Home / ಸುದ್ದಿಗಳು / ಸಂಘದ ಶಾಖೆಯಲ್ಲಿ ಸಾವರ್ಕರ್ ಹುಟ್ಟುತಾನೆ ವಿನಃ ಭಗತ್ ಸಿಂಗ್ ಅಲ್ಲ; ವೈರಲ್ ಆಡಿಯೋ

ಸಂಘದ ಶಾಖೆಯಲ್ಲಿ ಸಾವರ್ಕರ್ ಹುಟ್ಟುತಾನೆ ವಿನಃ ಭಗತ್ ಸಿಂಗ್ ಅಲ್ಲ; ವೈರಲ್ ಆಡಿಯೋ

ಸುದ್ದಿವಾಹಿನಿ ಡಾಟ್ ಕಾಂ: ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷ ಪ್ರವೀಣ್ ತೊಗಾಡಿಯಾರವರ ಸುತ್ತ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ವ್ಯಾಖ್ಯಾನಿಸುತ್ತಾ, ಅವರಿಗೆ ಸಲಹೆ ನೀಡುತ್ತಾ ಕನ್ನಡಿ ತೋರಿಸಲು ಪ್ರಯತ್ನಿಸಿರುವ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಹಿಂದಿ ಭಾಷೆಯಲ್ಲಿರುವ ಈ ಆಡಿಯೋದ ಯಥಾ ರೂಪವನ್ನು ಕನ್ನಡ ಭಾಷೆಗೆ ಭಾಷಾಂತರಿಸಲಾಗಿದೆ.

ಪ್ರವೀಣ್ ತೊಗಾಡಿಯಾಜೀ…

ತಮ್ಮದೇ ನಗರವಾದ ಅಹ್ಮದಾಬಾದ್ ನಿಂದ ರಾಜೇಶ್ ಠಾಖರ್ ಆಗಿರುವ ನಾನು ನಿಮಗೆ ಅರ್ಪಿಸುವ ಜೈ ಶ್ರೀರಾಂ.

ಕಳೆದೆರಡು ದಿನಗಳಲ್ಲಿ ತಮ್ಮ ಮೇಲೆ ಏನೆಲ್ಲಾ ಆಯಿತೋ, ಆ ಬಗ್ಗೆ ಓರ್ವ ಹಿಂದುವಾಗಿ ನಾನು ಚಿಂತಿತನಾಗಿರುವುದಕ್ಕಿಂತ ಹೆಚ್ಚು ವ್ಯಾಕುಲನಾಗಿದ್ದೇನೆ. ಚಿಂತಿತನಾಗಿಲ್ಲದಿರುವ ಕಾರಣ, ತಾವು ಹೇಗಾದರೂ ಮಾಡಿ ತಪ್ಪಿಸಿಕೊಂಡು ತಮ್ಮ ಜೀವವನ್ನು ರಕ್ಷಿಸಿಕೊಂಡಿದ್ದೀರಿ ಮತ್ತು ಸಂಘರ್ಷದ ಸಾಹಸವನ್ನು ತಮ್ಮಿಂದ ತೋರಿಸಲು ಸಾಧ್ಯವಾಗದ್ದಕ್ಕಾಗಿ ವ್ಯಾಕುಲನಾಗಿದ್ದೇನೆ. ಕೇವಲ ಒಂದು ಬಂಧನಕ್ಕೆ ಹೆದರಿ ಬೆನ್ನು ತೋರಿಸಿ ಓಡುವ ವ್ಯಕ್ತಿಯೊಬ್ಬನನ್ನು ನಾವು ನಮ್ಮ ಧರ್ಮದ ಹೃದಯ ಸಾಮ್ರಾಟನನ್ನಾಗಿ ಮಾಡಿಕೊಂಡಿದ್ದಕ್ಕೆ ನನ್ನಂತಹ ಕೋಟ್ಯಾಂತರ ಹಿಂದೂಗಳು ಇಂದು ದಿಗ್ಭ್ರಮೆಗೊಂಡಿದ್ದಾರೆ. ಓರ್ವ ಹಿಂದೂ ನಾಯಕನ ಬೆಂಕಿ ಉಗುಳುವ ಮಾತುಗಳಿಂದ ಪ್ರಭಾವಿತರಾಗಿ ಜೀವ ಕೊಡಲೂ, ಜೀವ ಪಡೆಯಲೂ ಸಿದ್ದರಾಗಿದ್ದೆವು. ಆದರೆ ಆತ ಸಾವಿನ ಭಯ ಕಾಡಿದಾಗ ಸ್ವತಃ ಬಿಕ್ಕಿ ಬಿಕ್ಕಿ ಅಳುವಂತಂಹಾ ನಾಯಕನಾದನು ಎಂಬುದು ಅರಗಿಸಿಕೊಳ್ಳಲಾಗುತ್ತಿಲ್ಲ. ತೊಗಾಡಿಯಾಜಿ… ಯಾವ ಹಿಂದೂಗಳ ರಕ್ತ ಕುದಿಯುವುದಿಲ್ಲವೂ, ಅದು ರಕ್ತವಲ್ಲ ಬದಲಾಗಿ ನೀರಾಗಿದೆ ಎಂದು ತಾವೇ ಹೇಳುತ್ತಿದ್ದೀರಿ. ಆದರೆ ವೀರತ್ವ ತೋರಿಸುವ ಸಮಯ ಬಂದಾಗ ತಮ್ಮ ರಕ್ತವೇಕೆ ತಣ್ಣಗಾಯಿತು ಎಂದು ನಿಮ್ಮಲ್ಲಿ ಕೇಳಬಯಸುತ್ತೇನೆ.

ತೊಗಾಡಿಯಾಜೀ…. ತಪ್ಪು ನಿಮ್ಮದಲ್ಲ ಎಂದು ನನಗನಿಸುತ್ತಿದೆ. ಸಂಘದ ಶಾಖೆಗಳಲ್ಲಿ ಆದ ರಾಜಕೀಯಾ ಹಾಗೂ ಸಾಮಾಜಿಕ ಆರೈಕೆಯದ್ದಾಗಿದೆ. ಇದಲ್ಲದಿದ್ದರೆ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೆವಾನಿ ಹಾಗೂ ಅಲ್ಪೇಶ್ ಠಾಕೂರ್ ರಂತವರ ರೀತಿಯಲ್ಲಿ, ಭಯಪಡದೆ, ಹಿಂದೆ ಸರಿಯದೆ, ದಣಿಯದೆ ಈ ಪ್ರಜಾಪ್ರಭುತ್ವದ ಕೊಲೆಗಾರರ ವಿರುದ್ಧ ಹೋರಾಡುತ್ತಿದ್ದೀರಿ. ಆದರೆ ಭಯಭೀತರಾಗಿ ಓಡಿ ಸಂಘದ ಶಾಖೆಗಳಲ್ಲಿ ಬ್ರಿಟೀಷರೊಂದಿಗೆ ನೂರಾರು ಬಾರಿ ಕ್ಷಮೆಯಾಚಿಸಿ ಜೈಲಿನಿಂದ ಬಿಡುಗಡೆಯಾದ ಸಾವರ್ಕರ್ ರಂತವರೇ ಹುಟ್ಟ ಬಹುದೇ ವಿನಃ ಈ ದೇಶಕ್ಕಾಗಿ ಹುತಾತ್ಮನಾಗಿರುವ ಭಗತ್ ಸಿಂಗ್ ಅಲ್ಲ ಎಂದು ಸಾಬೀತು ಪಡಿಸಿದಿರಿ. ಸಾಹೇಬರೇ… ತಾವು ಸಂಘಿಗಳು ತ್ರಿವರ್ಣ ಧ್ವಜವನ್ನು ಗೌರವಿಸಲು 50 ವರ್ಷ ತಗೊಂಡ್ರಿ, ಆದರೆ ಇವತ್ತು ಭಗವಾ ಧ್ವಜದ ಮಾನವನ್ನೂ ಹರಾಜು ಹಾಕಿದಿರಿ. ಪ್ರವೀಣ್ ಭಾಯಿ ಇದನ್ನೊಮ್ಮೆ ನೆನಪಿಸಿಕೊಳ್ಳಿ, ನಿಮ್ಮ ಸಾಂಪ್ರದಾಯದ ಮನಸ್ಥಿತಿಯ ಕಾರಣಕ್ಕಾಗಿ ಒಮ್ಮೆ ಬಾಬ್ರಿ ಮತ್ತೊಮ್ಮೆ ದದ್ರಿಯ ಹೆಸರಿನಲ್ಲಿ ಸತ್ತವರ ಮನೆಯವರೂ ಕೂಡಾ ಅತ್ತಿರಬಹುದು. ತಾವು ಧ್ವಜವಾಹಕರಾಗಿರುವ ಗಂಗೆ ಮತ್ತು ದಂಗೆ ರಾಜಕೀಯದಿಂದಲೂ ಹಲವು ಜನರು ಭಯಭೀತರಾಗಿರಬಹುದು. ಒಂದು ವೇಳೆ ತಾವು ಇವರೊಳಗಿನ ಭಯ ಹಾಗೂ ನೋವನ್ನು ಅರಿತಿರುತ್ತಿದ್ದರೆ, ಇವತ್ತು ನಿಮ್ಮ ಕಣ್ಣೀರು ನಮಗೆ ಅರ್ಥವಾಗುತ್ತಿತ್ತು. ಇವತ್ತು ತಾವು ವಿಚಲಿತರಾಗಿದ್ದೀರಿ. ಯಾವ ವಿಚಾರಧಾರೆಗಳಿಗೆ ಜೀವನ ಸವೆಸಿದಿರೋ, ಯಾರಿಗಾಗಿ ರಾಜಕೀಯ ವೇದಿಕೆ ಸಿದ್ಧ ಪಡಿಸಿ ಕೊಟ್ಟಿರೋ, ಅವರೇ ಇವತ್ತು ನಿಮ್ಮ ಜೊತೆ ನಿಲ್ಲುವುದು ಬಿಡಿ, ನಿಮ್ಮ ನೆರಳನ್ನೂ ಅಸ್ಪ್ರಶ್ಯವಾಗಿ ಕಾಣುತ್ತಿದ್ದಾರೆ. ಆದರೆ ತೊಗಾಡಿಯಾಜೀ… ಏನನ್ನು ಬಿತ್ತುತ್ತೀರೋ, ಅದನ್ನೇ ಪಡೆಯುವಿರಿ.

ಹರೇನ್ ಪಾಂಡ್ಯಾ ಹತ್ಯೆಯ ವಿಷಯದಲ್ಲಿ ತಾವು ಸುಮ್ಮನೆ ಇರದೇ ಇರುತ್ತಿದ್ದರೆ… ಸಂಜಯ್ ಜೋಶಿಯ ಮಾನ ಹಾನಿಯ ವಿರುದ್ಧ ಧ್ವನಿ ಎತ್ತಿದ್ದಿದ್ದರೆ… ಬಹುಷ ಇವತ್ತು ತಾವು ಒಬ್ಬಂಟಿಯಾಗಿರುತ್ತಿರಲಿಲ್ಲ. ಅರೇ ರಾಮ ರಥದ ಸಾರಥಿ, ಹಿಂದುತ್ವದ ದೀವಟಿಕೆಯಾಗಿದ್ದ ಲಾಲ್ ಕೃಷ್ಣ ಅಡ್ವಾಣಿಯವರ ವಿರುದ್ಧದ ರಾಜಕೀಯದ ವಿರೋಧವಾಗಿ ತಮ್ಮ ಹಿಂದುತ್ವ ಎಚ್ಚೆತ್ತು ಕೊಂಡಿರಲಿಲ್ಲ. ಕಾರಣ ಅದೇ… ಮೂಗು ಹಾಗೂ ಬೆನ್ನುಮೂಳೆ ಇಲ್ಲದ ನಪುಂಸಕ ಪೀಳಿಗೆಯನ್ನು ಸೃಷ್ಟಿಸುವ ಪಾಪವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡಿದೆಯೋ, ಅದನ್ನೇ ತಾವು ಅನುಭವಿಸುತ್ತಿದ್ದೀರಿ.

ತೊಗಾಡಿಯಾ ಸಾಹೇಬರೇ.. ಒಂದು ಕಡೆ ಓರ್ವ ಹಿಂದೂ ಹೃದಯ ಸಾಮ್ರಾಟ ಅಳುತ್ತಾನೆ ಹಾಗೂ ಇನ್ನೊಂದು ಕಡೆ ಓವೈಸಿ ಆರಾಮವಾಗಿ ಮುಗುಳ್ನಗುತ್ತಾನೆ, ತಾವು ಇದು ಯಾವ ಹಿಂದೂವಾದಿ ಸರಕಾರವನ್ನು ಮಾಡಿದ್ದೀರಿ ಎಂದು ನನಗೆ ಅರ್ಥವಾಗುತ್ತಿಲ್ಲ. ಇದೆಂತಹಾ ವಿಡಂಬಣೆಯಾಗಿದೆ… ಯಾವ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಸುರಕ್ಷಿತರಾಗಿದ್ದ ನಾಯಕರು, ಅವರೇ ರಚಿಸಿದ ಬಿಜೆಪಿ ಸರಕಾರದಲ್ಲಿ ಭಯಭೀತರಾಗಿದ್ದಾರೆ. ಇದೆಂತಹಾ ವಿರೋಧಾಭಾಸವಾಗಿದೆ… ಕಾಂಗ್ರೆಸ್ ಸರಕಾರದ ಕಾಲದಲ್ಲಿ ಮೋಹನ್ ಭಾಗವತ್ ನಿರ್ಭಯವಾಗಿ ತಿರುಗಾಡುತ್ತಿದ್ದರು, ಅದರೆ ಮೋದಿ ಸರಕಾರ ಬರುತ್ತಲೇ ಝಡ್ ಪ್ಲಸ್ ಭದ್ರತೆಯೊಳಗೆ ನುಸುಳಿಕೊಂಡಿದ್ದಾರೆ. ಗಡಿಯಾರದ ಮುಳು ಉಲ್ಟಾ ತಿರುಗಲು ಆರಂಭಿಸಿದೆ ಎಂದು ನನಗನ್ನಿಸುತ್ತದೆ. ಯಾವ ಕಾಂಗ್ರೆಸನ್ನು ತಾವು ಹಿಂದೂ ವಿರೋಧಿ ಎಂದು ಹೇಳುತ್ತಿದ್ದೀರೋ, ಅದೇ ಕಾಂಗ್ರೆಸ್ ನಾಯಕ ಅರ್ಜುನ್ ಭಾಯಿ ಮೋಡ್ವಡಿಯಾ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲು ತಮ್ಮನ್ನು ಭೇಟಿಯಾಗಲು ಬಂದಿದ್ದರು. ಮಾಧ್ಯಮ ಹಾಗೂ ಸಾಮಾಜಿಕ ತಾಣಗಳಲ್ಲಿ ಕಥಾಕಥಿತ ಹಿಂದುತ್ವದ ವಾಂತಿ ಮಾಡುತ್ತಿದ್ದ ತಮ್ಮ ಸಂಘಿ ಗ್ಯಾಂಗ್ ನಿಮ್ಮ ಕೈ ಬಿಟ್ಟಿದೆ. ನಿಮ್ಮೊಂದಿಗೆ ಸೈದಾಂತಿಕ ವಿರೋಧದ ಆಚೆಗೂ ಅರ್ಜುನ್ ಭಾಯಿ ಮೋಡ್ವಡಿಯಾ ನಿಮ್ಮನ್ನು ಭೇಟಿಯಾಗಿರುವುದು, ಕಾಂಗ್ರೆಸ್ ತನ್ನ ಸಂವಿಧಾನ ಮೌಲ್ಯಗಳನ್ನು ಎತ್ತಿ ಹಿಡಿಯಲು ಎಷ್ಟು ಗಂಭೀರವಾಗಿದೆ ಎಂದು ತೋರಿಸುತ್ತದೆ. ನಾವು ಯಾವ ರಾಜಕೀಯ ಭಯದ ಬಗ್ಗೆ ಮಾತನಾಡುತ್ತಿದೇವೋ, ಅದೇ ಇದಾಗಿತ್ತು ಎಂದು ಸಂಕೇತ ನೀಡಲು ಬಂದಿದ್ದರು. ಧರ್ಮದ ಜಗಳ ಬಿಟ್ಟು ಪ್ರಜಾಪ್ರಭುತ್ವವನ್ನು ಉಳಿಸುವ ಅಭಿಯಾನದಲ್ಲಿ ತಾವು ಕಣ್ಣೀರು ಹಾಕುವ ಬದಲು ಹೋರಾಡುವುದಾದರೆ ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಲು ಬಂದಿದ್ದರು.

ಯಾವ ಹಾರ್ದಿಕ ಪಟೇಲ್ ನ ಬೆನ್ನಿಗೆ ನಿಲ್ಲಲ್ಲಿಲ್ಲವೋ, ಯಾವ ಪಾಟಿದಾರ್ ಯುವಕರ ಸ್ಥಿತಿಗೆ ಎರಡು ಹನಿ ಕಣ್ಣೀರು ಹಾಕಿಲ್ಲ, ಆದರೂ ಹಾರ್ದಿಕ್ ತಮ್ಮೊಂದಿಗೆ ಸಂವೇದನೆ ಹಂಚಿಕೊಳ್ಳಲು ತಲುಪಿದ. ನಿಮ್ಮನ್ನು ಕೊಲ್ಲಲು ಷಡ್ಯಂತ್ರ ರಚಿಸುವವರ ವಿರುದ್ಧ ಯಾವ ರೀತಿ ಹೋರಾಡಬೇಕು ಎಂದು ಹಾರ್ದಿಕ್ ಚೆನ್ನಾಗಿ ಅರಿತಿದ್ದಾನೆ. ಸಂಘರ್ಷವನ್ನು ಮೈದಾನದಿಂದ ಓಡಿ ಹೋಗಿ ಅಲ್ಲ ಬದಲಾಗಿ ಮೈದಾನದಲ್ಲಿ ಹೆಡೆಮುರಿ ಕಟ್ಟಿ ಮಾಡಲಾಗುತ್ತದೆ ಎಂದು ಹೇಳಲು ಬಂದಿದ್ದ. ಸೋತು ಹೋಗಿರುವ ಆಟವನ್ನು ಹೇಗೆ ಗೆಲ್ಲಬೇಕೆಂದು ತೋರಿಸಲು,  ರಾಜಕೀಯವಾಗಿ ಬಳಸಿ ನಂತರ ಮೂಲೆಗೆ ಎಸೆದು ಮುಗಿಸಿ ಬಿಡುವ ಮೋದಿ ಹಾಗೂ ಅಮಿತ್ ಶಾ ರ ಚದುರಂಗದ ಆಟದಲ್ಲಿ ಸೋತು ಸುಣ್ಣವಾಗಿರುವ ವಂಜಾರ ಸಾಹೇಬರೂ ಕೂಡಾ ನಿಮ್ಮನ್ನು ಭೇಟಿಯಾದರು. ಇದನ್ನು ತಾವು ಅರಿತುಕೊಳ್ಳಿ. ಇಲಿಯಂತೆ ಜೀವಿಸುವುದಕ್ಕಿಂತ ಹುಲಿಯಂತೆ ಸಾಯುವುದೇ ಲೇಸು ಎಂಬ ಸಂಕೇತ ನೀಡಲು ಈ ಮೂರು ಬೇರೆ ಬೇರೆ ಕ್ಷೇತ್ರದಲ್ಲಿನ ಜನರು ಬಂದಿದ್ದರು.

ತೊಗಾಡಿಯಾಜಿ… ಇದು ತಮ್ಮ ಎರಡನೇ ಜೀವನ ಎಂದು ಒಪ್ಪುತ್ತೇನೆ. ನನ್ನ ಸಲಹೆ ಏನೆಂದರೆ, ತಾವು ಒಂದು ಜೀವನವನ್ನು ಹಿಂದುವಾಗಿ ಕಳೆದಿರಿ. ಈ ಎರಡನೇ ಜೀವನವನ್ನು ತಾವು ಭಾರತೀಯನಾಗಿ ಜೀವಿಸಿ. ಮುಸ್ಲೀಮರ ವಿರುದ್ಧ ಅಲ್ಲ ಬದಲಾಗಿ ಮುಸ್ಲೀಮರನ್ನು ಜತೆಗೂಡಿಸಿಕೊಂಡು ದೇಶದ ಮೇಲೆ ಅಪಾಯವಾಗಿರುವ ಶತ್ರುಗಳ ವಿರುದ್ಧ ಸ್ವಾತಂತ್ರ್ಯದ ಸಂಗ್ರಾಮ ಮಾಡಿ. ಸಂಘಿಯಾಗಿರುವ ಕಾರಣ ಬ್ರಿಟೀಷರ ವಿರುದ್ಧ ಹೋರಾಡಿರದ ಕಳಂಕ ತಮ್ಮ ಹಣೆಗೆ ತಗಲಿರುವುದನ್ನು ತೊಳೆದು ಸ್ವಚ್ಚಗೊಳಿಸಲು ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದು ಸಿಗಲಾರದು. ಇದು ನೀವು ಮಾಡುವುದೇ ಆದರೆ ನಾವು ಮತ್ತೊಮ್ಮೆ ನಿಮಗೆ ನಮ್ಮ ಹೃದಯದಲ್ಲಿ ಜಾಗ ಕೊಡುವೆವು ಎಂಬ ಮಾತುಕೊಡುತ್ತೇವೆ.

ಮತ್ತೊಮ್ಮೆ ರಾಜೇಶ್ ಠಾಖರೆಯ ಜೈ ಶ್ರೀರಾಮ್ ಸ್ವೀಕಾರ ಮಾಡಿ…

ಆಡಿಯೋ / ವಿಡಿಯೋ ಕೇಳಿ:

 

 

Share this post
0Shares

Check Also

ಕೇಜ್ರಿವಾಲ್ ರ ಭೇಟಿಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ನಿರಾಕರಣೆ!

ಸುದ್ದಿವಾಹಿನಿ ಡಾಟ್ ಕಾಂ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾಗಲು ದಿಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್ ರವರು ಅನುಮತಿ …

Leave a Reply

Your email address will not be published.

Blue Waves Media