Home / ತಂತ್ರಜ್ಞಾನ / ನಿಮ್ಮ ಕಾರನ್ನು ಆಲ್ಟ್ರೇಶನ್ ಮಾಡಿದರೆ ಪೊಲೀಸರು ಏನು ಮಾಡುತ್ತಾರೆ ಗೊತ್ತಾ?

ನಿಮ್ಮ ಕಾರನ್ನು ಆಲ್ಟ್ರೇಶನ್ ಮಾಡಿದರೆ ಪೊಲೀಸರು ಏನು ಮಾಡುತ್ತಾರೆ ಗೊತ್ತಾ?

ಕೆಲವು ತಿಂಗಳ ಹಿಂದೆ ಮಾರುತಿ ಬೆಲೆನೋ ಕಾರ್ ನ ಮುಂಭಾಗವನ್ನು ಮರ್ಸಿಡಿಸ್ ಬೆಂಝ್ ಎ- ಕ್ಲಾಸ್ ನಂತೆ ಮಾಡಿಫೈ ಮಾಡಿದ್ದ ಕಾರಿನ ಬಿಡಿಭಾಗಗಳನ್ನು ಆರ್ಟಿಓ ಅಧಿಕಾರಿಗಳು ಬಿಚ್ಚಿ ಹಾಕಿರುವ ಘಟನೆ ಕೇರಳ ನಡೆದಿದೆ.

ಮಾರುತಿ ಬೆಲೆನೋ ಕಾರ್ ಮರ್ಸಿಡಿಸ್ ತರಹ ಮಾಡಿದ್ದ ಕಾರೊಂದು ಕೇರಳದ ರಸ್ತೆಯಲ್ಲಿ ತಿರುಗಾಡುತ್ತಿದ್ದ ಬಗ್ಗೆ ಆರ್ಟಿಓ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು. ಈ ಬಗ್ಗೆ ಅಧಿಕಾರಿಗಳು ಆ ಕಾರು ಮಾಲಕರಿಗೆ, ನಿಮ್ಮ ಕಾರಿನ ರಿಜಿಸ್ಟ್ರೇಶನ್ ರದ್ದು ಪಡಿಸಲಾಗುವುದು ಎಂದು ಶೋಕಾಸ್ ನೋಟಿಸು ಜಾರಿ ಮಾಡಿದ್ದರು. ಹಾಗಾಗಿ ಕಾರನ್ನು ಮೂಲ ಕಾರಿನಂತೆ ಮತ್ತೆ ಬದಲಾಯಿಸಲು ಮಾಲಕರು ಎರಡು ವಾರಗಳ ಕಾಲಾವಕಾಶ ಕೇಳಿದ್ದರು. ಇದೀಗ ಕಾರನ್ನು ಅಧಿಕಾರಿಗಳು ಜಪ್ತಿ ಮಾಡಿ, ಅದರ ಮೂಲ ಭಾಗವಲ್ಲದ ಬಿಡಿ ಭಾಗಗಳನ್ನು ಕಿತ್ತು ತೆಗೆದಿದ್ದಾರೆ. ಕಾರಿನ ರೂಪ ಬದಲಾವಣೆಗೆ ಬೇಕಾದ ಅಗತ್ಯ ಅನುಮತಿ ಪಡೆಯದೆ, ಅವರ ಲೋಗೊ ಬಳಸಿರುವುದಕ್ಕೆ ದೊಡ್ಡ ಮಟ್ಟದ ದಂಡ ಹೇರುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಕಾನೂನು ಏನು ಹೇಳುತ್ತದೆ?
ಕಾರಿನ ಮೂಲ ರೂಪದಲ್ಲಿ ಬದಲಾವಣೆ ಮಾಡುವುದು. ಕಾರಿನ ಚಕ್ರಗಳ ಅಳತೆ (upsizing tyres) ಹೆಚ್ಚಿಸುವುದು ಇತ್ಯಾದಿಗಳಿಗೆ ಆರ್ಟಿಓ ಅನುಮತಿ ಅಗತ್ಯವಾಗಿದೆ. ರೇಸಿಂಗ್ ಕಾರ್ ನಂತೆ ವಿನ್ಯಾಸಗೊಳಿಸುವುದು, ಬಾಹ್ಯ ಆಕಾರದಲ್ಲಿ ಬದಲಾವಣೆ, ಇಂಜಿನ್ ಗೆ ಪವರ್ ಬೂಸ್ಟರ್ ಅಳವಡಿಸುವುದು. ಮೂಲ ಕಾರನ್ನು ಇನ್ನೊಂದು ಕಂಪನಿಯ ಕಾರಿನಂತೆ ಕಾಣುವ ಹಾಗೆ ಬದಲಾವಣೆ ಮಾಡುವುದು ಇತ್ಯಾದಿ ಕಾನೂನು ಬಾಹಿರವಾಗಿದೆ.

Share this post
53Shares

Check Also

ವಾಟ್ಸ್ಯಾಪ್ ಬಳಕೆದಾರರಿಗೆ ಸಂತಸದ ಸುದ್ದಿ; ಇನ್ನು ಮೆಸೆಜ್ ಕಳುಹಿಸಿದ ನಂತರವೂ ಡಿಲೀಟ್ ಮಾಡಬಹುದಾಗಿ

ಸಾಮಾಜಿಕ ತಾಣಗಳಲ್ಲೊಂದ್ದಾದ ವ್ಯಾಟ್ಸಪ್ ಬಳಕೆದಾರರಿಗೆ ಅತಿ ಹೆಚ್ಚು ಚಿಂತೆಯ ವಿಷಯವನ್ನು ವಾಟ್ಸ್ಯಾಪ್ ಬಗೆಹರಿಸಿ ನಿರಾಳತೆ ನೀಡಿದೆ. ವಾಟ್ಸ್ಯಾಪ್ ಬಳಸುವ ಸಮಯದಲ್ಲಿ …

Leave a Reply

Your email address will not be published.

Blue Waves Media