Home / ಸುದ್ದಿಗಳು / ಸರಕಾರಿ ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡಿರುವ ಪ್ರಾಂಶುಪಾಲೆ!

ಸರಕಾರಿ ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡಿರುವ ಪ್ರಾಂಶುಪಾಲೆ!

ಖಾಸಗಿ ಶಾಲೆಗಳು ಎಲ್ಲೆಂದರಲ್ಲಿ ಎಗ್ಗಿಲ್ಲದೆ ತಲೆ ಎತ್ತುತ್ತಿರುವ ಈ ಕಾಲದಲ್ಲಿ, ಅಳಿದುಳಿದ ಸರಕಾರಿಗಳತ್ತ ಬಡ ವಿದ್ಯಾರ್ಥಿಗಳು ಬೆರಳೆಣಿಕೆಯ ಸಂಖ್ಯೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಸರಕಾರಿ ಶಾಲೆಗ ಬರುವ ಈ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಕೊಡುವ ಬದಲು ಇಲ್ಲೊಬ ಪ್ರಾಂಶುಪಾಲೆ ಶಾಲೆಯನ್ನೆ ಬ್ಯೂಟಿ ಪಾರ್ಲರ್ ತರಹ ಬಳಸುತ್ತಾ ಫೇಶಿಯಲ್ ಮಾಡಿಸುವ ವಿಡಿಯೋ ವೈರಲ್ ಆಗುತ್ತಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜಾಹಿರಾತು ವಿಡಿಯೋದ ಕೆಳಗೆ ಸುದ್ದಿ ವಿಡಿಯೋ ಇದೆ ನೋಡಿ

ಉತ್ತರ ಪ್ರದೇಶ ಗೋರಖ್ಪುರ ಸಹಬಾಜ್ ಗಂಗ್ ನಲ್ಲಿರುವ ರೋಟರಿ ಸ್ಕೂಲ್ ಪ್ರಾಥಮಿಕ ವಿದ್ಯಾಲಯದ ಇಳಿ ವಯಸ್ಸಿನ ಪ್ರಾಂಶುಪಾಲೆಯು ಶಾಲೆಯಲ್ಲೇ ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳಲು ಬ್ಯೂಟಿಶಿಯನ್ ಕರೆದು ಮೇಕಪ್ ಮಾಡಿಸುತ್ತಾರೆ ಎಂದು ಕೇಳಿ ಬಂದಿದ್ದ ಆರೋಪದ ಸತ್ಯಾಸತ್ಯತೆಯನ್ನು ಅರಿಯಲು ಮಾಧ್ಯಮದವರು ಶಾಲೆಗೆ ಪ್ರವೇಶಿಸಿದಾಗ, ಶಾಲೆಯ ಕೊಠಡಿಯಲ್ಲಿ ಪ್ರಾಂಶುಪಾಲೆಯು ಫೇಶಿಯಲ್ ಮಾಡಿಸಿಕೊಳ್ಳುವ ದೃಶ್ಯವು ಮಾಧ್ಯಮದವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಪ್ರಾಂಸುಪಾಲೆಯಲ್ಲಿ ಕೇಳಿದಾಗ ಇತರರಂತೆ ಸಾಮಾನ್ಯವೆಂಬಂತೆ “ನನ್ನನ್ನು ಸಿಲುಕಿಸುವ ಷಡ್ಯಂತ್ರ ಮಾಡಲಾಗಿದೆ” ಎಂದು ಉತ್ತರಿಸಿದ್ದಾರೆ.

 

 

Share this post
0Shares

Check Also

ಕೇಜ್ರಿವಾಲ್ ರ ಭೇಟಿಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ನಿರಾಕರಣೆ!

ಸುದ್ದಿವಾಹಿನಿ ಡಾಟ್ ಕಾಂ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾಗಲು ದಿಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್ ರವರು ಅನುಮತಿ …

Leave a Reply

Your email address will not be published.

Blue Waves Media