Home / ವೈರಲ್ / ಡಾಕ್ಟರ್ ರೂಪದಲ್ಲಿರುವ ಆಪತ್ಭಾಂದವ! ಈ ಸುದ್ದಿ ಓದಿದ ನಂತರ ಶೇರ್ ಮಾಡದಿರಲಾರಿರಿ.

ಡಾಕ್ಟರ್ ರೂಪದಲ್ಲಿರುವ ಆಪತ್ಭಾಂದವ! ಈ ಸುದ್ದಿ ಓದಿದ ನಂತರ ಶೇರ್ ಮಾಡದಿರಲಾರಿರಿ.

ಡಾಕ್ಟರ್ ಎಂದರೆ ಜೀವ ಉಳಿಸುವ ದೇವರ ಪ್ರತಿರೂಪ ಎಂಬ ಮಾತನ್ನು ಅಕ್ಷರಸಹ ಒಡಿಸ್ಸಾದ ಈ ಡಾಕ್ಟರ್ ನಿಜವಾಗಿಸಿ ತೋರಿಸಿದ್ದರೆ. ತನ್ನ ಕರ್ತ್ಯವ್ಯವನ್ನು ನಿಭಾಯಿಸಿ ತನ್ನನ್ನು ನಂಬಿರುವ ರೋಗಿಯ ಜೀವ ಉಳಿಸಲು ನಂಬಲಸಾಧ್ಯ ಸಾಹಸ ಮಾಡಿದ ಈ ಡಾಕ್ಟರ್ ರವರ ಕಾರ್ಯವನ್ನು ಮೆಚ್ಚಲೇಬೇಕಿದೆ.

ಒಡಿಸ್ಸಾದ ಮಲ್ಕಾನ್ ಗಿರಿ ಎಂಬ ಜಿಲ್ಲೆಯಲ್ಲಿರುವ ವೈದ್ಯರೊಬ್ಬರ ಮಾನವೀಯತೆಯು ಬಡಜನರ ಪಾಲಿಗೆ ಸಾಕ್ಷಾತ ದೇವರಂತೆ ಕೆಲಸ ಮಾಡಿದೆ. ಆಂಬ್ಯುಲೆನ್ಸ್ ಕೂಡಾ ಸಾಗಲು ದಾರಿ ಇಲ್ಲದ ಕುಗ್ರಾಮದಲ್ಲಿ, ಗರ್ಭಿಣಿ ಮಹಿಳೆಯು ಹೆರಿಗೆಯಾದ ನಂತರ ವಿಪರೀತ ರಕ್ತಸ್ರಾವವಾಗುತ್ತಿದ್ದ ಕಾರಣ ಜಿಲ್ಲಾಸ್ಪತ್ರೆಗೆ ಕರೆ ಮಾಡಲಾಗಿತ್ತು.

ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಓಂಕಾರ್ ಹೋತಾ ಎಂಬವರು ಆ ಮಹಿಳೆಯ ಮನೆಗೆ ಧಾವಿಸಿ ಪರೀಕ್ಷಿಸಿದಾಗ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕೆಂದು ಮನಗಂಡಿದ್ದರು. ಆದರೆ ಅಲ್ಲಿಗೆ ಆಂಬ್ಯುಲನ್ಸ್ ಕೂಡಾ ತಲುಪಲು ಸಾಧ್ಯವಿಲ್ಲದ ಕಾರಣ, ರೋಗಿ ಮಹಿಳೆಯನ್ನು ಖಟಿಯಾ (ಹಗ್ಗದಿಂದ ತಯಾರಿಸಿದ ಮಂಚ)ದಲ್ಲಿ ಮಲಗಿಸಿ ಸುಮಾರು ಎಂಟು ಕಿಮಿ ತನಕ ಹೊತ್ತು ಸಾಗಲು ಅಣಿಯಾದಾಗ ಅವರ ಕುಟುಂಬಸ್ಥರೂ ಕೂಡಾ ಕೈ ಜೋಡಿಸಿ ಹೊತ್ತಿ ಕೊಂಡೇ ಸಾಗಿದ್ದಾರೆ. ಇವರ ಈ ಸಾಹಸ ನೋಡಿ ಊರಿನ ಜನರು ಮೂಕವಿಸ್ಮಿತರಾಗಿದ್ದರು. ಇಂತಹ ಮಾನವೀಯತೆಯ ಪ್ರತೀಕವಾಗಿರುವ ಡಾಕ್ಟರ್ ಗೊಂದು ಸಲಾಂ ಹೇಳಲೇ ಬೇಕಲ್ಲವೆ.

 

Share this post
0Shares

Check Also

ಫೇಸ್ ಬುಕ್ ಲೈವ್ ನಲ್ಲಿ ಯುವತಿಯನ್ನು ಗ್ಯಾಂಗ್ ರೇಪ್ ಮಾಡಿದ ದುರುಳರು!

ಸುದ್ದಿವಾಹಿನಿ ಡಾಟ್ ಕಾಂ: ಮಹಿಳೆಯರನ್ನು ಅತ್ಯಾಚಾರ ಮಾಡುವಂತಹ ಹೀನಮನಸ್ಥಿತಿಯು ಇತ್ತೀಚಿನ ದಿನಗಳಲ್ಲಿ ಅದ್ಯಾವ ಪರಿ ಮೃಗೀಯವಾಗಿದೆ ಎಂದರೆ, ಮೂವರು ಯುವಕರು …

Leave a Reply

Your email address will not be published.

HOME
Blue Waves Media