Home / ಕ್ರೀಡೆ / ನಿನ್ನಂತೆ ನಾನು ಮ್ಯಾಚ್ ಫಿಕ್ಸಿಂಗ್ ಮಾಡಲ್ಲ ಎಂದು ಹಿರಿಯ ಕ್ರಿಕೆಟಿಗನಿಗೆ ಉತ್ತರಿಸಿದ ಅಶ್ವಿನ್

ನಿನ್ನಂತೆ ನಾನು ಮ್ಯಾಚ್ ಫಿಕ್ಸಿಂಗ್ ಮಾಡಲ್ಲ ಎಂದು ಹಿರಿಯ ಕ್ರಿಕೆಟಿಗನಿಗೆ ಉತ್ತರಿಸಿದ ಅಶ್ವಿನ್

ಸುದ್ದಿವಾಹಿನಿ ಡಾಟ್ ಕಾಂ: ಕಾಳೆಯಲು ನೋಡಿದ ಖ್ಯಾತ ಆಟಗಾರನಿಗೆ “ನಿನ್ನಂತೆ ಮ್ಯಾಚ್ ಫಿಕ್ಸಿಂಗ್ ಮಾಡಲ್ಲ” ಎಂದು ಆರ್. ಅಶ್ವಿನ್ ರವರು ಖಾರವಾಗಿ ಉತ್ತರಿಸಿದ್ದಾರೆ.

ಕೆಲವೊಮ್ಮೆ ನಾವುಗಳು ಮಾಡುವ ಹಾಸ್ಯಗಳು ಇತರರ ಮನಸ್ಸನ್ನು ನೋಯಿಸಿ ಸಂಬಂಧಗಳನ್ನೇ ಕಡಿದು ಹಾಕುತ್ತವೆ. ಇನ್ನು ಕೆಲವರು ಹಾಸ್ಯವನ್ನು ಹಾಸ್ಯವಾಗಿ ತೆಗೆದುಕೊಳ್ಳದೆ ವಿಪರೀತವಾಗಿ ವರ್ತಿಸುತ್ತಾರೆ. ಹಾಸ್ಯಗಳು ಹಾಸ್ಯದ ಮಿತಿಯಲ್ಲಿದ್ದರೆ ಆರೋಗ್ಯಯುತವಾಗಿರುತ್ತದೆ ಎಂಬುದಕ್ಕೆ ಈ ಇಬ್ಬರು ಕ್ರಿಕೆಟಿಗರು ಸಾಕ್ಷಿಗಳಾಗಿದ್ದಾರೆ.

Nike ಶೂ ಬಗ್ಗೆ ವಿವರಿಸುತ್ತಾ ಆರ್. ಅಶ್ವಿನ್ ರವರು ಟ್ವೀಟ್ ಮಾಡಿದ್ದರು. “ಮನಮೋಹಕ ಡಿಸೈನ್ ಹೊಂದಿದೆ. ಫೋಮ್ ಟೆಕ್ನಾಲಾಜಿಯಿಂದಾಗಿ ಇದು ಇನ್ನಷ್ಟು ಹಗುರ ಹಾಗೂ ಆರಾಮದಾಯಕವಾಗಿದೆ. ಉತ್ತಮವಾದ ಶೂ ಅನ್ನು ಪಡೆದಿದ್ದೇನೆ ಅನ್ನುವುದರಲ್ಲಿ ಸಂಶಯವಿಲ್ಲ” ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ದ.ಆಫ್ರಿಕಾದ ಮಾಜಿ ಆಟಗಾರ ಹರ್ಶಲ್ ಗಿಬ್ಸ್ ತಮಾಷೆಗಾಗಿ “ಹಾಗಾದರೆ ಇನ್ನು ಸ್ವಲ್ಪ ವೇಗವಾಗಿ ಓಡಬಹುದು” ಎಂದು ಕಾಮೆಂಟ್ ಮಾಡಿದ್ದರು. ಇದನ್ನು ತಮಾಷೆಯಾಗಿ ತೆಗೆದು ಕೊಳ್ಳದ ಅಶ್ವಿನ್ “ಖಂಡಿತವಾಗಿಯೂ ನಿನ್ನಷ್ಟು ವೇಗವಾಗಿ ಅಲ್ಲ. ದುರದೃಷ್ಟವಶಾತ್ ನಾನು ನಿನ್ನಷ್ಟು ಅದೃಷ್ಟವಂತನಲ್ಲ. ಆದರೆ ನಿನ್ನಂತೆ ಸುಲಭವಾಗಿ ಊಟ ಹಾಕುವ ಮ್ಯಾಚ್ ಫಿಕ್ಸಿಂಗ್ ಮಾಡದಂತೆ ಅದ್ಭುತ ನೈತಿಕತೆ ಇದೆ. ” ಎಂದು ಖಾರವಾಗಿ ಉತ್ತರಿಸಿದ್ದಾರೆ.

Share this post
0Shares

Check Also

ಡೆಲ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗಾಂಭೀರ್!

ಸುದ್ದಿವಾಹಿನಿ ಡಾಟ್ ಕಾಂ: ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಎರಡು ಪಂದ್ಯಗಳು ಬಾಕಿ ಇರುವಂತೆಯೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ …

Leave a Reply

Your email address will not be published.

Blue Waves Media