Home / ಕ್ರೀಡೆ / ಪ್ರತಿಯೊಬ್ಬ ವಿಂಡೀಸ್ ಆಟಗಾರನಿಗೆ ಶೇ.70ಕ್ಕೂ ಹೆಚ್ಚು ಹಣ ಪಾವತಿಸಲಿರುವ ಪಾಕಿಸ್ತಾನ!

ಪ್ರತಿಯೊಬ್ಬ ವಿಂಡೀಸ್ ಆಟಗಾರನಿಗೆ ಶೇ.70ಕ್ಕೂ ಹೆಚ್ಚು ಹಣ ಪಾವತಿಸಲಿರುವ ಪಾಕಿಸ್ತಾನ!

ಸುದ್ದಿವಾಹಿನಿ ಡಾಟ್ ಕಾಂ: ಪ್ರತಿಯೊಬ್ಬ ವೆಸ್ಟ್ ಇಂಡಿಸ್ ಆಟಗಾರನಿಗೆ ಸಧ್ಯ ಪಡೆಯುತ್ತಿರುವ ಸಂಭಾವನೆಗಿಂತ ಶೇಖಡಾ 70 ಕ್ಕೂ ಹೆಚ್ಚು ಸಂಭಾವನೆಯನ್ನು ಪಾಕಿಸ್ತಾನ ಕ್ರಿಕೆಟ್ ಕೌನ್ಸಿಲ್ ನೀಡಲಿದೆ.

ಪ್ರಸಕ್ತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್ (PSL) ಮುಗಿದ ನಂತರ ಎಪ್ರಿಲ್ ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಕರಾಚಿಯಲ್ಲಿ ನಡೆಯಲಿರುವ ಮೂರು T20 ಸರಣಿಗಾಗಿ ವೆಸ್ಟ್ ಇಂಡಿಸ್ ತಂಡವು ಹೊರಡಲಿದೆ. ಈ ಸರಣಿಯಲ್ಲಿ ಭಾಗವಹಿಸುವ ಪ್ರತಿಯೋರ್ವ ವಿಂಡೀಸ್ ಸಧ್ಯ ಪಡೆಯುತ್ತಿರುವ ಸಂಭಾವನೆಯ ಶೇ.70 ರಷ್ಟು ಅಥವಾ ಅದಕ್ಕೂ ದುಪ್ಪಟ್ಟ ಸಂಭಾವನೆ ಪಡೆಯಲಿದ್ದಾರೆ.

ಹೊಸ ಅಪ್ಡೇಟ್ ಗಳಿಗಾಗಿ ಕೆಳಗಿನ ಲಿಂಕ್ ತೆರೆದು  ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ

https://www.facebook.com/Suddivahininews/

ಈ ಬೃಹತ್ ಮೊತ್ತದ ಸಂಭಾವನೆಯ ಬಗ್ಗೆ ವಿಂಡೀಸ್ ತಂಡದ CEO ಆಗಿರುವ ಜಾನಿ ಗ್ರೇವ್ ರವರು ಪ್ರತಿಕ್ರಿಸುತ್ತಾ, ಪಾಕಿಸ್ತಾನವು ತಮ್ಮ ನೆಲದಲ್ಲಿ ಹೆಚ್ಚೆಚ್ಚು ಕ್ರಿಕೆಟ್ ಪಂದ್ಯಗಳನ್ನು ಆಡಿಸಲು ಬಯಸುತ್ತಿದೆ. ಮತ್ತೆ ಪಾಕಿಸ್ತಾನದಲ್ಲಿ ಕ್ರಿಕೆಟ್ ದಿನಗಳನ್ನು ಮರಳಿ ತರಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ ತಂಡಕ್ಕೆ ನಮ್ಮದೊಂದು ಸಹಾಯ ಹಸ್ತದಂತೆ ನಮ್ಮ ತಂಡವು ಪಾಕಿಸ್ತಾನದಲ್ಲಿ ಆಡಲಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಪಾವತಿಸಿರುವ ಸಂಪೂರ್ಣ ಮೊತ್ತವನ್ನು ಸದುಪಯೋಗಿಸಿಕೊಳ್ಳಲಾಗುವುದು. ವಿಂಡೀಸ್ ತಂಡವು ಕೇವಲ ಹಣಕ್ಕಾಗಿ ಆಡುತ್ತಿಲ್ಲ ಬದಲಾಗಿ, ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಹಬ್ಬ ಆರಂಭವಾಗಲಿ ಎಂಬ ನಿಟ್ಟಿನಲ್ಲಿನ ಸಹಾಯ ಹಸ್ತವಾಗಿದೆ ಎಂದರು.

Share this post
72Shares

Check Also

ಅತೀ ಹೆಚ್ಚು ಬಾರಿ ರನ್ನೌಟ್ ಆದ ಐವರು ಆಟಗಾರರ ಪಟ್ಟಿ ಇಲ್ಲಿದೆ

ಸುದ್ದಿವಾಹಿನಿ ಡಾಟ್ ಕಾಂ: ವೀರೆಂದ್ರ ಸೆಹ್ವಾಗ್ ಅಥವ ಕ್ರಿಸ್ ಗೇಲ್ ರಂತಹಾ ಆಟಗಾರರು ಬೌಂಡರಿ ಸಿಕ್ಸರ್ ಮುಲಕ ರನ್ ಗಳ …

Leave a Reply

Your email address will not be published.

HOME
Blue Waves Media