Home / ಸುದ್ದಿಗಳು / ಬಲ್ಕಿಸ್ ಬಾನು ಪಾಲಿಗೆ ಆಪತ್ಬಾಂಧವರಾದ ಪೊಲೀಸ್ ರವಿ ಕುಮಾರ್

ಬಲ್ಕಿಸ್ ಬಾನು ಪಾಲಿಗೆ ಆಪತ್ಬಾಂಧವರಾದ ಪೊಲೀಸ್ ರವಿ ಕುಮಾರ್

ಸುದ್ದಿವಾಹಿನಿ ಡಾಟ್ ಕಾಂ: ಪೊಲೀಸರೆಂದ ಕೂಡಲೇ ಭಯ ಮಿಶ್ರಿತ ಸಂಶಯಾಸ್ಪದವಾಗಿ ನೋಡುವ ಈ ಕಾಲದಲ್ಲಿ, ಅದರಲ್ಲೂ ಮುಖ್ಯವಾಗಿ ಕರಾವಳಿಯ ಪೊಲೀಸರೆಂದರೆ ಒಂದು ರೀತಿಯಲ್ಲಿ ಭಯ ತುಸು ಹೆಚ್ಚಾಗಿಯೇ ಇರುವುದು ಸಹಜ. ಇಂತಹಾ ಪರಿಸ್ಥಿತಿಗೆ ಅಪವಾದ ಎಂಬಂತೆ ಕಷ್ಟಕಾಲದಲ್ಲಿ ಧರ್ಮಗಳ ನೆರಳು ಸೋಂಕದೆ ಸಹಾಯ ಹಸ್ತ ಚಾಚ ಬಹುದು ಎಂಬುದನ್ನು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪೊಲೀಸ್ ಆಗಿರುವ ರವಿ ಕುಮಾರ್ ತೋರಿಸಿ ಕೊಟ್ಟಿದ್ದಾರೆ.

ಉಳ್ಳಾಲ ಪರಿಸರದ ಬಲ್ಕಿಸ್ ಬಾನು ಎಂಬ ಮುಸ್ಲಿಂ ಮಹಿಳೆಯೋರ್ವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗಾಗಿ ಕರೆ ತರುತ್ತಿದ್ದಾಗ ರಸ್ತೆ ಮಧ್ಯೆಯೇ ವಿಪರೀತ ನೋವು ಕಾಣಿಸಿಕೊಂಡು ರಕ್ತಸ್ರಾವವಾಗಲು ಆರಂಭವಾಗಿತ್ತು. ಅದಾಗಲೇ ಸುಮಾರು 8 ಕಿಮಿ ರಿಕ್ಷಾದಲ್ಲಿ ಪ್ರಾಣಿಸಿದ್ದ ಬಲ್ಕಿಸ್ ಬಾನು ಗೆ ತಡೆಯಲಾರದ ನೋವು ಕಾಣಿಸಿಕೊಂಡು, ನವಜಾತ ಮಗು ಹೊಟ್ಟೆಯಿಂದ ಹೊರಗೆ ಬಂದಿತ್ತು. ತಕ್ಷಣ ರಿಕ್ಷಾವನ್ನು ದಾರಿಪಕ್ಕ ನಿಲ್ಲಿಸಿ ಸಹಾಯಕ್ಕಾಗಿ ಎದುರು ನೋಡುತ್ತಿದ್ದರು.

ಇದೇ ಸಮಯದ ತನ್ನ ಮಕ್ಕಳನ್ನು ಶಾಲೆಗೆ ಬಿಡಲು ಬಂದಿದ್ದ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಪೇದೆಯಾಗಿರುವ ರವಿ ಕುಮಾರ್ ರವರಿಗೆ ಕೈ ಸನ್ನೆ ಮೂಲಕ ಸಹಾಯ ಯಾಚಿಸಿದ್ದರು. ತಕ್ಷಣ ತನ್ನ ಕಾರು ನಿಲ್ಲಿಸಿ, ಪ್ರಸವ ವೇದನೆಯಿಂದಾಗಿ ರಕ್ತಸ್ರಾವವಾಗುತ್ತಿದ್ದ ಬಲ್ಕಿಸ್ ಬಾನುಗೆ ತನ್ನದೆ ಕಾರಿನಲ್ಲಿ ಹೆರಿಗೆ ಮಾಡಿಸಲು ಹಿಂದೆಮುಂದೆ ನೋಡದೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ವೇಗವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ರವಿ ಕುಮಾರ್ ರವರ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯೊಂದಿಗಿದ್ದ ಆಕೆಯ ತಾಯಿ ಹಾಗೂ ಸಹೋದರಿ ಕೂಡಾ ಇದ್ದರು.

ಆಸ್ಪತ್ರೆ ತಲುಪಿದ್ಫ ನಂತರ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳು ಮಗುವಿನ ನಾಬಿ ಕತ್ತರಿಸಿ ತಾಯಿಯಿಂದ ಬೇರ್ಪಡಿಸಿದರು. ಬಲ್ಕಿಸ್ ಬಾನು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ರವಿ ಕುಮಾರ್ ರವರ ಮಾನವೀಯತೆಗೆ ಒಂದು ಸಲಾಂ ಹೊಡೆಯಲೇ ಬೇಕು.

►►ಹೊಸ ಅಪ್ಡೇಟ್ ಗಳಿಗಾಗಿ ಕೆಳಗಿನ ಲಿಂಕ್ ತೆರೆದು  ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ
https://www.facebook.com/Suddivahininews/

Share this post
0Shares

Check Also

ಅತ್ಯಾಚಾರ ಮಾಡಿದ ವಿಡಿಯೋ ವೈರಲ್ ಮಾಡುವೆ ಎಂದ ಸೈನಿಕ; ಮಹಿಳೆ ಆತ್ಮಹತ್ಯೆ!

ಸುದ್ದಿವಾಹಿನಿ ಡಾಟ್ ಕಾಂ: ಸೈನಿಕನಿಂದ ಆತ್ಯಾಚಾರಕ್ಕೆ ಒಳಗಾಗಿದ ಮಹಿಳೆಯು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಮುಝಫ್ಫರ್ …

Leave a Reply

Your email address will not be published.

HOME
Blue Waves Media