Home / ಅಟೋ / ಬೈಕ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರಸ್ತೆಗಿಳಿಯಿತು Suzuki Intruder 150

ಬೈಕ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರಸ್ತೆಗಿಳಿಯಿತು Suzuki Intruder 150

ಬೈಕ್ ಮಾರುಕಟ್ಟೆ ಹಾಗೂ ಬೈಕ್ ಪ್ರೀಯರ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಕುತೂಹಲ ಮೂಡಿಸಿದ್ದ Suzuki Intruder 150 ಬೈಕ್ ಕೊನೆಗೂ ಬಿಡುಗಡೆಯಾಗಿದೆ. ಜಿಕ್ಸರ್ ನಂತರ ಭಾರತೀಯ ರಸ್ತೆ ಹಾಗೂ ಮಾರುಕಟ್ಟೆ ಮತ್ತು ಭಾರತೀಯ ಯುವಕರ ಬೈಕ್ ಮೋಹಕ್ಕೆ ಅನುಗುಣವಾಗಿ Suzuki Intruder 150 ರಸ್ತೆಗಿಳಿಸಲಾಗಿದೆ ಎಂದು ಸುಜುಕಿ ಕಂಪನಿಯು ಹೇಳಿದೆ.

ಪ್ರಥಮ ನೋಟಕ್ಕೆ ಹಾರ್ಡ್ಲಿ ಡೇವಿಡ್ಸನ್ ತರ ಕಾಣುವ ಈ ಬೈಕ್ ಬೆಲೆಯೂ ಕೂಡಾ ೪-೫ ಲಕ್ಷ ಇರಬಹುದು ಎಂದು ತಾವು ಭಾವಿಸಿದ್ದರೆ, ನಿಮಗೆ ಆಶ್ಚರ್ಯ ಕಾದಿದೆ. ಈ ಬೈಕ್ ನ ಆರಂಭಿಕ ಬೆಲೆಯು (ex-showroom) ದಿಲ್ಲಿಯಲ್ಲಿ ಕೇವಲ 98,340 ರೂ. ಗಳಾಗಿವೆ. ಸಿಂಗಲ್ ಸಿಲಿಂಡರ್ ಬೈಕಾಗಿದ್ದು. 11 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಇದೆ. ಸಾಮಾನ್ಯವಾಗಿ ಇತರ ಬೈಕ್ ಗಳಲ್ಲಿ ಮೀಟರ್ ಬಾಕ್ಸ್ ನ ಮೊದಲು ಒಂಜಿನ್ ಸ್ಟಾರ್ಟ್ ಕೀ ಆಪ್ಷನ್ ಇರುತ್ತದೆ. ಆದರೆ ಇದರಲ್ಲಿ ಮೀಟರ್ ಬಾಕ್ಸ್ ನ ನಂತರ ಕೀ ಆಪ್ಷನ್ ಕೊಡಲಾಗಿದೆ. ಬೃಹದಾಕಾರದ ಉದ್ದನೆಯ ಹೇಡ್ ಲೈಟ್ ಡೂಪ್ ಹಾಗೂ ಅಲೋಯಿ ವ್ಹೀಲ್ ಈ ಬೈಕ್ ನ ವಿನ್ಯಾಸಕ್ಕೆ ಇನ್ನಷ್ಟು ಮೆರುಗು ನೀಡಿದೆ.

Share this post
0Shares

Check Also

ಹೊಸ ದಾಖಲೆ ಬರೆದ ಬುಲ್ಲೆಟ್ ಬೈಕ್

ಸುದ್ದಿವಾಹಿನಿ ಡಾಟ್ ಕಾಂ:  ಹೊಸದಾಗಿ ಬಿಡುಗಡೆ ಮಾಡಿದ ಎಲ್ಲಾ ಬೈಕ್ ಗಳು ಕೇವಲ 15 ಸೆಕೆಂಡುಗಳಲ್ಲಿ ಮಾರಾಟವಾಗಿ ಬುಲ್ಲೆಟ್ ಕಂಪನಿಯು …

Leave a Reply

Your email address will not be published.

Blue Waves Media