Home / ಅಟೋ / ಒಂದು ಲೀಟರ್ ಪೆಟ್ರೋಲ್ ನಲ್ಲಿ 153 ಕಿಮಿ ಓಡುವ ಬೈಕ್!

ಒಂದು ಲೀಟರ್ ಪೆಟ್ರೋಲ್ ನಲ್ಲಿ 153 ಕಿಮಿ ಓಡುವ ಬೈಕ್!

ಸಾಮಾನ್ಯವಾಗಿ ಬೈಕ್ ಗಳ ಮೈಲೇಜ್ ಪ್ರತಿ ಲೀಟರ್ ಗೆ 50-60 ರ ಒಳಗೆ ಇರುತ್ತದೆ. ಆದರೆ ಹೊಸ ಬೈಕ್  ಸುಮಾರು 150 ಕಿಮಿ ಓಡಲಿದೆ ಎಂದರೆ ಆ ಬೈಕ್ ಖರೀದಿಸುವವರ ಸಾಲಿನಲ್ಲಿ ತಾವೂ ಕೂಡ ಮೊದಲಿಗನಾಗುವಿರಿ ಅಲ್ಲವೆ? ಇಷ್ಟು ಸೂಪರ್ ಮೈಲೇಜ್ ನೀಡಬಲ್ಲ ಬೈಕ್ ಸಧ್ಯದಲ್ಲೇ ಬರಲಿದೆ. ಹೌದು ನಾವಿವತ್ತು ಇಂತಹದೆ ಇಂದು ಸುದ್ದಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಬೈಕ್ ಹುಚ್ಚು ಇರುವ ವಿವೇಕ್ ಎಂಬ ಯುವಕ ಹೈಸ್ಕೂಲ್ ಶಿಕ್ಷಣ ಮೊಟಕುಗೊಳಿಸಿ ಬೈಕ್ ಗ್ಯಾರೇಜ್ ಸೇರಿ ಬೈಕ್ ನ ಮಾಲಕರ ಬಹುದೊಡ್ಡ ಸಮಸ್ಯೆಯಾದ ಮೈಲೇಜ್ ಅನ್ನು ಹೇಗೆ ಹೆಚ್ಚಿಸಬಹುದೆಂದು ಪ್ರಯತ್ನಿಸುತ್ತಿದ್ದ. ಇದಕ್ಕೆ ಆತ ತನ್ನ ಸ್ವಂತ ಹಣ ಖರ್ಚು ಮಾಡುತ್ತಿದ್ದ. ಇದಕ್ಕೆ ಆತನಿಗೆ ತಗಲಿದ್ದು ಬರೋಬ್ಬರಿ 17 ವರ್ಷ. ತನ್ನ 17 ವರ್ಷಗಳ ಛಲ ಬಿಡದ ಪ್ರಯತ್ನವು ಕೊನೆಗೂ ಸಕಾರಗೊಂಡಿದೆ. ಒಂದು ಲೀಟರ್ ಗೆ 153 ಕಿಮಿ ಓಡಬಲ್ಲ ಬೈಕ್ ಇಂಜಿನ್ ತಯಾರಿಸಿದ್ದಾನೆ. ಈತನ ಈ ಸಾಧನೆಯ ಪಾಜೆಕ್ಟ್ ಗಾಗಿ ಈಗಾಗಲೇ ಅರ್ಹವಾಗಿ 75 ಲಕ್ಷ ರೂ. ಪಡೆದಿದ್ದಾನೆ.

Council of Science And Technology (UPCST), Lucknow, ಈಗಾಗಲೇ ಈತನ ಡಿಸೈನ್ ಗೆ ಒಪ್ಪಿಗೆ ನೀಡಿದೆ ಹಾಗೂ ಇಂಜಿನ್ ಗುಣಮಟ್ಟವನ್ನು ಉತ್ತಮಗೊಳಿಸುವ ಕಾರ್ಯ ಆರಂಭಿಸಿವೆ. ಹಾಗೂ Motilal Nehru National Institute of Technology, Allahabad, ಈತನ ಡಿಸೈನ್ ಅನ್ನು ಪರೀಕ್ಷಿಯಾಗಿದೆ ಹಾಗೂ ಈ ಸಾಧನೆಯನ್ನು ನಿಜವಾಗಿಯೂ ಅದ್ಭುತ ಎಂದು ಸಂಶೋಧನ ಅಧಿಕಾರಿಯಾಗಿರುವ ಸಂದೀಪ್ ದ್ವಿವೇದಿಯವರು ತಿಳಿಸಿದರು. ಇದಲ್ಲದೆ ಕತ್ರಾದಲ್ಲಿರುವ SMVDU ವಿವೇಕ್ ನ ಈ ಪ್ರಾಜೆಕ್ಟನ್ನು ಸ್ಟಾರ್ಟ್ ಅಪ್ ಮಾದರಿಯಲ್ಲಿ ನೊಂದಾಯಿಸಿಕೊಂಡಿದೆ. A B-tech ಗ್ರಾಜುವೇಟ್ ಆಕಾಶ್ ರವರು ಇದರಲ್ಲಿ ಸಹಾಯಕರಾಗಿರುವರು.

Share this post
296Shares

Check Also

ಹೊಸ ದಾಖಲೆ ಬರೆದ ಬುಲ್ಲೆಟ್ ಬೈಕ್

ಸುದ್ದಿವಾಹಿನಿ ಡಾಟ್ ಕಾಂ:  ಹೊಸದಾಗಿ ಬಿಡುಗಡೆ ಮಾಡಿದ ಎಲ್ಲಾ ಬೈಕ್ ಗಳು ಕೇವಲ 15 ಸೆಕೆಂಡುಗಳಲ್ಲಿ ಮಾರಾಟವಾಗಿ ಬುಲ್ಲೆಟ್ ಕಂಪನಿಯು …

Leave a Reply

Your email address will not be published.

Blue Waves Media