Home / ಕ್ರೀಡೆ / ಸರ್ಫರಾಝ್ ಖಾನ್ ನನ್ನು RCB ತಂಡ ಉಳಿಸಿಕೊಳ್ಳಲು Turning Point ಯಾವುದು ಗೊತ್ತಾ?

ಸರ್ಫರಾಝ್ ಖಾನ್ ನನ್ನು RCB ತಂಡ ಉಳಿಸಿಕೊಳ್ಳಲು Turning Point ಯಾವುದು ಗೊತ್ತಾ?

ಸುದ್ದಿವಾಹಿನಿ ಡಾಟ್ ಕಾಂ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ರಿಸ್ ಗೇಲ್, ಚಹಾಲ್, ವಾಟ್ಸನ್, ಕೆ.ಎಲ್ ರಾಹುಲ್ ರಂತಹಾ ತನ್ನ ಘಟಾನುಘಟಿ ಆಟಗಾರ ಆಟಗಾರರನ್ನು ಕೈ ಬಿಟ್ಟು ಕಿರಿಯ ಯುವ ಆಟಗಾರನಾಗಿರುವ ಸರ್ಫರಾಜ್ ಖಾನ್ ನನ್ನು ಉಳಿಸುಕೊಳ್ಳುವಲ್ಲಿ ಮಹತ್ತರ ಪಾತ್ರವಹಿಸಿದ Turning Point ಏನು ಎಂಬುದನ್ನು ಆತನ ತಂದೆ ಹಾಗೂ ಕೋಚ್ ಆಗಿರುವ ನೌಷಾದ್ ಖಾನ್ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಮಾಧ್ಯಮದವರು ಸರ್ಫರಾಝ್ ಖಾನ್ ನ ಕೋಚ್ ಆಗಿರುವ ಸ್ವತಃ ಆತನ ತಂದೆ ನೌಷಾದ್ ಖಾನ್ ರೊಂದಿಗೆ ಕೆಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಕ್ರಿಕೆಟ್ ಜಗತ್ತಿನ ಪ್ರಖ್ಯಾತ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ನಲ್ಲಿ ಸಮಯ ಕಳೆಯುವುದರಿಂದ ಆತನ ಕ್ರಿಕೆಟ್ ಜೀವನಕ್ಕೆ ಬಹಳ ಉಪಕಾರಿಯಾಗಲಿದೆ. ಕಳೆದ ಆರು ತಿಂಗಳಿಂದ ಮೊಣಕಾಲು ನೋವಿನಿಂದಾಗಿ ಕ್ರಿಕೆಟ್ ನಿಂದ ದೂರವಾಗಿದ್ದಾಗಲೂ ಕೂಡಾ ಆರ್ಸಿಬಿ ತಂಡದ ವ್ಯವಸ್ತಾಪಕ ಅವಿನಾಶ್ ವೈದ್ಯರವರು ಸತತ ಆತನ ಸಂಪರ್ಕದಲ್ಲಿದ್ದು, ಆತನ ಆತ್ಮವಿಶ್ವಾಸವನ್ನು ಹೆಚ್ಚಿಸಿಸುತ್ತಿದ್ದರು. ನನ್ನ ಮಗನ ಆಟದ ಮೇಲೆ ವಿಶ್ವಾಸವಿಟ್ಟಿರುವುದಕ್ಕೆ ಆಭಾರಿಯಾಗಿದ್ದೇನೆ ಎಂದರು. ಸ್ವತಃ ಮುಂಬೈ ನಿವಾಸಿಯಾಗಿರುವ ಸರ್ಫರಾಝ್ ದೇಶೀಯ ಆಟಗಳಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿರುವ ಬಗ್ಗೆ ಕೇಳಲಾದಾಗ, ಇದೊಂದು ಬಹಳ ಭಾವುಕತೆಯ ವಿಷಯ. ಹಾಗಾಗಿ ಸಧ್ಯ ಈ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ. ಎಲ್ಲಿಗೂ ಹೋದರೂ ಕೂಡಾ ಬೆಳಕನ್ನು ಹರಿಸುವನು. ದೀಪಕ್ಕೆ ತನ್ನದೆ ಆದ ಯಾವುದೆ ನಿರ್ಧಿಷ್ಟ ಸ್ಥಳವಿಲ್ಲ. ಕೇವಲ ಬೆಳಕು ನೀಡುವುದೇ ಅದರ ಕೆಲಸವಾಗಿದೆ. ಅದನ್ನು ಮಂದಿರದಲ್ಲಿಡಿ ಅಥವಾ ಮಸೀದಿಯಲ್ಲಿಡಿ. ಅದು ಬೆಳಕು ನೀಡುತ್ತಾ ಇರುತ್ತದೆ ಎಂದರು.

ಸರ್ಫರಾಝ್ ಖಾನ್ ನನ್ನು ಆರ್ಸಿಬಿ ತಂಡ ಉಳಿಸಿಕೊಳ್ಳಲು ಟರ್ನಿಂಗ್ ಪಾಯಿಂಟ್ ಏನು?
ನೌಷಾದ್ ಖಾನ್ “ನನ್ನ ಪ್ರಕಾರ, ರಾಹುಲ್ ದ್ರಾವಿಡ್ ರವರ ಆ ಒಂದು ಫೋನ್ ಕಾಲ್ ಟರ್ನಿಂಗ್ ಪಾಯಿಂಟ್ ಆಗಿದೆ”. ಪ್ರಸಕ್ತ ನಡೆಯುತ್ತಿರುವ Under-19 ತಂಡದ ವಿರುದ್ಧ ಅಭ್ಯಾಸ ಪಂದ್ಯವಾಡಲು ಕಳೆದ ಸಲದ Under-19 ತಂಡದ ಆಟಗಾರರನ್ನು ಮೈದಾನಕ್ಕಿಳಿಸಲು ಬಯಸಿದ್ದರು. ತಮ್ಮ ಹಿಂದಿನ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಅವರ ವಿರುದ್ಧ ಆಡಿ ಅಭ್ಯಾಸ ಮಾಡಲು ಅವರು ಬಯಸಿದ್ದರು. ರಾಹುಲ್ ದ್ರಾವಿಡ್ ರವರ ಆ ಒಂದು ಫೋನ್ ಕಾಲ್ ಟರ್ನಿಂಗ್ ಪಾಯಿಂಟ್ ಆಗಿದೆ ಅದರಲ್ಲಿ ನನ್ನ ಮಗನಿಗೆ ಕರೆ ಮಾಡಿ ಆಡಲು ಹೇಳಿದ್ದರು. NCA (National Cricket Academy) ಕರೆ ನೀಡಿ ಆಡಿದ್ದ ಅಭ್ಯಾಸ ಪಂದ್ಯದಲ್ಲಿ ನನ್ನ ಮಗ ಕ್ರಮವಾಗಿ 132 ಮತ್ತು 70 ಬಾರಿಸಿದ್ದ.

ನಿಮ್ಮ ಮಕ್ಕಳಿಗೆ ತಂದೆ ಹಾಗೂ ಕೋಚ್ ಎಂಬ ಎರಡು ಮಹತ್ತರ ಕರ್ತವ್ಯಗಳನ್ನು ಒಟ್ಟಿಗೆ ನಿಭಾಯಿಸುವುದು ಕಷ್ಟವಲ್ಲವೆ?
ನೌಷಾದ್ ಖಾನ್: ಇದೊಂದು ಕಾಕತಾಳೀಯವಾಗಿದೆ. ತಂದೆಯ ಪ್ರೀತಿಗಿಂತ ಕೋಚ್ ನ ಗದರಿಕೆಗಳೇ ಹೆಚ್ಚಾಗಿದೆ. ಇದೆಲ್ಲವೂ ಅವರ ಉತ್ತಮ ಭವಿಷ್ಯಕ್ಕಾಗಿ. ಅತೀ ಸುಂದರ ವಧು ಹಾಗೂ ವರದಕ್ಷಿಣೆ ಎರಡೂ ಬೇಕು ಎಂದರೆ ಹೇಗೆ? ಎಂದು ಅವರು ಕೇಳುತ್ತಾರೆ.

Share this post
0Shares

Check Also

ಡೆಲ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗಾಂಭೀರ್!

ಸುದ್ದಿವಾಹಿನಿ ಡಾಟ್ ಕಾಂ: ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಎರಡು ಪಂದ್ಯಗಳು ಬಾಕಿ ಇರುವಂತೆಯೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ …

Leave a Reply

Your email address will not be published.

Blue Waves Media