Home / ತಂತ್ರಜ್ಞಾನ / ವಾಟ್ಸ್ಯಾಪ್ ಬಳಕೆದಾರರಿಗೆ ಸಂತಸದ ಸುದ್ದಿ; ಇನ್ನು ಮೆಸೆಜ್ ಕಳುಹಿಸಿದ ನಂತರವೂ ಡಿಲೀಟ್ ಮಾಡಬಹುದಾಗಿ

ವಾಟ್ಸ್ಯಾಪ್ ಬಳಕೆದಾರರಿಗೆ ಸಂತಸದ ಸುದ್ದಿ; ಇನ್ನು ಮೆಸೆಜ್ ಕಳುಹಿಸಿದ ನಂತರವೂ ಡಿಲೀಟ್ ಮಾಡಬಹುದಾಗಿ

ಸಾಮಾಜಿಕ ತಾಣಗಳಲ್ಲೊಂದ್ದಾದ ವ್ಯಾಟ್ಸಪ್ ಬಳಕೆದಾರರಿಗೆ ಅತಿ ಹೆಚ್ಚು ಚಿಂತೆಯ ವಿಷಯವನ್ನು ವಾಟ್ಸ್ಯಾಪ್ ಬಗೆಹರಿಸಿ ನಿರಾಳತೆ ನೀಡಿದೆ.

ವಾಟ್ಸ್ಯಾಪ್ ಬಳಸುವ ಸಮಯದಲ್ಲಿ ನಮ್ಮ ಕೆಲವೊಂದು ಪರ್ಸನಲ್ ಮೆಸೆಜ್ ಗಳು, ಅಥವಾ ನಮ್ಮ ಫ್ಯಾಮಿಲಿಯ ಪರ್ಸನಲ್ ಫೊಟೊಗಳು ಕೈ ತಪ್ಪಿ ಇತರ ಮೊಬೈಲ್ ಗೆ ಹೋಗಿರುವ ಘಟನೆಗಳು ತುಂಬಾ ನಡೆದಿದೆ. ಅದರಲ್ಲೂ ಕೆಲವರು ಕೈ ತಪ್ಪಿ ತಮಗೆ ಬಂದ ಇತರರ ಫ್ಯಾಮಿಲಿ ಫೋಟೊಗಳನ್ನು ದುತ್ರ್ಬಳಕೆ ಮಾಡಿರುವುದನ್ನು ನಾವು ಕೇಳುತ್ತಿದ್ದೇವೆ. ತೀರಾ ವ್ಯಯ್ಯಕ್ತಿಕವಾದ ನಮ್ಮ ಫೊಟೊ ಅಥವಾ ಸಂದೇಶಗಳು ಇತರರಿಗೆ ಅಥವಾ ಪಬ್ಲಿಕ್ ಗ್ರೂಪ್ ಗೆ ಹೋದ ನಂತರ ಅದನ್ನು ವಾಪಾಸು ಪಡೆಯುವಂತಿರಲಿಲ್ಲ. ಅದಕ್ಕಾಗಿ ನಂತರ ಆ ವ್ಯಕ್ತಿಗಳಿಗೆ ಕರೆ ಮಾಡಿ ಆ ಮೆಸೆಜ್ ಅಥವಾ ಫೋಟೊವನ್ನು ಡಿಲೀಟ್ ಮಾಡಲು ಮನವಿ ಮಾಡುವ ಪ್ರಯತ್ನವೂ ನಡೆಯುತ್ತಿತ್ತು. ಇಂತಹಾ ಮುಜುಗರಕ್ಕೊಳಗಾಗುವ ಸನ್ನಿವೇಶದಿಂದ ವಾಟ್ಸ್ಯಾಪ ತನ್ನ ಹೊಸ ಫೀಚರ್ಸ್ ಮೂಲಕ ನಿಟ್ಟುಸಿರು ಬಿಡುವಂತೆ ಮಾಡಿದೆ.

ವಿಧಾನ:
ಮೊದಲು ನಿಮ್ಮ ವಾಟ್ಸ್ಯಾಪ್ ಅಪ್ಡೇಟ್ ಆಗಿದೆಯೇ ಎಂದು ನೋಡಿ ಇಲ್ಲವಾದಲ್ಲಿ, ಪ್ಲೇ ಸ್ಟೋರ್ ಮೂಲಕ ಅಪ್ಡೇಟ್ ಮಾಡ್ಕೊಳ್ಳಿ. ನಂತರ ಕೈ ತಪ್ಪಿ ತಾವು ಕಳುಹಿಸಿರುವ ಮೆಸೆಜ್ ಮೇಲೆ ಒತ್ತಿ ಸೆಲೆಕ್ಟ್ ಮಾಡಿದಾಗ ಮೇಲ್ಭಾಗದಲ್ಲಿ ಡಿಲಿಟ್ ಐಕಾನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ತಾವು ಕಳುಹಿಸಿರುವ ಮೆಸೆಜ್ ಎರಡೂ ಮೋಬೈಲ್ ಗಳಂದ ಡಿಲೀಟ್ ಆಗುತ್ತದೆ. ಇಲ್ಲಿ ಇನ್ನೊಂದು ಮುಖ್ಯಾವಾದ ನಿರಾಳತೆ ಎಂದರೆ, ತಾವು ಕಳುಹಿಸಿರುವ ಯಾವುದಾದ್ರೂ ಫೋಟೊವನ್ನು ಸ್ವೀಕರಿಸಿದವರು ಡೌನ್ ಲೋಡ್ ಮಾಡಿಕೊಂಡಿದ್ದರೂ ಕೂಡಾ ಈ ವಿಧಾನ ಅನುಸರಿಸುವ ಮೂಲಕ ಆ ಫೋಟೊ ಡಿಲೀಟ್ ಮಾಡ ಬಹುದಾಗಿದೆ. ಆಶ್ ಫೋಟೊವನ್ನು ಅವರ ಗ್ಯಾಲರಿಯಿಂದಲೇ ಡಿಲೀಟ್ ಮಾಡಿ ಬಿಡುತ್ತದೆ. ನಿಜವಾಗಿಯೂ ವಾಟ್ಸ್ಯಪ್ ಬಲುದೊಡ್ಡ ತಲೆನೋವನ್ನು ಹೊಡೆದೋಡಿಸಿದೆ ಅಲ್ವೇ…

ಈ ಉಪಯುಕ್ತ ಸುದ್ದಿಯನ್ನು ಶೇರ್ ಮಾಡಿ ನಿಮ್ಮ ಪ್ರೀತಿ ಪಾತ್ರರನ್ನು ಸುರಕ್ಷಿತವಾಗಿಸಿರಿ.

Share this post
0Shares

Check Also

ದುಬೈ ಚಾಲಕರೇ ಎಚ್ಚರ! ಕಾರಿನೊಳಗೆ ಏನು ಮಾಡುತ್ತಿದ್ದಿರೆಂದು ಕಂಡು ಹಿಡಿಯಲಿದೆ ಹೊಸ ಕ್ಯಾಮೆರ

ದುಬೈ: ಸಂಯುಕ್ತ ಅರಬ್ ಸಂಸ್ಥಾನದ ಭಾಗವಾಗಿರುವ ದುಬೈಯಲ್ಲಿನ ಕಾರು ಚಾಲಕರ ಸಮಸ್ಯೆಯನ್ನು ಹೊಸ ಕ್ಯಾಮೆರಾ ಹೆಚ್ಚಿಸಲಿದೆ. ದುಬೈ ಪೊಲೀಸರು ತಮ್ಮ …

Leave a Reply

Your email address will not be published.

Blue Waves Media