Home / ಸುದ್ದಿಗಳು / ಒಂದು ಟನ್ ಹಳೆಯ ನೋಟುಗಳ ಬೆಲೆ ಎಷ್ಟು ಗೊತ್ತಾ? ಈ ನೋಟನ್ನು RBI ಏನು ಮಾಡುತ್ತದೆ ?

ಒಂದು ಟನ್ ಹಳೆಯ ನೋಟುಗಳ ಬೆಲೆ ಎಷ್ಟು ಗೊತ್ತಾ? ಈ ನೋಟನ್ನು RBI ಏನು ಮಾಡುತ್ತದೆ ?

ಕಳೆದ ವರ್ಷ ಕೇಂದ್ರ ಸರಕಾರವು ಹಳೇಯ 500-1000 ರೂ ಮುಖ ಬೆಲೆಯ ನೋಟುಗಳನ್ನು ನಿಷೇಧ ಮಾಡಿತ್ತು. ಬಚ್ಚಿಅಡಲಾಗಿದೆ ಎಂದು ಹೇಳಲಾಗಿದ್ದ ಹಣದಲ್ಲಿ 90% ನೋಟುಗಳು RBI ಬಳಿ ವಾಪಾಸು ಬಂದಿದೆ. ಆದರೆ ಅಷ್ಟು ದೊಡ್ಡ ಸಂಖ್ಯೆಯಲ್ಲಿರುವ ಆ ನೋಟುಗಳನ್ನು ಏನು ಮಾಡಬೇಕೆಂದು ಚಿಂತೆಯಲ್ಲಿತ್ತು. ಏಕೆಂದರೆ ಈ ನೋಟುಗಳನ್ನು ಸುಟ್ಟು ಹಾಕುವಂತಿಲ್ಲ. ಒಂದು ಬಗೆಯ ವಿಶೇಷ ಕಾಗದದಿಂದ ತಯಾರಿಸಲಾಗಿರುವ ಈ ನೋಟುಗಳನ್ನು ಸುಟ್ಟರೆ, ಅದರ ವಿಷಾನಿಲವು ವಾತವರಣವನ್ನು ವಿಷಯುಕ್ತವಾಗಿಸುತ್ತದೆ

ಇದೇ ಕಾರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್, ಕೇರಳದ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಕಂಪನಿಗೆ ಈ ಎಲ್ಲಾ ಹಳೇಯ ನೋಟುಗಳನ್ನು ರದ್ದಿ ಕಾಗದದ ಬೆಲೆಯಲ್ಲಿ ಮಾರಿದೆ. ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಕಂಪನಿಯು ಈ ಹಳೇಯ 750 ಟನ್ ನೋಟುಗಳನ್ನು 128 ರೂ. ಪ್ರತಿ ಟನ್ ಲೆಕ್ಕದಲ್ಲಿ ಪಡಕೊಂಡಿದೆ. ಇಡಿ ಭಾರತದಲ್ಲಿ ಇಂತಹಾ ಕಾಗದಗಳನ್ನು ರಿಸೈಕಲ್ ಮಾಡುವಂತಹ ತಂತ್ರಜ್ನಾನವನ್ನು ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಕಂಪನಿ ಮಾತ್ರ ಹೊಂದಿದೆ. ಈ ನೋಟುಗಳನ್ನು ರೀಸೈಕಲ್ ಮಾಡಿ ಹಾರ್ಡ್ ಬೋರ್ಡ್, ಪ್ಲೆಕಾರ್ಡ್ ಗಳಾಗಿ ಪರುವರ್ತಿಸಲಿದೆ. ನಂತರ ಇವುಗಳನ್ನು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸುತ್ತದೆ. ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚುನಾವಣಾ ಕಾರ್ಯಗಳಲ್ಲಿ ಇವುಗಳ ಉಪಯೋಗವಾಗಲಿದೆ.

Share this post
0Shares

Check Also

ಕೇಜ್ರಿವಾಲ್ ರ ಭೇಟಿಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ನಿರಾಕರಣೆ!

ಸುದ್ದಿವಾಹಿನಿ ಡಾಟ್ ಕಾಂ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾಗಲು ದಿಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್ ರವರು ಅನುಮತಿ …

Leave a Reply

Your email address will not be published.

Blue Waves Media