Home / ಕ್ರೀಡೆ / ಮುಗ್ಢ ಕಂದಮ್ಮಗಳ ಪಾಲಿನ ಆಶಾ ಕಿರಣವಾದ SPL ; ಚಾಂಪಿಯನ್ ಆದ ಅಲ್ ಸಫಾ ತಂಡ

ಮುಗ್ಢ ಕಂದಮ್ಮಗಳ ಪಾಲಿನ ಆಶಾ ಕಿರಣವಾದ SPL ; ಚಾಂಪಿಯನ್ ಆದ ಅಲ್ ಸಫಾ ತಂಡ

ಸುದ್ದಿವಾಹಿನಿ ಡಾಟ್ ಕಾಂ- ಸೌದಿ ಅರೇಬಿಯಾ:  ಮುಗ್ಧ ಕಂದಮ್ಮಗಳ ಪಾಲಿಗೆ ಆಶಾ ಕಿರಣವಾದ ಸೌದಿ ಪ್ರೀಮಿಯರ್ ಲೀಗ್

ಮನೋರಂಜನೆಗಾಗಿ ನಡೆಯುವ ಹಲವಾರು ಪಂದ್ಯಾ ಕೂಟಗಳನ್ನು ನಾವು ಕಾಣುತ್ತಿರುತ್ತೇವೆ. ಹಲವು ಕ್ರೀಡಾ ಕೂಟದಲ್ಲಿ ಉಳಿತಾಯವಾಗುವ ಹಣವನ್ನು ಮೋಜು ಮಸ್ತಿಗಾಗಿ ವ್ಯಯಿಸಿ ದುಂದು ವೆಚ್ಚ ಮಾಡುವ ಕ್ರೀಡಾ ಕೂಟದ ಆಯೋಜಕರೂ ಕೂಡಾ ನಮ್ಮ ಸಮಾಜದಲ್ಲಿದ್ದಾರೆ. ಆದರೆ ತಮ್ಮದಲ್ಲದ ತಪ್ಪಿಗಾಗಿ ಪರಿತಪಿಸುತ್ತಿರುವ ಕಂದಮ್ಮಗಳ ಬಾಳಿಗೆ ಆಸರೆಯಾಗಬೇಕೆಂದು ಬಯಸಿ ನಡೆಸಿದ ಕ್ರಿಕೆಟ್ ಪ್ರೀಮಿಯರ್ ಲೀಗ್ ಮೂಲಕ ಸಂಗ್ರಹವಾದ ಹಣವನ್ನು ಏಡ್ಸ್ ಪೀಡಿತ ಮಕ್ಕಳಿಗೆ ದಾನ ಮಾಡಿ ಮಾನವೀಯತೆ ಸಂದೇಶ ಸಾರಿದ ಕರಾವಳಿ ಮೂಲದ ಸೌದಿ ಪ್ರೀಮಿಯರ್ ಲೀಗ್ ಆಯೋಜಕರಿಗೊಂದು ಮನದಾಳದ ಸಲ್ಯೂಟ್.

ಸೇವಾ ಕಾರ್ಯಕ್ರಮಕ್ಕೆ ಸಹಾಯಹಸ್ತ ನೀಡುವ ಉದ್ದೇಶದೊಂದಿಗೆ ಸುಮಾರು ನೂರಕ್ಕೂ ಮಿಕ್ಕಿದ ಆಟಗಾರರು ಭಾಗವಹಿಸಿದ್ದ ಆರು ತಂಡಗಳ ಸ್ಪಾರ್ಕ್ ಅರೇಬಿಯಾದ ಪ್ರಾಯೋಜಕತ್ವದಲ್ಲಿ ಐಪಿಎಲ್ ಮಾದರಿಯ ಸೌದಿ ಪ್ರೀಮಿಯ ಲೀಗ್ ಎಂಬ ಕ್ರಿಕೆಟ್ ಕೂಟವನ್ನು ಕರಾವಳಿ ಮೂಲದ ಇಬ್ರಾಹಿಂ (ಇಬ್ಬ ಬಜ್ಪೆ) ನೇತೃತ್ವದ ಯುವಕರ ತಂಡವು ಸೌದಿ ಅರೇಬಿಯಾದಲ್ಲಿ 2017 ರ ಅಕ್ಟೋಬರ್ ನಲ್ಲಿ ಆಯೋಜಿಸಿತ್ತು. ದಾನಿಗಳಿಂದ ಸುಮಾರು ಎರಡೂವರೆ ಲಕ್ಷ ರೂ. ಗಳನ್ನು ಮಂಗಳೂರಿನ ತಬಸ್ಸುಮ್ ರವರು ನಡೆಸುತ್ತಿರುವ ಸ್ನೇಹ ದೀಪ್ ಎಂಬ ಏಡ್ಸ್ ಪೀಡಿತ ಪುಟ್ಟ ಮಕ್ಕಳ ಆರೈಕೆ ಕೇಂದ್ರಕ್ಕೆ ದಾನವಾಗಿ ಹಸ್ತಾಂತರಿಸಿದರು.

ಅಕ್ಟೋಬರ್ 12 ರಂದು ಜುಬೈಲ್ ನ ಅಲ್ ಫಲಾಹ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯಾಟ ಆರಂಭಗೊಂಡಿತ್ತು. ಈ ಪಂದ್ಯಾಕೂಟದ ಚಾಂಪಿಯನ್ ಆಗಿ Al Hassaದ Al Safa ತಂಡವು ಚಾಂಪಿಯನ್ ಆಗಿದ್ದರೆ, Royal Chalengers Mangalore ತಂಡವು ರನ್ನರ್ಸ್ ಅಪ್ ಪ್ರಶಸ್ತಿ ಪಡೆದು ಕೊಂಡಿತ್ತು. ರಿಯಾಝ್ ಉಳ್ಳಾಲ್ ರವರು ಸರಣಿ ಶ್ರೇಷ್ಠರಾಗಿದ್ದಲ್ಲದೆ, ಲೀಗ್ ಹಂತದ ಪಂದ್ಯಗಳಲ್ಲಿ 5 ಹಾಗೂ ಫೈನಲ್ ಪಂದ್ಯದಲ್ಲೂ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಪಡೆದಿದ್ದರು. ಬೆಸ್ಟ್ ಬೌಲರ್- ಸಮೀರ್ ಕಾರ್ನಾಡ್, ಬೆಸ್ಟ್ ಆಲ್ ರೌಂಡರ್- ಆದಿಲ್ ಭಟ್, ಬೆಸ್ಟ್ ಬ್ಯಾಟ್ಸ್ ಮನ್- ರಿಯಾಝ್ ಉಳ್ಳಾಲ್ ಮತ್ತು ಬೆಸ್ಟ್ ವಿಕೆಟ್ ಕೀಪರ್- ಫವಾಝ್ ಉಳ್ಳಾಲ್ ಆಯ್ಕೆಯಾಗಿದ್ದರು.

ಎಸ್.ಪಿ.ಎಲ್ ನ ಪ್ರಾಯೋಜಕರುಗಳಾದ ಸ್ಪಾರ್ಕ್ ಅರೇಬಿಯಾದ ಹಬೀಬ್, ಸಾಬ್ ಅಲ್ ಖೊಬಾರ್ ನ ಕಾರ್ಯನಿರ್ವಾಹಕಾಧಿಕಾರಿ ಸಲಾಹುದ್ದೀನ್ ಸಲ್ಮಾನ್,ಸಾಬ್ ನ ಮಝ್ಹರ್,ಐ.ಎಫ್.ಎಫ್ ನ ಇರ್ಷಾದ್, ಸ್ಪಾರ್ಕ್ ಅರೇಬಿಯಾದ ಫಾಝಿಕ್, ಎಸ್.ಪಿ.ಎಲ್ ನ ಚೇರ್ಮಾನ್ ನೌಷಾದ್, ಸ್ಪೆಕ್ಟ್ರಂ ಗ್ರೂಪ್ ನ ಸಲೀಂ ಉಡುಪಿ, ಸ್ಪಾರ್ಕ್ ಅರೇಬಿಯಾದ ಹಬೀಬ್ ಹಾಗೂ ಫಾಝಿಕ್, ಡೀಲ್ಸ್ ಅರೇಬಿಯಾದ ಆಸೀಫ್, ಅಲ್ ಫಲಾ ನಝೀರ್, ಪ್ಲಾಂಟ್ ಸೊಲ್ಯೂಶನ್ ನ ಅಶ್ಕಾಫ್, Hertz ಇಮ್ರಾನ್, ಟೇಬಲ್ ನ ಮುಬೀನ್, ಎಸ್.ಪಿ.ಎಲ್ ನ ಚೇರ್ಮಾನ್ ನೌಷಾದ್ ಮುಂತಾದ ಅತಿಥಿಗಳು ಉಪಸ್ಥಿತರಿದ್ದರು.

ಪಂದ್ಯಾಕೂಟದ ಮುಖ್ಯ ಪ್ರಾಯೋಜಕರಾದ ಹಬೀಬ್ ರವರನ್ನು ಸೈಫುಲ್ಲಾರವರು ಅಯೋಜಕರ ಪರವಾಗಿ ಸನ್ಮಾನಿಸಿದರು.

Share this post
0Shares

Check Also

ಡೆಲ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗಾಂಭೀರ್!

ಸುದ್ದಿವಾಹಿನಿ ಡಾಟ್ ಕಾಂ: ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಎರಡು ಪಂದ್ಯಗಳು ಬಾಕಿ ಇರುವಂತೆಯೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ …

Leave a Reply

Your email address will not be published.

Blue Waves Media