Home / ಸುದ್ದಿಗಳು / MEP ಪಕ್ಷ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಕಾರಣ ಏನು ಗೊತ್ತೆ?

MEP ಪಕ್ಷ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಕಾರಣ ಏನು ಗೊತ್ತೆ?

ಸುದ್ದಿವಾಹಿನಿ ಡಾಟ್ ಕಾಂ: ಕರ್ನಾಟಕ ಅಸ್ಸೆಂಬ್ಲಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇತಂಹದರಲ್ಲಿ ಹೊಸತೊಂದು ರಾಜಕೀಯ ಪಕ್ಷವು ಉದಯವಾಗಿರುವುದೇ ಅಲ್ಲದೆ, ಜಾಹಿರಾತುಗಳಿಗೆ ಭರ್ಜರಿ ಖರ್ಚು ಮಾಡುತ್ತಿರುವುದು ಜನಸಾಮಾನ್ಯರನ್ನು ಹುಬ್ಬೇರಿಸಿದೆ.

ಹೌದು… ಇದೇ ಮೊದಲ ಬಾರಿ ಕರ್ನಾಟಕ ಅಸ್ಸೆಂಬ್ಲಿಯಲ್ಲಿ ಹೀರಾ ಗೋಲ್ಡ್ ಮಾಲಕಿಯಾಗಿರುವ ನೌಹೀರಾ ಶೇಖ್ ರವರ MEP (ಮಹಿಳಾ ಎಂಪವರ್ಮೆಂಟ್ ಪಾರ್ಟಿ) ರಾಜ್ಯದ 20 ಜಿಲ್ಲೆಗಳಲ್ಲಿ ಸ್ಪರ್ಧಿಸುತ್ತಿದೆ. ತನ್ನ ಪಕ್ಷಕ್ಕೆ ಜನಬೆಂಬಲ ಇಲ್ಲ ಎಂದು ತಿಳಿದಿದ್ದರೂ ಕೂಡಾ, ನೌಹೀರಾ ಶೇಖ್ ರವರು ಜಾಹಿರಾತು ಹಾಗೂ ಪ್ರಚಾರಕ್ಕಾಗಿ ಹಣದ ಹೊಳೆಯೇ ಹರಿಸುತ್ತಿದ್ದಾರೆ. ಆದರೆ ನೌಹೀರಾ ಶೇಖ್ ರವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎನ್ನುವುದಕ್ಕಿಂತ ಅವರನ್ನು ಸ್ಪರ್ಧಿಸುವಂತೆ ಮಾಡಲಾಗುತ್ತಿದೆ ಎಂದು ಅವರ ಆಪ್ತ ವಲಯದಿಂದ ಕೇಳಿ ಬರುತ್ತಿದೆ.

►►ಹೊಸ ಅಪ್ಡೇಟ್ ಗಳಿಗಾಗಿ ಕೆಳಗಿನ ಲಿಂಕ್ ತೆರೆದು  ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ
https://www.facebook.com/Suddivahininews/

MEP ಪಕ್ಷದ ಆಪ್ತವಲದ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಮೂಲದ ಪ್ರಕಾರ ಹೀರಾ ಗೋಲ್ಡ್ ನಲ್ಲಿ ಹೂಡಿಕೆ ಮಾಡಿರುವ ಸಾವಿರಾರು ಕೋಟಿ ರೂ ಗಳ ಕಾರಣದಿಂದಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಮುಸ್ಲಿಂ ಎಂಬ ನೆಲೆಯಲ್ಲಿ ಮುಸ್ಲಿಂ ಸಮುದಾಯದ ಅಲ್ಪಸ್ವಲ್ಪ ಮತಗಳನ್ನಾದರೂ ತಮ್ಮ ಸ್ವಂತ ಖರ್ಚಿನಿಂದ ಪಡೆಯ ಬೇಕು. ಇದಕ್ಕಾಗಿ ಸ್ವತಃ MEP ಪಕ್ಷವೇ ಖರ್ಚು ಮಾಡಬೇಕು. ಇಲ್ಲವಾದಲ್ಲಿ ಇನ್ ಕಂ ಟ್ಯಾಕ್ಸ್ ದಾಳಿಯಾಗಲಿದೆ ಎಂಬ ಆದೇಶವಿದೆ ಎಂದು ಕೇಳಿ ಬರುತ್ತಿದೆ. ಐಟಿ ದಾಳಿಯಿಂದ ರಕ್ಷಿಸಿಕೊಳ್ಳಲು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜಾಹಿರಾತುಗಳಿಗೆ ಖರ್ಚು ಮಾಡಿ ಸ್ಪರ್ಧಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

MEP ಪಕ್ಷದ ಜಾಹಿರಾತು ಜವಾಬ್ದಾರಿಯನ್ನು ಆಯಾಯ ಕ್ಷೇತ್ರದ ಸ್ಥಳೀಯ ಬಿಜೆಪಿ ಬೆಂಬಲಿಗರು ನೋಡಿಕೊಳ್ಳುತ್ತಿದ್ದಾರೆ ಎಂದೂ ಕೂಡಾ ತಿಳಿದು ಬಂದಿದೆ. ನಿನ್ನೆ ಬೆಂಗಳೂರಿನಿಂದ ಬರುತ್ತಿದ ಬಸ್ ಒಂದರಿಂದ ವಶಕ್ಕೆ ಪಡೆದ ಬಿಜೆಪಿ ಪಕ್ಷ ಪ್ರಚಾರ ಸಾಮಾಗ್ರಿಗಳೊಂದಿಗೆ MEP ಯ ಪ್ರಚಾರ ಸಾಮಾಗ್ರಿ ಲಭಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ.

ನಿನ್ನೆ ಲಲಿತ್ ಅಶೋಕ್ ಹೊಟೇಲ್ ನಲ್ಲಿ ನಡೆದ ಸಭೆಯಲ್ಲಿ 149 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಮುಖ್ಯಸ್ಥೆ ನೌಹೀರಾ ಶೇಖ್ ರವರು ಬಿಡುಗಡೆಗೊಳಿಸಿದರು.

ಮಹಿಳಾ ಎಂಪವರ್ಮೆಂಟ್ ಪಾರ್ಟಿ (MEP) ಪಕ್ಷದಿಂದ ಟಿಕೇಟು ಪಡೆದು ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಕೆಳಗೆ ಕೊಡಲಾಗಿದೆ.

 

Share this post
134Shares

Check Also

ಅತ್ಯಾಚಾರ ಮಾಡಿದ ವಿಡಿಯೋ ವೈರಲ್ ಮಾಡುವೆ ಎಂದ ಸೈನಿಕ; ಮಹಿಳೆ ಆತ್ಮಹತ್ಯೆ!

ಸುದ್ದಿವಾಹಿನಿ ಡಾಟ್ ಕಾಂ: ಸೈನಿಕನಿಂದ ಆತ್ಯಾಚಾರಕ್ಕೆ ಒಳಗಾಗಿದ ಮಹಿಳೆಯು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಮುಝಫ್ಫರ್ …

Leave a Reply

Your email address will not be published.

HOME
Blue Waves Media