Home / ಸುದ್ದಿಗಳು / ಜಿಗರ್ ಇಲ್ಲದ ಕಾಂಗ್ರೇಸ್ ಪಕ್ಷ! ಮತ ಬ್ಯಾಂಕ್ ಓಲೈಕೆಯಲ್ಲಿ ಬ್ಯುಸಿ

ಜಿಗರ್ ಇಲ್ಲದ ಕಾಂಗ್ರೇಸ್ ಪಕ್ಷ! ಮತ ಬ್ಯಾಂಕ್ ಓಲೈಕೆಯಲ್ಲಿ ಬ್ಯುಸಿ

ಸುದ್ದಿವಾಹಿನಿ ಡಾಟ್ ಕಾಂ: ಕಾಂಗ್ರೆಸ್ ಪಕ್ಷವು ಧ್ವನಿ ಎತ್ತ ಬೇಕಾದ ವಿಚಾರದಲ್ಲಿ ಮೌನವಾಗಿ ಜಿಗರ್ (ಧೈರ್ಯ) ಇಲ್ಲದ ಪಕ್ಷವಾಗಿದೆ ಎಂಬುದು ಸಾಬೀತಾಗುತ್ತಿದೆ.

ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ಎಂಬ ಸುದ್ದಿಯ ಬ್ರೇಕಿಂಗ್ ನ್ಯೂಸ್  ಮಾಧ್ಯಮಗಳಲ್ಲಿ ಬಿತ್ತರವಾಗಿ ಮುಜುಗರಗೊಳಗಾಗುವುದನ್ನು ತಪ್ಪಿಸುವ ಸಲುವಾಗಿ ಅಧಿಕಾರದಲ್ಲಿರುವ ಕೇಂದ್ರ ಸರಕಾರವು ತೈಲ ಬೆಲೆ ಪರಿಷ್ಕರಣೆಯನ್ನು ಉಪಾಯವಾಗಿ ಪ್ರತಿದಿನ ರುಟೀನ್ ಆಗಿ ಮಾಡಿದೆ. ಇದರಿಂದ ಪ್ರತಿ ದಿನ ಪೈಸೆ ಲೆಕ್ಕದಲ್ಲಿ ಏರಿಕೆಯಾಗುವುದು ಭಾರತೀಯ ಪ್ರಜೆಗಳ ಗಮನಕ್ಕೆ ಬಾರದೆ, ತಾವರಿಯದೆ ಹೊರಲಾಗದ ಹೊರೆಯನ್ನು ಹೊರುತ್ತಿದೆ. ತಮಗರಿವಿಲ್ಲದೆ ವಾಹನಿಗರು ಪಿಕ್ ಪಾಕೆಟ್ ಆಗುತ್ತಿದ್ದಾರೆ.

ಆದರೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಅದರ ಸಹ ಪಕ್ಷಗಳು ಈ ಬಗ್ಗೆ ಧ್ವನಿ ಎತ್ತ ಬೇಕಾಗಿತ್ತಾದರೂ, ತುಟಿ ಬಿಚ್ಚದೆ ಬೆಕ್ಕಿನಂತಾಗಿದೆ ಎಂದರೆ ತಪ್ಪಾಗಲಾರದು. ಪುಟ್ಟ ರಾಷ್ಟ್ರವಾದ ಶ್ರೀಲಂಕಾಗಿಂತಲೂ ದುಪ್ಪಟ್ಟ ತೈಲ ದರವನ್ನು ಭಾರತೀಯರು ಪಾವತಿಸುತ್ತಿದ್ದಾರೆ ಎಂದರೆ ಸೋಜಿಗವಲ್ಲವೇ? ಈ ಬಗ್ಗೆ ಧ್ವನಿ ಎತ್ತಲು, ಅಥವಾ ಅಭಿಯಾನ ಕೈಗೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಜಿಗರ್ ಇದೆಯಾ? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಕೇಂದ್ರದ ವಿರುದ್ದ ಈ ಬಗ್ಗೆ ಮಾತನಾಡಿದರೆ ತಮ್ಮ ಓಟುಗಳು ಜಾರಿಕೊಳ್ಳಬಹುದು ಎಂದು ಆತಂಕದಲ್ಲಿರುವ ಕಾಂಗ್ರೇಸ್ ಪಕ್ಷವು, ತಮ್ಮ ಮತ ಬ್ಯಾಂಕ್ ಗಟ್ಟಿಗೊಳಿಸಲು ಮೃದು ಹಿಂದುತ್ವದ ನೆರಳಿನ ಆಸರೆ ಪಡೆಯುತ್ತಿರುವುದು ಜಗಜ್ಜಾಹಿರಾಗಿದೆ. ಹೋದಲ್ಲೆಡೆ ಮುಸ್ಲಿಮರಿಗೆ ಕಡಲೆ ಕಾಯಿಯಂತಹ ಏನಾದರೂ ತೋರಿಸಿ ಮತ ಪಡೆಯಲು ಯತ್ನಿಸುತ್ತಿದ್ದರೆ, ಅತ್ತ ಲಿಂಗಾಯಿತರಿಗೆ ಅದು ಮಾಡುತ್ತೇವೆ, ಒಕ್ಕಲಿಗರಿಗೆ ಇದು ಮಾಡುತ್ತೇವೆ, ದಲಿತರಿಗೆ ಮತ್ತೊಂದು ಮಾಡುತ್ತೇವೆ ಎಂಬ ಮತಕಟ್ಟೆಗಳ ಸಂಪಾದನೆಯ ಲೆಕ್ಕಾಚಾರದಲ್ಲಿ ಮಗ್ನವಾಗಿದೆ.

ಕಾಂಗ್ರೇಸ್ ನ ಸಾಮಾಜಿಕ ಜಾಲತಾಣ (ಐಟಿ ಸೆಲ್) ಸಿದ್ದವಾಗಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಬಿಜೆಪಿ ಐಟಿ ಸೆಲ್ ಕಾಂಗ್ರೆಸ್ ವಿರುದ್ಧ ಹಾಗೂ ಕಾಂಗ್ರೆಸ್ ಐಟಿ ಸೆಲ್ ಬಿಜೆಪಿ ವಿರುದ್ಧ ಡಿಜಿಟಲ್ ಕೆಸರೆರೆಚಾಟದಲ್ಲಿ ಮಗ್ನವಾಗಿದೆಯೇ ಹೊರತು. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅಗತ್ಯವಾಗಿರು ತೈಲ ಬೆಲೆ ಏರಿಕೆ ಬಗ್ಗೆ ಅಭಿಯಾನ ಕೈಗೊಳ್ಳಲು ಬಹುಷ: ಇಂಟರ್ ನೆಟ್ ಡೇಟಾದ ಕೊರತೆ ಇದೆ ಎಂದು ಅನಿಸುತ್ತಿದೆ.

ವಾಹನಿಗರು ತಮ್ಮ ಅಸಹಾಯಕತೆಯನ್ನು ಪೆಟ್ರೋಲ್, ಡೀಸೆಲ್ ತುಂಬಿಸುವಾಗ ತಮ್ಮಷ್ಟಕ್ಕೆ ಗೊಣಗಿ ಸುಮ್ಮನಾಗುತ್ತಿದ್ದಾರೆ. ಇವರ ಗೊಣಗಾಟ ಕೊಂಡು ಪೆಟ್ರೋಲ್ ಹಾಕುವ ಹುಡುಗ ಪೆಚ್ಚು ಮುಖ ಹಾಕಿ ನೋಡುತ್ತಾನೆ. ಅಷ್ಟಕ್ಕೆ ವಾಹನಿಗರ ಆಕ್ರೋಶ ಹುಟ್ಟಿದ್ದಲೇ ಸತ್ತು ಹೋಗುತ್ತದೆ. ರಾಜಕಾರಣಿಗಳು ತಮಗೇನು ಅರಿವಿಲ್ಲ ಎಂಬಂತೆ ತೆರೆಮರೆಯಲ್ಲಿ ಮುಗುಳ್ನಗುತ್ತಿದ್ದಾರೆ.

ಇಷ್ಟೆಲ್ಲಾ ಹೇಳಲು ಕಾರಣವೇನೆಂದರೆ ಎರಡು ದಿನಗಳ ಕರಾವಳಿ ಭಾಗದಲ್ಲಿ ಪೆಟ್ರೋಲ್ ಬೆಲೆ 73:80 ರೂ ಇತ್ತು. ಆದರೆ ಇವತ್ತು 74:03 ರೂಪಾಯಿಗೆ ನೆಗೆದೇರಿದೆ. ಪ್ರತಿದಿನ ದಿನ ಬಳಕೆಯ ವಸ್ತುಗಳು ಬೆಲೆಯು ಆಕಾಶದತ್ತ ಮುಖ ಮಾಡಿದೆ. ಜನಸಾಮನ್ಯರು ಕೆಲಸವಿಲ್ಲದೆ ನಿರುದ್ಯೋಗಿಗಳಾಗುತ್ತಿದ್ದಾರೆ. ಸರಕು ಸಾಗಟದ ವಾಹನ ಮಾಲಕರು ಕಂತು ಕಟ್ಟಲಾಗದೆ, ತಮ್ಮ ವಾಹನಗಳನ್ನು ಬ್ಯಾಂಕ್ ನವರು ಸೀಝ್ ಮಾಡುವುದನ್ನು ಅಸಹಾಯಕರಾಗಿ ನೋಡುಲು ಸೀಮಿತವಾಗಿದ್ದಾರೆ. ಒಂದು ವೇಳೆ ಕೇಂದ್ರ ಸರಕಾರ ತೈಲದ ಮೇಲಿನ ಜಿ.ಎಸ್.ಟಿಯನ್ನು ತೆರವು ಗೊಳಿಸಿದರೆ ಅಥವಾ ಬಾಗಷಃ ಕಡಿತಗೊಳಿಸಿದರೆ, ತೈಲ ಬೆಲೆಯು ಅರ್ಧಕ್ಕೆ ಇಳಿಯುತ್ತದೆ.

ಇದರಿಂದ ದಿನ ನಿತ್ಯದ ವಸ್ತುಗಳ ಬೆಲೆಯು ಗಣನೀಯ ಕಡಿಮೆಯಾಗಿ ಮತ್ತೆ ನನ್ನ ಭಾರತ ಬಂಗಾರದ ಹಕ್ಕಿಯಾಗಿ ವಿಹರಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ… ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

Share this post
0Shares

Check Also

ಕೇಜ್ರಿವಾಲ್ ರ ಭೇಟಿಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ನಿರಾಕರಣೆ!

ಸುದ್ದಿವಾಹಿನಿ ಡಾಟ್ ಕಾಂ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾಗಲು ದಿಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್ ರವರು ಅನುಮತಿ …

Leave a Reply

Your email address will not be published.

Blue Waves Media