇಕು

ಚಾಕಲೇಟ್ ಬಯಕೆ:
ಸಾಮಾನ್ಯವಾಗಿ ಎಲ್ಲರಿಗೂ ಚಾಕಲೇಟ್ ಎಂದರೆ ಇಷ್ಟವೆ, ಆದರೆ ಋತುಸ್ರಾವದ ಸಮಯದಲ್ಲಿ ಮಹಿಳೆಯರಿಗೆ ಸಿಹಿ ತಿನ್ನಲು ಬಯಕೆಯಾಗುತ್ತದೆ. ಈ ಸಮಯದಲ್ಲಿ ಒಳ್ಳೆಯ ಚಾಕಲೇಟ್ ತಂದು ಕೊಟ್ಟರೆ, ನಿಮ್ಮ ಮೇಲೆ ಎಂದಿಗಿಂತ ಹೆಚ್ಚಾಗಿ ಪ್ರೀತಿ ಹುಟ್ಟುತ್ತದೆ.

ಪ್ರೀತಿ ಬಯಸುತ್ತಾರೆ:
ಋತುಮತಿಯಾಗಿದ್ದ ಸಮಯದಲ್ಲಿ ಅತೀ ಹೆಚ್ಚು ಪ್ರೀತಿಯನ್ನು ಬಯಸುತ್ತಾಳೆ. ಅವಳಿಗರಿವಿಲ್ಲದಂತೆ ಮೆಲ್ಲನೆ ತಬ್ಬಿಕೊಂಡು ಎದೆಗಪ್ಪಿಕೊಂಡು ನಯವಾಗಿ ಬೆನ್ನು ಸವರಿದಾಗ ಪ್ರಾಣ ಹೋಗುವಂತೆ ಪ್ರೀತಿಸಲಾರಂಭಿಸುತ್ತಾರೆ. ಅವರಲ್ಲಿ ಒಂದು ರೀತಿಯ ಸುರಕ್ಷತೆಯ ಭಾವವು ಹುಟ್ಟಿಕೊಳ್ಳುತ್ತದೆ.

ಹಠಮಾರಿಯಾಗುತ್ತಾಳೆ:
ಈ ವಿಷಯವನ್ನು ಪ್ರತಿ ಪುರುಷನೂ ಅರಿತಿರಬೇಕು. ಋತುಮತಿಯಾಗಿದ್ದಾಗ ಮಹಿಳೆಯು ಮಕ್ಕಳ ಹಾಗೆ ಹಠಮಾರಿಯಾಗಿರುತ್ತಾಳೆ. ಈ ಸಮಯದಲ್ಲಿ ಋತುಸ್ರಾವಕ್ಕೆ ಹಾನಿಕಾರಕವಾದ ಸಿಗರೇಟ್ ಸೇದುವ ಮಹಿಳೆಯರು ಸ್ಮೋಕಿಂಗ್, ಕೋಕಕೋಲ, ಕೋಲ್ಡ್ ನೀರುಗಳನ್ನು ಕುಡಿಯುವ ಬಯಕೆ ವ್ಯಕ್ತಪಡಿಸುತ್ತಾಳೆ.

ಜೀವ ಉಳಿಸಿ ಓಡಿ:
ಋತುಸ್ರಾವದ ಆರಂಭದ 3-4 ದಿನಗಳಲ್ಲಿ ಆಕೆಯ ಸಂಯಮ ಶಕ್ತಿ (ಪೇಶೆನ್ಸ್ ಲೆವೆಲ್) ಕಡಿಮೆ ಇರುತ್ತದೆ. ಈ ಸಮಯದಲ್ಲಿ ಯಾವುದೇ ರೀತಿಯ ಕಿರಿಕಿರಿ ಸಹಿಸಲು ಶಕ್ತಳಿರುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಅವಳ ವರ್ತನೆಗಳಲ್ಲಾಗುವ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸಿ. ಅವಳ ಆ ಸಮಯದ ಸಂಯಮ ಕಳಕೊಳ್ಳುವುದನ್ನು ಆಕೆ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾಳೆ ಎಂದು ತಿಳಿದುಕೊಂಡು ಸಂಸಾರದಲ್ಲಿ ಬಿರುಕು ಬೀಳುವ ಸಾಧ್ಯತೆಗಳಿರುತ್ತವೆ. ಈ ಸಂದರ್ಭದಲ್ಲಿ ಪುರುಷನಾದವನಿಗೆ ಶಾಂತ ರೀತಿಯಲ್ಲಿ ಸಹಿಸಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಕಿರಿಕ್ ಆದ್ರೆ ಸಿಕ್ಕಿದರಲ್ಲಿ ಬಾರಿಸಲು ಧಾವಿಸುತ್ತಾಳೆ. ಆಗ ಅಲ್ಲಿಂದ ಓಡಿ ಹೋಗುವುದೇ ಸೂಕ್ತವಾಗಿದೆ.

ಶಾಪಿಂಗ್:
ತಿಂಗಳ ಆರಂಭದಲ್ಲಿ ಋತುಸ್ರಾವವಾದರೆ, ಅದರಲ್ಲೂ ಆನ್ಲೈನ್ ಶಾಪಿಂಗ್ ಮಾಡುವ ಅಭ್ಯಾಸವಿದ್ದರೆ, ನಂತರ ಮುಗೀತು. ಏಕೆಂದರೆ ಈ ಸಮಯದಲ್ಲಿ ಹಾಸಿಗೆಯಲ್ಲಿ ಕಾಲು ಹರಡಿ ಆನ್ಲೈನ್ ಶಾಪಿಂಗ್ ಮಾಡಲು ಹೆಚ್ಚು ಇಷ್ಟ ಪಡುತ್ತಾಳೆ. ಆಗ ಆ ತಿಂಗಳು ಪೂರ್ತಿ ಕಂಜೂಸಿ ಮಾಡಿಯೇ ಸಾಗಿಸಬೇಕಾಗಿ ಬರಬಹುದು.

ಹಾಸಿಗೆ ಬೆಸ್ಟ್ ಫ್ರೆಂಡ್:
ಋತುಸ್ರಾವದ ಸಮಯದಲ್ಲಿ ಬಿಸಿನೀರಿನ ಸ್ನಾನ, ಚಾಕಲೇಟ್, ಪುಸ್ತಕಗಳು, ಹಾಗೂ ತನ್ನ ಫೇವರೀಟ್ ಸೀರಿಯಲ್ ಗಳು, ಹಾಸಿಗೆಯಲ್ಲಿ ಮಲಗಿಯೇ ಸದಾ ಮಲಗಿರಲು ಬಯಸುತ್ತಾಳೆ.

ಆತ್ಮೀಯರು:
ಪ್ರತಿಯೊಬ್ಬರಿಗೂ ತಮ್ಮ ಮನಸ್ಸಿನ ಮಾತು ಹಂಚಿಕೊಳ್ಳಲು ಆತ್ಮೀಯರೊಬ್ಬರು (ಗೆಳೆಯ/ಗೆಳತಿ) ಇರುತ್ತಾರೆ. ಅವರೊಂದಿಗೆ ಗಂಟೆಗಟ್ಟಲೆ ಹರಟೆ ಹೊಡೆಯುತ್ತಾರೆ. ದೂರ ಇರವವರೊಂದಿಗೆ ಯಾಕಾಗಿ ದೂರ ಇದ್ದೀಯ ಫೋನ್ ನಲ್ಲೇ ಎಂದು ಬಯ್ಯುತ್ತಾರೆ. ನಂತರ ಅವರಲ್ಲೇ ಎಲ್ಲಾ ವಿಷಯವನ್ನು ಶೇರ್ ಮಾಡುತ್ತಾರೆ. ಹಾಗಾಗಿ ಪತಿಯೇ ನನ್ನ ಆತ್ಮೀಯ ಎಂಬ ಭಾವನೆ ಬರುವಷ್ಟು ಆಕೆಯನ್ನು ಪ್ರೀತಿಸಿ.

ಸೆಕ್ಸ್ ವರ್ತನೆ:
ಹಾರ್ಮೋನ್ ಗಳ ಬದಲಾವಣೆಯಿಂದಾಗಿ ಸೆಕ್ಸ್ ವರ್ತನೆಯು ವಿಪರೀತ ಮಟ್ಟದಲ್ಲಿರುತ್ತದೆ. ಕೆಲವೊಮ್ಮೆ ಸೆಕ್ಸ್ ಬಯಸುವ ತನ್ನ ಸಂಗಾತಿಯ ಕಿರಿಕ್ ತಾಳಲಾರದೆ ಹಾಸಿಗೆಯಿಂದ ನಿಮ್ಮನ್ನು ಒದ್ದು ಕೆಳಗೆ ಹಾಕುವ ಸಾಧ್ಯತೆಗಳಿರುತ್ತವೆ. ಐ ಜಸ್ಟ್ ವಾಂಟ್ ಟು ಸ್ಲೀಪ್ ಎಂದು ಕಿರುಚಲು ಸಾಧ್ಯತೆ ಇರುತ್ತದೆ. ಸಾಧಾರಣವಾಗಿ ಋತುಸ್ರಾವವು ಏಳು ದಿನಗಳ ತನಕ ಇರುವ ಕಾರಣ, ಆರಂಭದ 3-4 ದಿನಗಳಲ್ಲಿ ಅತಿಯಾದ ರಕ್ತಸ್ರಾವವಾಗುವ ಕಾರಣ ತಮ್ಮ ಸಂಗಾತಿಯ ಕಡೆಗೆ ಹೆಚ್ಚಿನ ಗಮನಕೊಟ್ಟು ಆರಾಮ ನೀಡಲು ಪ್ರಯತ್ನಿಸಿ. ಋತುಸ್ರಾವದ ಸಮಯದಲ್ಲಿ ತಮ್ಮ ಸೆಕ್ಸ್ ಬಯಕೆಯನ್ನು ಸಾಧ್ಯವಾದಷ್ಟು ಹಿಡಿದಿಟ್ಟುಕೊಳ್ಳಿ. ಏಕೆಂದರೆ ಪತ್ನಿಯು ಜೀವನ ಪರ್ಯಂತ ತಮ್ಮೊಂದಿಗೆ ಜೀವನ ನಡೆಸಬೇಕಾದವಳು. ಅವಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಸುಂದರ ದಾಂಪತ್ಯ ಜೀವನ ಸಾಗಿಸಿರಿ ಎಂಬುದೇ ನಮ್ಮ ಹಾರೈಕೆ.

Share this post
312Shares

Leave a Reply

Your email address will not be published.

HOME
Blue Waves Media