Home / ವೈರಲ್ / ವೈರಲ್ ಆಗುತ್ತಿದೆ ಪ್ರಭುದೇವರವರ ತಂದೆಯವರ ಸೂಪರ್ ಬ್ರೇಕ್ ಡ್ಯಾನ್ಸ್

ವೈರಲ್ ಆಗುತ್ತಿದೆ ಪ್ರಭುದೇವರವರ ತಂದೆಯವರ ಸೂಪರ್ ಬ್ರೇಕ್ ಡ್ಯಾನ್ಸ್

ಸುದ್ದಿವಾಹಿನಿ ಡಾಟ್ ಕಾಂ: ಡ್ಯಾನ್ಸಿಂಗ್ ಸೆನ್ಸೇಶನ್ ಪ್ರಭು ದೇವ ಹಾಗೂ ಅವರ ತಂದೆಯವರು ಜತೆಯಾಗಿ ಡ್ಯಾನ್ಸ್ ಮಾಡಿರುವ ಕ್ಲಿಪ್ ಒಂದು ಸಾಮಾಜಿಕ ತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪ್ರಖ್ಯಾತ ಡ್ಯಾನ್ಸ್ ರಿಯಾಲಿಟಿ ಶೋ “ಡ್ಯಾನ್ಸ್ ಪ್ಲಸ್” ವೇದಿಕೆಯಲ್ಲಿ ಪ್ರಭು ದೇವ ಹಾಗೂ ಅವರ ತಂದೆ ಮುಗುರ್ ಸುಂದರ್ ರವರು ಜತೆಯಾಗಿ ಡ್ಯಾನ್ಸ್ ಮಾಡಿರುವ ಕ್ಲಿಪ್ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಾ ಭಾರಿ ಪ್ರಶಂಸೆಗೆ ಪಾತ್ರವಾಗುತ್ತಿದೆ. 1988 ರ ಸಮಯದಲ್ಲಿ ಹಿನ್ನೆಲೆ ಡ್ಯಾನ್ಸರ್ ಆಗಿ ಚಿತ್ರಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಪ್ರಭುದೇವ ನಂತರ ಅರ್ಜುನ್ ಸರ್ಜಾ ರವರ ಜಂಟಲ್ ಮ್ಯಾನ್ ಚಿತ್ರದಲ್ಲಿನ “ಚುಕುಬುಕು ರೈಲೇ” ಚಿತ್ರದಲ್ಲಿನ ಅಮೋಘ ನೃತ್ಯದ ಮೂಲಕ ಸಿನೆಮಾ ಪ್ರಿಯರನ್ನು ರಂಜಿಸಿ ಪರಿಚಿತರಾದರು. ತದ ನಂತರ “ಕಾದಲನ್” ಎಂಬ ಸೂಪರ್ ಡೂಪರ್ ಹಿಟ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿ ಇಂಡಿಯನ್ ಸಿನೆಮಾಗಳಲ್ಲಿ ಹೊಸ ಇಂಡಿಯನ್ ಮೈಕಲ್ ಜಾಕ್ಸನ್ ಎಂಬ ಬಿರುದಿಗೆ ಪಾತ್ರರಾಗಿದ್ದರು. ಆ ನಂತರ ಹಿಂತಿರುಗಿ ನೋಡದ ಪ್ರಭುದೇವರನ್ನು ಅರಿಯದ ಭಾರತೀಯ ಸಿನೆಮಾ ಪ್ರೀಯರು ಯಾರೂ ಇರಲಿಕ್ಕಿಲ್ಲ.

3 ಎಪ್ರಿಲ್ 1973 ಮೈಸೂರಿನಲ್ಲಿ ಮುಗುರು ಸುಂದರ್ ಹಾಗೂ ಮಹಾದೇವಮ್ಮ ಎಂಬ ಲಿಂಗಾಯತ ದಂಪತಿಗಳಿಗೆ ಜನಿಸಿದ ಪ್ರಭುದೇವರು ಕನ್ನಡಿಗ ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಏಕೆಂದರೆ ತಮಿಳು ಚಿತ್ರರಂಗದಿಂದ ಪಾದಾರ್ಪಣೆ ಮಾಡಿ ಪ್ರಸಿದ್ದರಾಗಿದ್ದ, ಇವರು ಹಲವಾರು ಸೂಪರಠಿಟ್ ಚಿತ್ರಗಳನ್ನು ನೀಡಿದ್ದಾರೆ. ಅಲ್ಲದೆ ರೌಡಿ ರಾಥೋಡ್, ವಾಂಟೆಡ್ ಚಿತ್ರಗಳನ್ನೂ ನಿರ್ಮಿಸಿದ್ದಾರೆ. ಯುವ ಡ್ಯಾನ್ಸರ್ ಗಳಿಗೆ ಚಿತ್ರಗಳಲ್ಲಿ ಅವಕಾಶ ಮಾಡಿಕೊಡುವ ಸಲುವಾಗಿ ಎಬಿಸಿಡಿ ಹಾಗೂ ಎಬಿಸಿಡಿ2 ಚಿತ್ರಗಳನ್ನೂ ನಿರ್ಮಿಸಿ ನಟಿಸಿದ್ದಾರೆ.

ವಿಡಿಯೋ ನೋಡಿ:

Share this post
0Shares

Check Also

ಜನರ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡಿದ ಎನ್.ಮಹೇಶ್ ಗೆ ತೇಜೋವಧೆಯ ಶಿಕ್ಷೆ 

ಸುದ್ದಿವಾಹಿನಿ ಡಾಟ್ ಕಾಂ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎನ್.ಮಹೇಶ್ ಅವರ ತತ್ವ, ಸಿದ್ಧಾಂತ, ಆದರ್ಶಗಳನ್ನು ಪ್ರಶ್ನಿಸಲಾಗುತ್ತಿದೆ. ಇವೆಲ್ಲ ಆರಂಭವಾಗಿರುವುದು …

Leave a Reply

Your email address will not be published.

Blue Waves Media