Home / ಸುದ್ದಿಗಳು / ಪಬ್ ದಾಳಿ ಪ್ರಕರಣ: ಪ್ರಮೋದ್ ಮುತಾಲಿಕ್ ಹಾಗೂ ಸಹಚರರು ಖುಲಾಸೆ

ಪಬ್ ದಾಳಿ ಪ್ರಕರಣ: ಪ್ರಮೋದ್ ಮುತಾಲಿಕ್ ಹಾಗೂ ಸಹಚರರು ಖುಲಾಸೆ

ಸುದ್ದಿವಾಹಿನಿ ಡಾಟ್ ಕಾಂ: ಮಂಗಳೂರು ಪಬ್ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದರೆಂದು ಆರೋಪಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಂದು ನ್ಯಾಯಾಲಯವು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಇತರರನ್ನು ಖುಲಾಸೆಗೊಳಿಸಿದೆ.

2009 ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಪಬ್ ದಾಳಿಯಲ್ಲಿ ಶ್ರೀ ರಾಮ ಸೇನೆ ಹಾಗೂ ಅದರ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು “ಸಾಕ್ಷ್ಯಾಧಾರದ ಕೊರತೆ”ಯ ಕಾರಣಕ್ಕಾಗಿ ಪ್ರಮೋದ್ ಮುತಾಲಿಕ್ ಹಾಗೂ ಬಾಗಿಯಾಗಿದ್ದ ಇತರ ಎಲ್ಲಾ ಕಾರ್ಯಕರ್ತರನ್ನು ಖುಲಾಸೆಗೊಳಿಸಿದೆ.

ಪಬ್ ದಾಳಿ ಸಂದರ್ಭದಲ್ಲಿ ಮಹಿಳೆಯರಿಗೆ, ಯುವತಿಯರಿಗೆ ಥಳಿಸುತ್ತಿರುವುದು, ಕೂದಲು ಹಿಡಿದು ಎಳೆದಾಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು. ಅಲ್ಲದೆ 2010 ರಲ್ಲಿ ಈ ಪಬ್ ದಾಳಿಯನ್ನು ಸ್ವತಃ ಪ್ರಮೋದ್ ಮುತಾಲಿಕ್ ಮಾಧ್ಯಮಗಳ ಮುಂದೆ “ಇದೊಂದು ದೊಡ್ಡ ತಪ್ಪಾಗಿದೆ. ಪಬ್ ದಾಳಿಯಲ್ಲಿ ಮಹಿಳೆಯರ ಮೇಲೆ ಕೈ ಮಾಡಿರುವುದು ತಪ್ಪು. ಇದು ನಡೆಯಬಾರದಿತ್ತು” ಎಂದು ಹೇಳಿದ್ದರು.

Share this post
0Shares

Check Also

ಅತ್ಯಾಚಾರ ಮಾಡಿದ ವಿಡಿಯೋ ವೈರಲ್ ಮಾಡುವೆ ಎಂದ ಸೈನಿಕ; ಮಹಿಳೆ ಆತ್ಮಹತ್ಯೆ!

ಸುದ್ದಿವಾಹಿನಿ ಡಾಟ್ ಕಾಂ: ಸೈನಿಕನಿಂದ ಆತ್ಯಾಚಾರಕ್ಕೆ ಒಳಗಾಗಿದ ಮಹಿಳೆಯು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಮುಝಫ್ಫರ್ …

Leave a Reply

Your email address will not be published.

HOME
Blue Waves Media