Home / ಅಟೋ / ಸುಝುಕಿ ರಸ್ತೆಗಿಳಿಸಿತು ಮತ್ತೊಂದು 4X4 ಕಾರು!

ಸುಝುಕಿ ರಸ್ತೆಗಿಳಿಸಿತು ಮತ್ತೊಂದು 4X4 ಕಾರು!

ಸುದ್ದಿವಾಹಿನಿ ಡಾಟ್ ಕಾಂ: ಕಾರು ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳಲ್ಲಿ ಭಾರತೀಯ ರಸ್ತೆಯ ಅನಭಿಶಿಕ್ತ ದೊರೆ ಎಂದೇ ಪ್ರಸಿದ್ಧವಾಗಿರುವ ಸುಝುಕಿ ಸಂಸ್ಥೆಯು ತನ್ನ  4X4 ಕಾರನ್ನು ಜಪಾನ್ ನಲ್ಲಿ ಬಿಡುಗಡೆ ಮಾಡಿದೆ.

ಸುಝುಕಿ ಕಾರು ಉತ್ಪಾದನಾ ಸಂಸ್ಥೆಯ ಭಾರತೀಯ ಪಾಲುದಾರರಾಗಿರುವ ಮಾರುತಿ ಸಂಸ್ಥೆಯ ಸಹಬಾಗಿತ್ವದಲ್ಲಿ ಶೀಘ್ರದಲ್ಲಿ ಭಾರತೀಯ ರಸ್ತೆಯಲ್ಲೂ ಓಡಾಡಲಿದೆ ಎಂದು ಹೇಳಿದೆ. ಸುಝುಕಿ ಸಂಸ್ಥೆಯು ಸಣ್ಣ ಕಾರುಗಳಲ್ಲಿ ಮತ್ತೊಮ್ಮೆ ತನ್ನ 4X4 ಕಾರನ್ನು ಬಿಡುಗಡೆ ಮಾಡಿದೆ. ಬೆಟ್ಟಗುಡ್ಡಗಳ ಕಡಿದಾದ ರಸ್ತೆಗಳಲ್ಲಿ ಸುಲಲಿತವಾಗಿ ಸಂಚರಿಸಲು ಸಹಕಾರಿಯಾಗಲು ಈ ಕಾರನ್ನು ಬಿಡುಗಡೆ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ 4WD ಹಾಗೂ 2WD ಕಾರನ್ನು ಬುಕ್ ಮಾಡಿಕೊಳ್ಳ ಬಹುದಾಗಿದೆ. hybrid powertrain ಹೊಂದಿರುವ ಈ ಕಾರು 1.0-litre turbocharged ಇಂಜಿನ್ ಹೊಂದಿದೆ.

ಎಮರ್ಜೆನ್ಸಿ ಪರಿಸ್ಥಿತಿಯಲ್ಲಿ ಕಂಟ್ರೋಲ್ ಮಾಡಿಕೊಳ್ಳಲು ಡುವಲ್ ಸೆನ್ಸಾರ್ ಬ್ರೇಕ್ ಸಪೋರ್ಟ್, ಬ್ಯಾಕಪ್ ಬ್ರೇಕ್ ಸಪೋರ್ಟ್ ಹಾಗೂ ಇಕ್ಕಟ್ಟಾದ ಜಾಗದಲ್ಲೂ ಸುಲಭವಾಗಿ ಪಾರ್ಕ್ ಮಾಡಲು 360 ಡಿಗ್ರಿಯ ಕ್ಯಾಮೆರಾ ಹೊಂದಿದೆ. ಸಣ್ಣ ಕಾರುಗಳಲ್ಲಿ ಇಂತಹಾ ಸೌಲಭ್ಯಗಳು ಸಾಮಾನ್ಯವಾಗಿ ಲಭ್ಯವಿರದ, ಬೆಟ್ಟ ಪ್ರದೇಶದಲ್ಲಿ ಹಿಡಿತ ಸಾಧಿಸಲು hill descent control, traction control, sport mode, ಹಾಗೂ ಮಂಜು ಆವರಿತ ರಸ್ತೆಗಳ ಮೇಲೆ ಹಿಡಿತ ಸಾಧಿಸಲು snow mode ಸೌಲಭ್ಯವು 4×4 ಮಾದರಿಯ ಈ ಕಾರಿನಲ್ಲಿದೆ. ಈ ಸೌಲಭ್ಯದಿಂದಾಗಿ ಧೂಳು ಮಣ್ಣಿನ ಇಕ್ಕಟ್ಟಾದ ರಸ್ತೆಯಲ್ಲೂ ಅನಾಯಾಸವಾಗಿ ಪ್ರಯಾಣಿಸಬಹುದಾಗಿದೆ ಎಂದು ಸಂಸ್ಥೆಯು ಹೇಳಿದೆ. ಇಷ್ಟೆಲ್ಲಾ ಸೌಲಭ್ಯವಿರುವ ಈ ಕಾರಿನ ಬೆಲೆ ಸುಮಾರು 10 ಲಕ್ಷ ರೂಪಾಯಿಗಳ ಒಳಗೆ ಇರಲಿದೆ ಎಂದು ಹೇಳಲಾಗಿದೆ.

Share this post
0Shares

Check Also

ಹೊಸ ದಾಖಲೆ: ಕೇವಲ 18 ಸೆಕೆಂಡುಗಳಲ್ಲಿ ಮಾರಾಟವಾಯಿತು ವಿಶೇಷವಾಗಿ ತಯಾರಿಸಿದ್ದ ಎಲ್ಲಾ ಬೈಕ್ ಗಳು

ಸುದ್ದಿವಾಹಿನಿ ಡಾಟ್ ಕಾಂ:  ಹೊಸದಾಗಿ ಬಿಡುಗಡೆ ಮಾಡಿದ ಎಲ್ಲಾ ಬೈಕ್ ಗಳು ಕೇವಲ 15 ಸೆಕೆಂಡುಗಳಲ್ಲಿ ಮಾರಾಟವಾಗಿ ಬುಲ್ಲೆಟ್ ಕಂಪನಿಯು …

Leave a Reply

Your email address will not be published.

Blue Waves Media