Home / ಕ್ರೀಡೆ / ಪಾಕ್ ತಂಡಕ್ಕೆ ಕನ್ನಡಿಗನ ಮಾರ್ಗದರ್ಶನ ಬೇಕಂತೆ! ರಮೀಝ್ ರಾಜಾ ಬಯಕೆ

ಪಾಕ್ ತಂಡಕ್ಕೆ ಕನ್ನಡಿಗನ ಮಾರ್ಗದರ್ಶನ ಬೇಕಂತೆ! ರಮೀಝ್ ರಾಜಾ ಬಯಕೆ

ಸುದ್ದಿವಾಹಿನಿ ಡಾಟ್ ಕಾಂ: ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕನ್ನಡಿಗ ಕ್ರಿಕೆಟ್ ತಾರೆಯ ಮಾರ್ಗದರ್ಶನ ಬೇಕು ಎಂದು ಪಾಕಿಸ್ತಾನದ ರಾಷ್ಟ್ರೀಯ ತಂಡದ ಮಾಜಿ ನಾಯಕ ರಮೀಝ್ ರಾಜಾ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಮೊನ್ನೆ ನಡೆದ ಪಾಕಿಸ್ತಾನ ಹಾಗೂ ಟೀಂ ಇಂಡಿಯಾ ಅಂಡರ್ 19 ವಿಶ್ವ ಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ತಂಡವು ಪಾಕಿಸ್ತಾನ ತಂಡವನ್ನು 203 ರನ್ ಗಳ ಅಂತರದಲ್ಲಿ ಬಗ್ಗು ಬಡಿದಿತ್ತು. ಈ ಬಗ್ಗೆ ಆಶ್ಚರ್ಯ ವ್ಯಕ್ತ ಪಡಿಸಿದ ಪಾಕಿಸ್ತಾನದ ಮಾಜಿ ನಾಯಕ ರಮೀಝ್ ರಾಜಾ ರವರು, ಇಷ್ಟು ದಯಾನೀಯವಾಗಿ ಪಾಕಿಸ್ತಾನ ತಂಡ ಟೀಂ ಇಂಡಿಯಾ ವಿರುದ್ದ ಸೋತಿರುವುದಕ್ಕೆ ಆಶ್ಚರ್ಯವಾಗುತ್ತಿದೆ. ರಾಹುಲ್ ದ್ರಾವಿಡ್ ರಂತಹಾ ಮಹಾನ್ ಆಟಗಾರ ಟೀಂ ಇಂಡಿಯಾದ ಮಾರ್ಗದರ್ಶಕರಾಗಿರುವುದೇ ದೊಡ್ಡ ಆಸ್ತಿಯಾಗಿದೆ. ರಾಹುಲ್ ದ್ರಾವಿಡ್ ರಂತಹಾ ಮಾರ್ಗದರ್ಶಕರು ಪಾಕ್ ತಂಡಕ್ಕೆ ಬೇಕಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ಟೀಂ ಇಂಡಿಯಾ ಅಂದರ್ 19 ತಂಡವು ಪಾಕ್ ವಿರುದ್ದ ಮೊದಲು ಬ್ಯಾಟ್ ಮಾಡುತ್ತಾ, ಶುಭಂ ಗಿಲ್ ರವರು 93 ಎಸೆತದಲ್ಲಿ ಶತಕ ಬಾರಿಸಿದ ಪರಿಣಾಮವಾಗಿ 272/9 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನದ ಬ್ಯಾಟ್ಸ್ ಮನ್ ಗಳು ಟೀಂ ಇಂಡಿಯಾದ ಬೌಲಿಂಗ್ ಎದುರು ರನ್ ಗಾಗಿ ಪರದಾಡುತ್ತಾ ಬಂದಷ್ಟೇ ವೇಗದಲ್ಲಿ ಪೇವಿಲಿಯನ್ ಸೇರಿದ್ದರು. ಅಂತಿಮವಾಗಿ ಕೇವಲ 69 ರನ್ ಗೆ ಆಲೌಟ್ ಆಗುತ್ತಾ 203 ರನ್ ಗಳ ದಯಾನೀಯ ಸೋಲನ್ನು ಅನುಭವಿಸಿತ್ತು

Share this post
0Shares

Check Also

ಡೆಲ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗಾಂಭೀರ್!

ಸುದ್ದಿವಾಹಿನಿ ಡಾಟ್ ಕಾಂ: ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಎರಡು ಪಂದ್ಯಗಳು ಬಾಕಿ ಇರುವಂತೆಯೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ …

Leave a Reply

Your email address will not be published.

Blue Waves Media