Home / ಕ್ರೀಡೆ / ಮತ್ತೊಮ್ಮೆ ಮೇರು ವ್ಯಕ್ತಿತ್ವ ತೋರಿಸಿದ ರಾಹುಲ್ ದ್ರಾವಿಡ್

ಮತ್ತೊಮ್ಮೆ ಮೇರು ವ್ಯಕ್ತಿತ್ವ ತೋರಿಸಿದ ರಾಹುಲ್ ದ್ರಾವಿಡ್

ಸುದ್ದಿವಾಹಿನಿ ಡಾಟ್ ಕಾಂ: ಭಾರತೀಯ ತಂಡದ ಮಾಜಿ ಆಟಗಾರ, ಕ್ರಿಕೆಟ್ ಅಂಗಳದ ಮಹಾಗೋಡೆ ಎಂದೆ ಪ್ರಖ್ಯಾತರಾಗಿರುವ ರಾಹುಲ್ ದ್ರಾವಿಡ್ ರವರು ತಾನೋರ್ವ ಉತ್ತಮ ಆಟಗಾರ ಮಾತ್ರವಲ್ಲ ಮೇರು ವ್ಯಕ್ತಿತ್ವದ ವ್ಯಕ್ತಿ ಎಂಬುದನ್ನು ಮತ್ತೊಮ್ಮೆ ತೋರ್ಪಡಿಸಿದರು.

Under-19 ವಿಶ್ವ ಕಪ್ ಜಯಶಾಲಿಯಾದ ಟೀಂ ಇಂಡಿಯಾದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ರವರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ “ನಮ್ಮ ತಂಡವು ಫೈನಲ್ ಪಂದ್ಯದಲ್ಲಿ ನಂಬರ್ ವನ್ ಆಟ ಆಡಿದೆ ಎಂದು ಭಾವಿಸುವುದಿಲ್ಲ. ಏಕೆಂದರೆ ತಂಡದ ಸಾಮರ್ಥ್ಯವನ್ನು ನೋಡಿದರೆ ಇದಕ್ಕಿಂತಲೂ ಉತ್ತಮ ಆಟ ಹೊರಹೊಮ್ಮ ಬೇಕಿತ್ತು. ಆದರೆ ಫೈನಲ್ ಪಂದ್ಯ ಆಡುವ ಒತ್ತಡವು ಬೇರೆಯೇ ರೀತಿಯದ್ದಾಗಿರುತ್ತದೆ. ಆದರೂ ಕೂಡಾ ಫೈನಲ್ ನಲ್ಲಿ ಚೆನ್ನಾಗಿ ಆಡಿ ವಿಶ್ವ ಕಪ್ ಗೆದ್ದಿರುವುದು ಸಂತೋಷವಾಗಿದೆ” ಎಂದರು

ಯಾವತ್ತೂ ಪ್ರಚಾರದ ಬೆನ್ನು ಬೀಳದ ಮಹಾಗೋಡೆಯು ಮತ್ತೊಮ್ಮೆ ಪ್ರಚಾರ ಬಯಸದೆ, ಈ ವಿಜಯದ ಎಲ್ಲಾ ಶ್ರೇಯವನ್ನು ತಂಡದ ಹುಡುಗರಿಗೆ ಕೊಟ್ಟಿದ್ದಾರೆ. “ಕೋಚ್ ನ ಪ್ರಯತ್ನದ ಪ್ರಭಾವ ತಂಡದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೇ ಎಂದು ಗೊತ್ತು. ಅದಾಗ್ಯೂ ಈ ವಿಜಯದ ಪ್ರತಿಯೊಂದು ಶ್ರೇಯವು ತಂಡದ 15 ಮಂದಿ ಹೊಸ ಚಾಂಪಿಯನ್ಸ್ ಗೆ ಸಲ್ಲಬೇಕಿದೆ. ಕೋಚ್ ನ ಕೆಲಸ ದಾರಿ ತೋರಿಸುವುದಾಗಿದೆ. ಆದರೆ ಅಂತಿಮವಾಗಿ ಮೈದಾನದಲ್ಲಿ ಅಳುಕದೆ, ವಿಚಲಿತರಾಗದೆ  ಒತ್ತಡಗಳನ್ನು ಎದುರಿಸುತ್ತಾ ಗುರಿಯತ್ತ ಸಾಗುವುದು ಅವರೇ ಅಲ್ಲವೇ? ಅವರು ಧೃಡವಾಗಿ ನಿಂತು ಪ್ರಬುದ್ಧತೆಯ ಆಟ ಆಡಿದ ಕಾರಣ ಈ ಯಶಸ್ಸು ಲಭಿಸಿದೆ. ಹಾಗಾಗಿ ಎಲ್ಲಾ ಶ್ರೇಯವು ಅವರಿಗೆ ಸಲ್ಲುತ್ತದೆ” ಎಂದರು.

ರಾಷ್ಟ್ರೀಯ ತಂಡದೊಂದಿಗೆ ವಿಶ್ವಕಪ್ ಗೆಲ್ಲದಿರುವುದಕ್ಕೆ ಈಗ ನೋವಾಗುತ್ತಿಲ್ಲ. ಏಕೆಂದರೆ ಆ ನನ್ನ ಕೊರತೆಯನ್ನು ನನಗಾಗಿ ನನ್ನ ಹುಡುಗರು ವಿಶ್ವಕಪ್ ಗೆಲ್ಲುತ್ತಿದ್ದಾರೆ. ಹಾಗಾಗಿ ಟೀಂ ಇಂಡಿಯಾಗೆ ವಿಶ್ವಕಪ್ ಆಟಗಾರನಾಗಿ ವಿಶ್ವಕಪ್ ತಂದು ಕೊಟ್ಟ ತಂಡದಲ್ಲಿ ನಾನಿಲ್ಲದಿರುವುದಕ್ಕೆ ಬೇಸರವಿಲ್ಲ. ನನ್ನ ಹುಡುಗರ ಸಾಧನೆಯು ನಿಜಕ್ಕೂ ಹೆಮ್ಮೆ ತಂದಿದೆ. ಎಳೆಯ ಹುಡುಗರನ್ನು ಹುಡುಕಿ, ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಿ ಅಂಗಳಕ್ಕಿಳಿದು ವಿಶ್ವಕಪ್ ಗೆಲ್ಲುವಂತೆ ಸಿದ್ಧಗೊಳಿಸುವ ಪ್ರಕ್ರಿಯೆಯಲ್ಲಿ ನಿಜವಾದ ಸಂತೋಷ ಹಾಗೂ ಸಮಾಧಾನವಿದೆ” ಎಂದರು

Share this post
0Shares

Check Also

ಡೆಲ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗಾಂಭೀರ್!

ಸುದ್ದಿವಾಹಿನಿ ಡಾಟ್ ಕಾಂ: ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಎರಡು ಪಂದ್ಯಗಳು ಬಾಕಿ ಇರುವಂತೆಯೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ …

Leave a Reply

Your email address will not be published.

Blue Waves Media