Home / ವೈರಲ್ / ಕಾರಿನಲ್ಲಿ ಮಲಗಿದ್ದ ದಂಪತಿಗಳ ನಿದ್ರೆಗೆ ಭಂಗ ಬರದಂತೆ 4 ಗಂಟೆ ಕಾವಲು ನಿಂತ ಪೊಲೀಸ್!

ಕಾರಿನಲ್ಲಿ ಮಲಗಿದ್ದ ದಂಪತಿಗಳ ನಿದ್ರೆಗೆ ಭಂಗ ಬರದಂತೆ 4 ಗಂಟೆ ಕಾವಲು ನಿಂತ ಪೊಲೀಸ್!

ಸುದ್ದಿವಾಹಿನಿ ಡಾಟ್ ಕಾಂ: ಕಾರು ಚಲಾಯಿಸಿ ಸುಸ್ತಾಗಿ ದಂಪತಿಗಳು ಕಾರಿನಲ್ಲೇ ಮಲಗಿದ್ದಾಗ, ಅವರ ನಿದ್ರೆಗೆ ಭಂಗ ಬರದಂತೆ ಹಾಗೂ ಅವರಿಗೆ ಕಳ್ಳಕಾಕರರಿಂದ ಯಾವುದೇ ತೊಂದರೆಯಾಗ ಬಾರದೆಂಬ ಕಾರಣಕ್ಕಾಗಿ ಸುಮಾರು 4 ಗಂಟೆಗಳ ಕಾಲ ಪಹರೆ ನೀಡಿ ಮಾನವೀಯತೆ ಮೆರೆದ ಸೌದಿ ಅರೇಬಿಯಾದ ಪೊಲೀಸ್ ಒಬ್ಬರು ಪ್ರಶಂಸೆಗೆ ಕಾರಣರಾಗಿದ್ದಾರೆ. ಈ ಸುದ್ದಿಯು ಸಾಮಾಜಿಕ ತಾಣದಲ್ಲಿ ಪೋಸ್ಟ್ ಆಗುತ್ತಲೆ ಜನರು ನಾ ಮುಂದು ತಾ ಮುಂದು ಎಂದು ಪ್ರಶಂಸೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಪೊಲೀಸರೆಂದ ಕೂಡಲೇ ಜನರು ನೆಗೆದು ಬೀಳುತ್ತಾರೆ. ತಮ್ಮ ಮೇಲೆ ವಿನಾಃ ಕಾರಣ ದಂದ ಹಾಕುತ್ತಾರೋ, ಇನ್ನೇನು ಅಶ್ಲೀಲ ಪದ ಬಳಸಿ ಮೂದಲಿಸುತಾರೋ ಎಂಬ ಆತಂಕ ಸದಾ ಜನ ಸಾಮಾನ್ಯರಲ್ಲಿ ಸದಾ ಮನೆ ಮಾಡಿರುತ್ತದೆ. ಆದರೆ ಸೌದಿ ಅರೇಬಿಯಾದ ಪೊಲೀಸರು ಮಾನವೀಯತೆಯನ್ನು ಎತ್ತಿ ಹಿಡಿದ ಘಟನೆ ನಡೆದಿದೆ. ಈಜಿಪ್ಟ್ ದೇಶದ ದಂಪತಿಗಳು ತಮ್ಮ ಕಾರಿನಲ್ಲಿ ಪವಿತ್ರ ಉಮ್ರಾ ಕಾರ್ಯವನ್ನು ನಿರ್ವಹಿಸಿ, ನಿರ್ಗಮಿಸುತ್ತಿದ್ದರು. ಗಂಟೆಗಳ ಕಾಲ ಕಾರು ಚಲಾಯಿಸಿ ಸುಸ್ತಾಗಿದ್ದ ಕಾರಣ, ಯಾವುದೆ ರಸ್ತೆ ಅಪಘಾತ ಅಥವ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ಬದಲು, ತಮ್ಮ ಕಾರನ್ನು ಸೌದಿ ಅರೇಬಿಯಾದ ಒಂದು ಮೇಲ್ಸೇತುವೆಯ ಕೆಳಗೆ ಪಾರ್ಕ್ ಮಾಡಿ ಒಂದೆರಡು ಗಂಟೆಗಳ ಕಾಲ ನಿದ್ರಿಸಿ ತಮ್ಮ ಪ್ರಯಾಣ ಮುಂದುವರೆಸಲು ನಿದ್ರಿಸಿದ್ದರು.

ಇಜಿಪ್ಶಿಯನ್ ದಂಪತಿಗಳು ಕಾರಿನಲ್ಲಿ ವಿಶ್ರಾಂತಿ ಪಡಕೊಳ್ಳುತ್ತಿರುವುದನ್ನು ಗಮನಿಸಿದ ಸೌದಿ ಪೊಲೀಸ್ ಒಬ್ಬರು, ಅವರ ನಿದ್ರೆಗೆ ಭಂಗ ಬರದಂತೆ ಹಾಗೂ ಇತರರಿಂದ ಯಾವುದೇ ತೊಂದರೆಯಾಗದಂತೆ ಬರೋಬ್ಬರಿ 4 ಗಂಟೆಗಳ ಕಾಲ ಕಾವಲು ಕಾದಿದ್ದರು. ದಂಪತಿಗಳು ಸುಮಾರು ಐದು ಗಂಟೆಗಳ ಬಳಿಕ ಎಚ್ಚೆತ್ತಾಗ ತಮ್ಮ ಮುಂದೆ ಪೊಲೀಸ್ ಕಂಡು ಕ್ಷಣ ಕಾಲ ವಿಚಲಿತರಾಗಿದ್ದರು. ಆ ಸಮಯದಲ್ಲಿ ಅವರ ಬಳಿ ಬಂದ ಪೊಲೀಸ್, ಅವರನ್ನು ಉದ್ದೇಶಿಸಿ “ತಾವುಗಳು ಕ್ಷೇಮವಾಗಿದ್ದೀರಿ ತಾನೆ? ತಮಗೇನು ತೊಂದರೆ ಆಗಿಲ್ಲ ತಾನೆ? ಎಂದು ವಿಚಾರಿಸಿದಾಗ ದಂಪತಿಗಳು ಸಾವರಿಸಿಕೊಂಡು ನಿರಾಳರಾಗಿದ್ದರು. ನಿಮ್ಮನ್ನು ಕಳೆದ ನಾಲ್ಕು ಗಂಟೆಗಳಿಂದ ಕಾಯುತ್ತಿದ್ದೇನೆ ಎಂದೊ ಪೊಲೀಸ್ ಹೇಳಿದಾಗ, ದಂಪತಿಗೆ ಮಾತೇ ಹೊರಡಲಿಲ್ಲ.

ಆ ದಂಪತಿಗಳನ್ನು ಬೀಳ್ಕೊಡುವ ಮೊದಲು “ಈ ರೀತಿ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ನಿದ್ರಿಸ ಬೇಡಿ. ಯಾರಾದರೂ ನಿಮಗೆ ತೊಂದರೆ ಕೊಡುವ ಸಾಧ್ಯತೆಗಳಿರುತ್ತವೆ. ನಿಮ್ಮ ವಸ್ತುಗಳನ್ನು ಕದಿಯುವ ಸಾದ್ಯತೆಗಳಿರುತ್ತವೆ. ಹಾಗಾಗಿ ವಿರಮಿಸಬೇಕೆಂದಾದರೆ, ಯಾವುದಾದರೂ ಒಂದು ಹೊಟೇಲ್ ರೂಂ ಪಡೆದು ಸುರಕ್ಷಿತವಾಗಿ ವಿಶ್ರಾಂತಿ ಪಡೆಯಿರಿ ಎಂದು ಸಲಹೆ ನೀಡಿ ಬೀಳ್ಕೊಟ್ಟಿದ್ದರು.

ಈ ಎಲ್ಲಾ ಘಟನಾವಳಿಗಳನ್ನು ಕಂಡ ವ್ಯಕ್ತಿಯೊಬ್ಬರು ಸಾಮಾಜಿಕ ತಾಣದಲ್ಲಿ ಹಾಕಿದ್ದರು. ತಕ್ಷಣವೇ ವಿಶ್ವದಾದ್ಯಂತ ಕ್ಷಣಾರ್ಧದಲ್ಲಿ ವೈರ ಆಗಿದೆ.

Share this post
5761Shares

Check Also

ಜನರ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡಿದ ಎನ್.ಮಹೇಶ್ ಗೆ ತೇಜೋವಧೆಯ ಶಿಕ್ಷೆ 

ಸುದ್ದಿವಾಹಿನಿ ಡಾಟ್ ಕಾಂ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎನ್.ಮಹೇಶ್ ಅವರ ತತ್ವ, ಸಿದ್ಧಾಂತ, ಆದರ್ಶಗಳನ್ನು ಪ್ರಶ್ನಿಸಲಾಗುತ್ತಿದೆ. ಇವೆಲ್ಲ ಆರಂಭವಾಗಿರುವುದು …

Leave a Reply

Your email address will not be published.

Blue Waves Media